This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕುರುರುಂಪೆ ಇದೊಂದು ಜಾನಪದ ತಾಳ. ಇದರಲ್ಲಿ ಒಂದು ದ್ರುತ,
ಖಂಡಲಘು, ತಿಶ್ರಲಘುವಿದೆ. ಇದರ ಒಂದಾರ್ವತಕ್ಕೆ ೧೦ ಅಕ್ಷರಕಾಲ
ತಾಳದಲ್ಲಿ ಜಕ್ಕಿನಿದರುಗಳಿವೆ.
 
೨೧೦
 
ಕುರಟ್ಟ ಆಟ್ಟಂ-ಕೇರಳದ ಒಂದು ಬಗೆಯ ನೃತ್ಯ. ಇದರಲ್ಲಿ ಕೊರವಂಜಿಯ
ಪಾತ್ರಗಳಿವೆ.
 
ಕುರವೈಕೂತ್ತು-ಇದು ತಮಿಳುನಾಡಿನ ಒಂದು ಜಾನಪದ ನೃತ್ಯ, ೭-೯
ಮಂದಿ ಹೆಣ್ಣು ಮಕ್ಕಳು ಅಥವಾ ಸ್ತ್ರೀಯರು ಪರಸ್ಪರ ಕೈ ಹಿಡಿದುಕೊಂಡು
ಇದನ್ನಾಡುತ್ತಾರೆ. ಸಂಭವಿಸಬಹುದಾದ ಅಪಾಯ ಅಧವಾ ಅಶುಭದ
ನಿವಾರಣೆಗಾಗಿ ಈ ಕುಣಿತವನ್ನು ಕುಣಿಯುವರು.
 
ಕುರುದೇಶ್ಯ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯು ಒಂದು
 
ಜನ್ಯರಾಗ,
 
ಆ ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 
ಕುರುಳ-ಇದು ಪಂಚದಶ ಗಮಕಗಳಲ್ಲಿ ಒಂದು ವಿಧವಾದ ಗಮಕ, ಒಂದು
ಸ್ವರಸ್ಥಾನದಿಂದ ಅದರ ಮೇಲಿನ ಸ್ವರಸ್ಥಾನದ ಸ್ವರವನ್ನುಂಟುಮಾಡುವುದು.
 
ಕುರಂ-ಇದೊಂದು ಜನಪದ ಸಂಗೀತದರಾಗ, ಇದನ್ನು ಗುಡ್ಡಗಾಡಿನ
ಪ್ರದೇಶದ ಜನರು ಹಾಡುತ್ತಾರೆ. ಇದು ಹೆಚ್ಚು ಕಡಿಮೆ
 
ಕುರಂಜಿರಾಗದಂತಿದೆ.
 
ಕುರಂ ನ ಸಾಹಿತ್ಯವು ಪದ್ಯರೂಪದಲ್ಲಿದೆ. ಇವುಗಳಲ್ಲಿ ಕಥೆಗಳಿವೆ.
ಉದಾ. -ಮಾನಾಕ್ಷಿ ಕುರಂ, ದೌಪದಿ ಕುರಂ
 
ಕುರಂಜಿ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 
ಜನ್ಯರಾಗ,
 
ರಿ
 
ಸ ನಿ ಸ ರಿ ಗ ಮ ಪ ದ
ಅ: ದ ಪ ಮ ಗ ರಿ ಸ ನಿ ಸ
 
ಉಪಾಂಗ ಮತ್ತು ಧೈವತಾಂತ್ಯರಾಗ, ಸರ್ವಸ್ವರಗಮಕವರಿಕರಕ್ತಿರಾಗ, ಮತ್ತೊಂದು
ಮತದಂತೆ ಇದರ ಆರೋಹಣಾವರೋಹಣಗಳು ಈ ರೀತಿ ಇವೆ.
 
ಸಾ ರಿ ಗ ಮ ಗ ಮ ಪ ನಿ ನೀ ಸ
 
ಸ ನಿ ಸ ನಿ ದ ದ ಪ ಮ ಗ ರಿ ಸಾ
 
ಇದು ಪುರಾತನ ರಾಗ, ಜಾನಪದ ಸಂಗೀತದ ಕುರಂ ರಾಗದಿಂದ ಬಂದಿದೆ. ಸಂಗೀತ
ರತ್ನಾಕರ ಮತ್ತು ಸಂಗೀತಮಕರಂದವೆಂಬ ಗ್ರಂಥಗಳಲ್ಲಿ ಉಕ್ತವಾಗಿದೆ. ಲಾಲಿಹಾಡು,
ಮದುವೆಹಾಡು, ನಾಮಾವಳಿಗಳು ಈ ರಾಗದಲ್ಲಿ ವಿಶೇಷವಾಗಿವೆ. ಈ ರಾಗದ ಕೆಲವು
ಪ್ರಸಿದ್ಧ ರಚನೆಗಳು.