2023-07-02 12:54:23 by jayusudindra
This page has been fully proofread once and needs a second look.
ಸಾಹಿತ್ಯದ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ. ರಾಜಪ್ಪ ಕವಿರಾಯರ್ ಎಂಬ
ಹೆಸರನ್ನು ಈ ಕವಿಯ ಮನೆತನದ ಪ್ರತಿಯೊಬ್ಬ ಮೊಮ್ಮಗನಿಗೆ ಇಡುವ ಪದ್ಧತಿಯಿದೆ.
ಹಾಡನ್ನು ಹಾಡಿ ತಿರಿಕೂಟನಾಧರ್ ಅಧವಾ ಶಿವನ ಮೆರವಣಿಗೆಯನ್ನು ಚಿತ್ರಿಸುತ್ತಾನೆ.
ಮುಂದಿನ ದೃಶ್ಯಗಳಲ್ಲಿ ಬರುವ ಸಖಿಯರು ಶಿವನ ಹಿರಿಮೆ, ಮಹಿಮೆಗಳನ್ನು ವಿವರಿಸು
ತ್ತಾರೆ. ಮುಂದಿನ ದೃಶ್ಯದಲ್ಲಿ ನಾಯಕಿಯಾದ ವಸಂತವಲ್ಲಿಯು ಚೆಂಡಾಡುತ್ತಾ
ಪ್ರವೇಶಿಸುವಳು. ಸಖಿಯರು ಅವಳೊಂದಿಗೆ ಆಟದಲ್ಲಿ ಸೇರಿಕೊಳ್ಳುತ್ತಾರೆ.
ನಾಯಕಿಯು ದೂರದಿಂದ ಶಿವನ ಮೆರವಣಿಗೆಯನ್ನು ನೋಡಿ ಅವನನ್ನು ಮೋಹಿಸು
ತಾಳೆ. ಒಂದು ಒಳ್ಳೆಯ ಹಾಡಿನಲ್ಲಿ ಶಿವನ ಸೌಂದರ್ಯವನ್ನು ವರ್ಣಿಸುತ್ತಾಳೆ.
ಪ್ರೇಮಾತಿರೇಕದಿಂದ ಕುಸಿದು ಬೀಳುತ್ತಾಳೆ. ಸಖಿಯರು ಸಮಾಧಾನ ಪಡಿಸುತ್ತಾರೆ.
ಅವಳ ಕೋರಿಕೆಯಂತೆ ಒಬ್ಬಳು ಶಿವನ ಬಳಿಗೆ ಹೋಗಿ ಅಭಯದ ಸಂದೇಶವನ್ನು
ತರುತ್ತಾಳೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ಕೊರವಂಜಿಯೊಬ್ಬಳು ಬರುತ್ತಾಳೆ.
ತನ್ನ ಪ್ರಾಂತ್ಯದ ಪ್ರಕೃತಿ ಸೌಂದರ್ಯ, ಕುಟ್ರಾಲದ ಬೆಟ್ಟಗುಡ್ಡಗಳು, ಜಲಪಾತ
ಇತ್ಯಾದಿಗಳ ಸೊಬಗನ್ನು ವರ್ಣಿಸುತ್ತಾಳೆ ನಾಯಕಿಯ ಹಸ್ತವನ್ನು ನೋಡಿ ಅವಳ
ಭವಿಷ್ಯವನ್ನು ಕುರಿತು ವಸಂತವಲ್ಲಿಯ ಆಶೋತ್ತರಗಳು ಶೀಘ್ರವಾಗಿ ಈಡೇರುವವೆಂದು
ಹೇಳುತ್ತಾಳೆ. ಇದನ್ನು ಕೇಳಿ ಹರ್ಷಿತಳಾದ ನಾಯಕಿಯು ಅವಳಿಗೆ ಬೆಲೆಬಾಳುವ
ವಸ್ತುಗಳನ್ನು ಕೊಟ್ಟು ಪುರಸ್ಕರಿಸುತ್ತಾಳೆ.
ಕುಡುಕ್ಕತಾಳ
ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಒಂದು ಬಗೆಯ
ಎರಡು ದ್ರುತ ಮತ್ತು ಎರಡು ಲಘುಗಳು ಇದರ ಅಂಗಗಳು. ಇವರ
ಒಂದಾವರ್ತಕ್ಕೆ ೩ ಮಾತ್ರೆಗಳು ಅಥವಾ ೧೨ ಅಕ್ಷರಕಾಲ.
ಕು
ಇದು ಕುಡುಮಿಯಾ ಮಲೈ ಶಾಸನವನ್ನು
ಕುರಿತು ಬರೆದ ಒಂದು ಹಸ್ತಪ್ರತಿ
ಕುಡ ಪಂಚಮುಖಿ
ಪಂಚಮುಖವಾದ್ಯದ ಹೆಸರು.
೨೦೪
ಕುಡುಮಿಯಾ ಮಲೈ ಶಾಸನ
ತಮಿಳುನಾಡಿನ ಪುದುಕೋಟೆಯ ಒಂದು
ಸಣ್ಣಗುಡ್ಡದ ಬಂಡೆಯೊಂದರ ಮೇಲೆ ಸಂಗೀತ ಸಂಬಂಧವಾದ ಶಾಸನ ಒಂದಿದೆ.
ಇದನ್ನು ೭ನೆ ಶತಮಾನದಲ್ಲಿ ರುದ್ರಾಚಾರ್ಯನ ಶಿಷ್ಯನಾಗಿದ್ದ ೧ನೆ ಮಹೇಂದ್ರವರ್ಮ
ಪಲ್ಲವರಾಜನು ಕೆತ್ತಿಸಿದನು ಪುದುಕೋಟೆಯ ತಿರುಮಾಯಂನಲ್ಲಿರುವ ಮತ್ತೊಂದು
ಅಸಂಪೂರ್ಣ ಸಂಗೀತ ಶಾಸನ ಒಂದಿದೆ.
ಇದನ್ನು ಬಿಟ್ಟರೆ ಕುಡುಮಿಯಾ ಮಲೈ
ಶಾಸನವು ಇಡೀ ಭಾರತದಲ್ಲಿರುವ ಏಕೈಕ ಸಂಗೀತ ಶಾಸನ. ಇದರಲ್ಲಿ ಮತಂಗನ
ಬೃಹದ್ದೇಶಿಯನ್ನನುಸರಿಸಿ ಸಪ್ತ ಗ್ರಾಮಗಳಿಗೆ ಉದಾಹರಣೆಗಳನ್ನು ಕೊಟ್ಟಿರುವನು.
ಮಧ್ಯಮ ಗ್ರಾಮ, ಷಡ್ಡಗ್ರಾಮ, ಪಾಡವ, ಸಾಧಾರಿತ, ಪಂಚಮ, ಕೈಶಿಕಮಧ್ಯಮ