2023-07-03 06:11:21 by jayusudindra
This page has been fully proofread once and needs a second look.
ಪಾಶ್ಚಾತ್ಯ ಪದ್ಧತಿಗಿಂತ ಮೂರು ಶತಮಾನಗಳ ಹಿಂದೆಯೇ ರೂಢಿಯಲ್ಲಿತ್ತೆಂದು ಹೇಳ
ಬಹುದು. ಈ ಶಾಸನದಲ್ಲಿ ಸ್ವರದ ಒಂದು ಶುದ್ಧ ಮತ್ತು ಮೂರು ವಿಕೃತ ಸ್ವರೂಪ
ಗಳನ್ನು ಭರತನ ಧ್ರುವವೀಣೆ ಮತ್ತು ಚಲವೀಣೆಗೆ ಸಂಬಂಧಿಸಿದ ಪ್ರಯೋಗದ
ಆಧಾರದ ಮೇಲೆ ಕೊಡಲಾಗಿದೆ. ಷಡ್ಡದ ನಾಲ್ಕು ಬಗೆಯನ್ನು ಸ, ಸಿ, ಸು, ಸೆ
ಎಂದೂ, ರಿಷಭದ ನಾಲ್ಕು ಬಗೆಯನ್ನು ರ, ರಿ, ರು, ರೆ ಎಂದು ಸೂಚಿಸಲಾಗಿದೆ
ಮಹೇಂದ್ರವರ್ಮನಿಗೆ ಶ್ರುತಿಗಳು ೨೨ ಎಂದು ತಿಳಿದಿತ್ತು. ೨೮ ಶ್ರುತಿಗಳಲ್ಲಿ ೬
ಶ್ರುತಿಗಳು ಇತರ ಶ್ರುತಿಗಳ ಪುನರುಕ್ತಿಗಳಾಗುತ್ತವೆ. ಪಡ್ಡ ಗ್ರಾಮದ ಸ್ವರಗಳು
ನಿಯತ ಶ್ರುತಿಗಳಾಗಿರುವುದರಿಂದ ಶುದ್ಧ ಸ್ವರಸಪ್ತಕಗಳ ಅಂತರಗಳನ್ನು ಅನುಸರಿಸಿ
ಶುದ್ಧ ಸ್ವರ ಸಂಕೇತಗಳನ್ನು ಗೊತ್ತು ಮಾಡಿ ಇತರ ಶ್ರುತಿಗಳನ್ನು ತಾರ್ಕಿಕವಾಗಿ ಹಂಚಿ
ದ್ದಾನೆ. ಪ್ರತಿ ಮಧ್ಯಮವು ಶಾಸನದ ಏಳು ರಾಗಗಳಲ್ಲಿ ಶುದ್ಧ ಮಧ್ಯಮದ ಜೊತೆಗೆ
ಬರುತ್ತದೆ. ಇಲ್ಲಿ ಸೂಚಿಸಲಾಗಿರುವ ಸಂಗೀತವನ್ನು ಒಂದಾವರ್ತಕ್ಕೆ ೮ ಮಾತ್ರೆ
ಅಥವಾ ೭ ಮಾತ್ರೆಗಳಿರುವ ತಾಳದಲ್ಲಿ ಹಾಡಬಹುದು. ಇದಕ್ಕೆ ಸಮನಾದ ಒಂದು
ಸಪ್ತತಾಳಗೀತೆ ನಾಟರಾಗದ ( ಗಾನವಿದ್ಯಾದುರಂಧರ " ಎಂಬುದು. ಇದು ಧ್ರುವ
ತಾಳದಲ್ಲಿದ್ದರೂ ಮಠ, ರೂಪಕ, ರಂಪ, ತ್ರಿಪುಟ, ಆಟ ಮತ್ತು ಏಕತಾಳದಲ್ಲಿ
ಹಾಡಬಹುದು. ಶ್ಯಾಮಾಶಾಸ್ತ್ರಿಗಳ ಸಾವೇರಿರಾಗದ - ಶಂಕರಿಶಂಕುರು' ಎಂಬ ಕೃತಿ
ಯನ್ನು ರೂಪಕ ತಾಳ ಮತ್ತು ತಿಶ್ರಗತಿ ಆದಿತಾಳದಲ್ಲಿ ಹಾಡಬಹುದು. ದ್ವಿತಾಳ
ಪಲ್ಲವಿಗಳು ಇದಕ್ಕೆ ನಿದರ್ಶನ.
ಈ ಶಾಸನದ ಸಂಗೀತವು ಅಭ್ಯಾಸಗಾನಕ್ಕೆ ಸೇರಿದೆ. ವೀಣೆಯನ್ನು ನುಡಿಸುವ
ಕೌಶಲ್ಯವನ್ನು ಉತ್ತಮಗೊಳಿಸುವುದು ಇದರ ಉದ್ದೇಶ. ಇವು ಪುರಾತನ ಅಲಂಕಾರದ
ಮಾದರಿಗಳಾಗಿವೆ ಇಲ್ಲಿ ಉಪಯೋಗಿಸಿರುವ ಸ, ಸಿ, ಸು, ಸೆ ಸಂಕೇತಗಳು ಷಡ್ಡ
ಅ-ಏಕ, ಇ-ದ್ವಿ, ಉ-ತ್ರಿ, ಎಚತುಶ್ರುತಿ ಹೀಗೆ ಸಪ್ತ ಸ್ವರಗಳಲ್ಲಿಯೂ ೨೮
ಭೇದಗಳನ್ನು ಸೂಚಿಸುತ್ತವೆ. ಇವು ಪರಿವಾದಿ ಎಂಬ ವೀಣೆಯನ್ನು ಅನುಸರಿಸಿವೆ
ಎಂದು ಹೇಳಿದ್ದಾನೆ. ಇಂತಹ ವೀಣೆಯ ಶಿಲ್ಪವು ಹಳೇಬೀಡು ಮತ್ತು ಬೇಲೂರಿನಲ್ಲಿವೆ.
ಈ ಶಾಸನದ ಮುಖ್ಯಾಂಶಗಳು ಹೀಗಿವೆ :-
902
೧. ಮಧ್ಯಮಗ್ರಾಮ
೨.
೩.
೫.
೬.
ಸಾಧಾರಿತ
ಪಂಚಮ
ಕೈಶಿಕಿಮಧ್ಯಮ
ಕೈಶಿಕಿ
೫ ಸಾಲುಗಳು
೭ ಸಾಲುಗಳು
೪ ಸಾಲುಗಳು
೫ ಸಾಲುಗಳು
೪ ಸಾಲುಗಳು
೭ ಸಾಲುಗಳು