2023-07-03 06:12:30 by jayusudindra
This page has been fully proofread once and needs a second look.
ಇವು ತಾನಗಳ ರೂವದಲ್ಲಿವೆ. ತಾನದ ಪ್ರತಿ ಸ್ವರಗುಚ್ಛದಲ್ಲಿ
(ಚತುಷ್ಟಹಾರ ಸ್ವರಗ್ರಾಮಾಃ) (E. I. pp. 226-237).
ಬರೆಸಿದ ಕಾಲದಲ್ಲಿ ಸಂಗೀತವು ಉತ್ತರ ಮತ್ತು ದಕ್ಷಿಣಾದಿ ಎಂದು ವಿಭಾಗವಾಗಿರಲಿಲ್ಲ
ವಾದ್ದರಿಂದ ಇದು ಎರಡು ಪದ್ಧತಿಗಳಿಗೂ ಅನ್ವಯವಾಗುವಂತಹುದು.
ಮಹೇಂದ್ರವರ್ಮನಿಗೆ ಸಂಕೀರ್ಣಜಾತಿ ಎಂಬ ಬಿರುದಿತ್ತು. ಇದನ್ನು ಅವನು
ಮಿಶ್ರಜಾತಿಯವನೆಂದು ಅಪಾರ್ಧ ಮಾಡಿದ್ದಾರೆ. ದಕ್ಷಿಣಾದಿ ಸಂಗೀತ ಪದ್ಧತಿಯಲ್ಲಿ
ಲಘುಜಾತಿ ಭೇದದ ವಿಚಾರವು ಇತ್ತೀಚಿನದು. ಧ್ರುವ, ಮಠ್ಯ, ರೂಪಕ, ರಂಪ,
ತ್ರಿಪುಟ, ಆಟ ಮತ್ತು ಏಕತಾಳವೆಂಬ ಸಪ್ತತಾಳಗಳನ್ನು
ಪ್ರಯೋಗದಿಂದ ೩೫ ತಾಳಗಳಾಗಿ ಆಧುನಿಕ ಸಂಗೀತದಲ್ಲಿ ವಿಸ್ತರಿಸಲಾಗಿದೆ.
ಲಘುಜಾತಿಭೇದದ
noes
ತಾಳಗಳ ಪದ್ಧತಿಯು ಇದಕ್ಕಿಂತ ಹಿಂದಿನದು ಮತ್ತು ೩೫ ತಾಳಗಳ ಪದ್ಧತಿಯು ಐದು
ಶತಮಾನಗಳಿಗಿಂತ ಹಿಂದಿನದಲ್ಲ.
೧೦೮ ತಾಳಗಳ ಪದ್ಧತಿಯಲ್ಲಿ ಲಘುವಿಗೆ ಒಂದೇ
ಆಗಾಗ್ಗೆ ಖಂಡಲಘು ಮತ್ತು ತಿಶ್ರ
ಸಂಕೀರ್ಣ ಲಘುವಿನ ಬಳಕೆಯಂತೂ ಇಲ್ಲ.
ಸಂಕೀರ್ಣಜಾತಿ ಲಘುವನ್ನು (೯ ಅಕ್ಷರ ಕಾಲದ ಲಘು) ೭ನೆ ಶತಮಾನದ ಸಂಗೀತದ
ಚರಿತ್ರೆಗೆ ಸೇರಿಸುವುದು ಚರಿತ್ರೆಯ ದುರುಪಯೋಗ ಮಾಡಿದಂತೆ. ಪುರಾತನ ಕಾಲ
ದಲ್ಲಿ ರಾಗಕ್ಕೆ ಜಾತಿ ಎನ್ನುತ್ತಿದ್ದರು. ಭರತನು ಜಾತಿಗಳಿಗೆ ದಶಲಕ್ಷಣಗಳನ್ನು
ಹೇಳಿದ್ದಾನೆ. ಅವನು ರಾಗ ಎಂಬ ಪದವನ್ನು ಬಳಸಿಲ್ಲ. ರಾಮಾಯಣದಲ್ಲ
ರಾಗ ಎನ್ನುವ ಬದಲು ಜಾತಿ ಎಂದು ಹೇಳಿದೆ. ಕಾಳಿದಾಸನ ಕಾಲದಲ್ಲಿ ರಾಗ ಎಂಬ
ಪದವು ರೂಢಿಗೆ ಬಂದಿತು. ಮತಂಗನು ರಾಗವನ್ನು ವಿವರಿಸಿರುವವರಲ್ಲಿ ಮೊದಲಿಗನು;
ಇವನು ರಾಗಗಳನ್ನು ಶುದ್ಧ, ಛಾಯಾಲಗ ಮತ್ತು ಸಂಕೀರ್ಣ ಎಂದು ವರ್ಗೀಕರಣ
ಮಾಡಿದ್ದಾನೆ. ಆದ್ದರಿಂದ ಸಂಕೀರ್ಣಜಾತಿ ಎಂಬ ಅವನ ಬಿರುದು ಅವನು ಸಂಕೀರ್ಣ
ರಾಗಗಳಲ್ಲಿ ಅತ್ಯಂತ ಪ್ರವೀಣನಾಗಿದ್ದನು ಎಂದು ಸೂಚಿಸುತ್ತದೆ. ಬೇರೆ ರಾಗದ
ಛಾಯೆಯಿಲ್ಲದಿರುವುದು ಶುದ್ಧರಾಗ, ಇದರಂತೆ ಮೋಹನರಾಗವು ಶುದ್ಧರಾಗಕ್ಕೆ
ಇನ್ನೊಂದು ರಾಗದ ಛಾಯೆ ಇರುವುದು ಛಾಯಾಲಗರಾಗ,
ಸಂಕೀರ್ಣರಾಗವು ಒಂದು ಮಿಶ್ರರಾಗ.
ಕಂಡುಬರುತ್ತದೆ. ಉದಾಹರಣೆ : ದ್ವಿಜಾವಂತಿ, ಘಂಟಾ.
ಈ ಶಾಸನದಲ್ಲಿ ಹೇಳಿರುವ ಮೊಟ್ಟ ಮೊದಲನೆಯ ರಾಗ ಮಧ್ಯಮಗ್ರಾಮ ರಾಗ,
ಇದರ ಪ್ರಥಮ ಮೂರ್ಛನವು ಸೌವೀರ ಎಂಬ ಮಧ್ಯಮ ಮೂರ್ಛನವಾಗಿದೆ.
ಮಹೇಂದ್ರವರ್ಮನು ಮಧ್ಯಮಗ್ರಾಮ ರಾಗವನ್ನು ಪ್ರಥಮರಾಗವಾಗಿ ಆರಿಸಿಕೊಂಡಿರು
ವುದಕ್ಕೆ ಕಾರಣ ಅದು ಪುರಾತನ ತಮಿಳು ಸಂಗೀತದ ಶುದ್ಧ ಸಪ್ತಕವಾಗಿದೆ.
ಈ ಸ್ವರ
ಗಳ ಸಹಾಯದಿಂದ ಭಾರತೀಯ ಸಂಗೀತದ ದ್ವಾವಿಂಶತಿ ಶ್ರುತಿಗಳನ್ನು ಗೊತ್ತು
ಉದಾಹರಣೆ : ಸೌರಾಷ್ಟ್ರರಾಗ,
೨-೩ ರಾಗಗಳ ಛಾಯೆ
ಸಮನಾದ ಮೌಲ್ಯ ಅಂದರೆ ಚತುರಶ್ರವಿದೆ
ಲಘುವನ್ನು ಬಳಸುವುದುಂಟು.
೨೦೫
ನಾಲ್ಕು ಸ್ವರಗಳಿವೆ.
ಈ ಶಾಸನವನ್ನು