This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅನ್ನವರಪು ರಾಮಸ್ವಾಮಿ-
ಇವರು ಆಂಧ್ರದ ಪಶ್ಚಿಮ ಗೋದಾವರಿ

ಜಿಲ್ಲೆಯ ಏಲೂರು ತಾಲ್ಲೂಕಿನ ಸೋಮವರಪ್ಪಡು ಎಂಬ ಗ್ರಾಮದಲ್ಲಿ ಅನ್ನವರಸು

ಪೆಂಟಯ್ಯ ಎಂಬ ಹೆಸರಾಂತ ನಾದಸ್ವರ ವಿದ್ವಾಂಸರ ಪುತ್ರರಾಗಿ ೧೯೨೬ರಲ್ಲಿ

ಜನಿಸಿದರು. ತಮ್ಮ ಎಂಟನೆಯ ವಯಸ್ಸಿನಲ್ಲಿ ಮಗಂಟ ಜಗನ್ನಾಧಂ ಎಂಬುವರಲ್ಲಿ

ಸಂಗೀತವನ್ನು ಅಭ್ಯಾಸ ಮಾಡಿ ನಂತರ ಗಾಯಕಸಾರ್ವಭೌಮ ಪಾರುಪಲ್ಲಿ

ರಾಮಕೃಷ್ಣಯ್ಯಪಂತುಲುರವರಲ್ಲಿ ಪ್ರೌಢಶಿಕ್ಷಣ ಪಡೆದರು ಅವರ ಹಾಡು

ಗಾರಿಕೆಗೆ ಮೊಟ್ಟ ಮೊದಲ ಬಾರಿ (೧೯೪೮) ಪಿಟೀಲು ಪಕ್ಕವಾದ್ಯ ನುಡಿಸಿದರು.

ಅಲ್ಲಿಂದ ಮುಂದೆ ದಕ್ಷಿಣ ಭಾರತದ ಪ್ರಸಿದ್ಧ ಗಾಯಕರಿಗೆ ಪಕ್ಕವಾದ್ಯ ನುಡಿಸಿ

ಪ್ರಸಿದ್ಧರಾಗಿದ್ದಾರೆ. ಇವರ ಪಿಟೀಲುವಾದನದಲ್ಲಿ ನಾದಮುಷ್ಟಿ, ಇಂಪು, ತಂಪು
ಗಳಿವೆ.
ವಾದ್ಯರತ್ನ ಎಂಬ ಬಿರುದಾಂಕಿತರು, ಪ್ರಪಂಚ

ಸೀತಾರಾಮ್,

ಜೆ. ಎಸ್. ಶಾಸ್ತ್ರಿ, ಎ. ವಿ. ಎಸ್. ಕೃಷ್ಣರಾವ್ ಮುಂತಾದವರು ಇವರ ಪ್ರಮುಖ

ಶಿಷ್ಯರು.
 
ಗಳಿವೆ.
 

 
ಅನ್ನ ಲೀಲಾ
ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಹಂಸಲೀಲಾ
 

ಎಂಬ ಒಂದು ತಾಳ ವಿಶೇಷ.
 

 
ಅನಾಗತಗ್ರಹ-
ತಾಳವು ಪ್ರಾರಂಭವಾದ ನಂತರ ಕೃತಿ ಅಥವಾ ಅದರ

ಒಂದು ಭಾಗದ ಸಂಗೀತವು ಆರಂಭವಾಗುವುದಕ್ಕೆ ಕಾಲ ವ್ಯತ್ಯಾಸವು 1, 1, 2, 1

11, 12, ಅಕ್ಷರಕಾಲವಿರಬಹುದು. ಇದೇ ಅನಾಗತಗ್ರಹ.
 

 
ಅನಾಹತನಾದ
ಮಾನವ ದೇಹದ ಮೂಲಾಧಾರದಿಂದ ಹೊರಡುವ

ನಾದಕ್ಕೆ ಅನಾಹತನಾದವೆಂದು ಹೆಸರು. ಇದು ಯೋಗಿಗಳಿಗೆ ಮಾತ್ರ ಕೇಳಿಸುತ್ತದೆ.

ನಾದಯೋಗಿಗಳಾದ ತ್ಯಾಗರಾಜರು ಅನಾಹತನಾದವನ್ನು ಅನುಭವಿಸಿದ್ದರೆಂಬುದಕ್ಕೆ

ಅವರ 'ಸ್ವರರಾಗ ಸುಧಾರಸ'ವೆಂಬ ಕೃತಿಯು ನಿದರ್ಶನ.
 

 
ಅನಿಬದ್ಧ
ಸಂಗೀತದಲ್ಲಿ ನಿಬದ್ಧ ಮತ್ತು ಅನಿಬದ್ಧ ಎಂಬ ಎರಡು
ವಿಧಗಳಿವೆ.
ಅಂಗಗಳಿರುವ ಧಾತುವಿನದು (ಎಂದರೆ ಸಂಗೀತ ರಚನೆಗಳು) ನಿಬದ್ಧ
ಸಂಗೀತ.
ಇದು ಒಂದು ತಾಳದ ಚೌಕಟ್ಟಿಗೆ ಒಳಗಾಗಿರುತ್ತದೆ. ಅನಿಬದ್ಧ

ಸಂಗೀತದಲ್ಲಿ ತಾಳಬದ್ದತೆಯಿರುವುದಿಲ್ಲ. ಇದು ಆಲಾಪನೆ ಮತ್ತು ಸ್ವರಸಂಚಾರಗಳಿಗೆ

ಮಾತ್ರ ಅನ್ವಯಿಸುತ್ತದೆ.
 

 
ಅನಿಲಮಧ್ಯ-
ಈ ರಾಗವು ೫೩ನೆಯ ಮೇಳಕರ್ತ ಗಮನಶ್ರಮದ ಒಂದು
 

ಜನ್ಯರಾಗ,
 
ವಿಧಗಳಿವೆ.
ಸಂಗೀತ.
 

ಆ :
ಸ ರಿ ಮ ಪ ದ ಸ
 

ಅ :
ಸ ನಿ ದ ಪ ಮ ಗ ರಿ ಸ
 

 
ಅನ್ನಿ ಯತಾಳ-
ವನಪಾದ ಚೂಡಾಮಣಿಯಿಂದ ರಚಿತವಾದ ತಾಳ

ಸಮುತ್ತಿರಂ ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ
 
.