2023-07-03 06:46:58 by jayusudindra
This page has been fully proofread once and needs a second look.
ಇದೊಂದು ಜಾನಪದ ತಾಳ. ಇದರಲ್ಲಿ ಒಂದು ದ್ರುತ,
ಖಂಡಲಘು, ತಿಶ್ರಲಘುವಿದೆ. ಇದರ ಒಂದಾರ್ವತಕ್ಕೆ ೧೦ ಅಕ್ಷರಕಾಲ
ತಾಳದಲ್ಲಿ ಜಕ್ಕಿನಿದರುಗಳಿವೆ.
೨೧೦
ಕುರಟ್ಟ ಆಟ್ಟಂ
ಕೇರಳದ ಒಂದು ಬಗೆಯ ನೃತ್ಯ. ಇದರಲ್ಲಿ ಕೊರವಂಜಿಯ
ಪಾತ್ರಗಳಿವೆ.
ಕುರವೈಕೂತ್ತು
ಇದು ತಮಿಳುನಾಡಿನ ಒಂದು ಜಾನಪದ ನೃತ್ಯ, ೭-೯
ಮಂದಿ ಹೆಣ್ಣು ಮಕ್ಕಳು ಅಥವಾ ಸ್ತ್ರೀಯರು ಪರಸ್ಪರ ಕೈ ಹಿಡಿದುಕೊಂಡು
ಇದನ್ನಾಡುತ್ತಾರೆ. ಸಂಭವಿಸಬಹುದಾದ ಅಪಾಯ ಅಧವಾ ಅಶುಭದ
ನಿವಾರಣೆಗಾಗಿ ಈ ಕುಣಿತವನ್ನು ಕುಣಿಯುವರು.
ಕುರುದೇಶ್ಯ
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯು ಒಂದು
ಜನ್ಯರಾಗ,
ಆ
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಕುರುಳ
ಇದು ಪಂಚದಶ ಗಮಕಗಳಲ್ಲಿ ಒಂದು ವಿಧವಾದ ಗಮಕ, ಒಂದು
ಸ್ವರಸ್ಥಾನದಿಂದ ಅದರ ಮೇಲಿನ ಸ್ವರಸ್ಥಾನದ ಸ್ವರವನ್ನುಂಟುಮಾಡುವುದು.
ಕುರಂ
ಇದೊಂದು ಜನಪದ ಸಂಗೀತದರಾಗ, ಇದನ್ನು ಗುಡ್ಡಗಾಡಿನ
ಪ್ರದೇಶದ ಜನರು ಹಾಡುತ್ತಾರೆ. ಇದು ಹೆಚ್ಚು ಕಡಿಮೆ
ಕುರಂಜಿರಾಗದಂತಿದೆ.
ಉದಾ. -ಮಾನಾಕ್ಷಿ ಕುರಂ, ದೌಪದಿ ಕುರಂ
ಕುರಂಜಿ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ,
ಸ ನಿ ಸ ರಿ
ಸ ನಿ ಸ ರಿ ಗ ಮ ಪ ದ
ಅ: ದ ಪ ಮ ಗ ರಿ ಸ ನಿ ಸ
ಉಪಾಂಗ ಮತ್ತು ಧೈವತಾಂತ್ಯರಾಗ, ಸರ್ವಸ್ವರಗಮಕವರಿಕರಕ್ತಿರಾಗ, ಮತ್ತೊಂದು
ಮತದಂತೆ ಇದರ ಆರೋಹಣಾವರೋಹಣಗಳು ಈ ರೀತಿ ಇವೆ.
ಸ ನಿ ಸ ನಿ ದ ದ ಪ ಮ ಗ ರಿ ಸಾ
ಇದು ಪುರಾತನ ರಾಗ, ಜಾನಪದ ಸಂಗೀತದ ಕುರಂ ರಾಗದಿಂದ ಬಂದಿದೆ. ಸಂಗೀತ
ರತ್ನಾಕರ ಮತ್ತು ಸಂಗೀತಮಕರಂದವೆಂಬ ಗ್ರಂಥಗಳಲ್ಲಿ ಉಕ್ತವಾಗಿದೆ. ಲಾಲಿಹಾಡು,
ಮದುವೆಹಾಡು, ನಾಮಾವಳಿಗಳು ಈ ರಾಗದಲ್ಲಿ ವಿಶೇಷವಾಗಿವೆ. ಈ ರಾಗದ ಕೆಲವು
ಪ್ರಸಿದ್ಧ ರಚನೆಗಳು.