2023-06-25 23:29:41 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಕುಮುದಮಾಲಿಕಾ ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಸ ರಿ ಗ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
೨೦೨
ಕುಜ-ನವಗ್ರಹಗಳಲ್ಲಿ ಮೂರನೆ ಗ್ರಹವಾದ ಅಂಗಾರಕ. ಇದಕ್ಕೆ ಮಂಗಳ
ಗ್ರಹವೆಂದೂ ಹೆಸರು.
ಮುತ್ತು ಸ್ವಾಮಿ ದೀಕ್ಷಿತರು ಸುರಟ ರಾಗದಲ್ಲಿ ಅಂಗಾರಕ
ಮಾಶ್ರಯಾಮ್ಯಹಂ ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಅವರ ನವಗ್ರಹ ಕೃತಿ
ಗಳಲ್ಲಿ ಒಂದು ಪ್ರಸಿದ್ಧವಾದ ರಚನೆ.
ಕುಜಹಸ್ತ - ಭರತನಾಟ್ಯದ ನವಗ್ರಹ ಹಸ್ತಗಳಲ್ಲಿ ಇದೊಂದು ಹಸ್ತಮುದ್ರೆ,
ಎಡಗೈಯಲ್ಲಿ ಸೂಚೀಹಸ್ತವನ್ನೂ, ಬಲಗೈಯಲ್ಲಿ ಮುಷ್ಟಿ ಹಸ್ತವನ್ನೂ ಪ್ರದರ್ಶಿಸುವುದು
ಅಂಗಾರಕ ಹಸ್ತವಾಗುತ್ತದೆ.
ಕುಮ್ಮಿ-ಇದು ಚಪ್ಪಾಳೆ ಹೊಡೆಯುತ್ತಾ ಆಡುವ ಒಂದು ಬಗೆಯ
ಸಾಮೂಹಿಕ ಜಾನಪದ ನೃತ್ಯ. ಇದನ್ನು ಹೆಣ್ಣು ಮಕ್ಕಳು ಸಾಮಾನ್ಯವಾಗಿ ಮದುವೆ
ಸಂದರ್ಭಗಳಲ್ಲಿ ಆಡುತ್ತಾರೆ. ಭಜನೆಗಳಲ್ಲಿ ಕೆಲವು ಸಲ ಗಂಡಸರೂ ಆಡುವುದುಂಟು.
ಇದರಲ್ಲಿ ೮ ಮಂದಿ ಇರಬೇಕು. ಇದರ ಸಂಗೀತವು ಸಾಮಾನ್ಯವಾಗಿ ರೂಪಕ ತಾಳ
ದಲ್ಲಿರುತ್ತದೆ. ಮುಖ್ಯ ವ್ಯಕ್ತಿ ಹಾಡಿದ್ದರು ಮಿಕ್ಕವರು ಒಟ್ಟಿಗೆ ಹಾಡುತ್ತಾರೆ. ಅನೇಕ
ವಿದ್ವಾಂಸರು ಕುಮ್ಮಿ ಹಾಡುಗಳನ್ನು ರಚಿಸಿದ್ದಾರೆ. ಪ್ರಸಿದ್ಧ ದೇವಾಲಯಗಳು ಮತ್ತು
ಪುರಾಣದ ಕಥೆಗಳನ್ನು ಕುರಿತು ಕುಮ್ಮಿ ಹಾಡುಗಳಿವೆ. ಚಿದಂಬರಂಕುಮ್ಮಿ,
ರಾಮಾಯಣಕುಮ್ಮಿ, ಗಜೇಂದ್ರ ಮೋಕ್ಷ ಕುಮ್ಮಿ ಮುಂತಾದುವು ಇದಕ್ಕೆ ನಿದರ್ಶನ.
ಕುಂಚಿತ -ದಕ್ಷಿಣ ಭಾರತದ ದೇವಾಲಯಗಳ ನವಸಂಧಿ ಉತ್ಸವಗಳಲ್ಲಿ ವರುಣ
ಸಂಧಿಯಲ್ಲಿ ಆಡುವ ಒಂದು ಬಗೆಯ ನೃತ್ಯ.
ಕುಂಚಿತ ಭ್ರಮರೀ-ಭರತನಾಟ್ಯದ ಏಳು ಬಗೆಯ ಭ್ರಮರೀಗಳಲ್ಲಿ
ಇದೊಂದು ವಿಧ. ಮೊಣಕಾಲುಗಳನ್ನು ಮಡಿಸಿಕೊಂಡು ಸುತ್ತು ತಿರುಗುವುದಕ್ಕೆ
ಕುಂಚಿತ ಭ್ರಮರಿ ಎಂದು ಹೆಸರು.
ಕುಂಜರಾಸ್-ಇದು ದಸರಾ ಉತ್ಸವದಲ್ಲಿ ಆಡುವ ಮಣಿಪುರಿ ನೃತ್ಯ.
ಇದರಲ್ಲಿ ರಾಧಾ ಮತ್ತು ಕೃಷ್ಣ ಲೀಲೆಗಳನ್ನು ಅಭಿನಯಿಸುತ್ತಾರೆ.
ಕುಂಭಕರ್ಣ -- ಜಯದೇವ ಕವಿಯ ಗೀತಗೋವಿಂದವೆಂಬ ಕಾವ್ಯಕ್ಕೆ
ವ್ಯಾಖ್ಯಾನವನ್ನು ಬರೆದಿರುವ ರಾಜಾಸ್ಥಾನದ ಮೇವಾರ ಸಂಸ್ಥಾನದ ದೊರೆ ರಾಣಾ
ಕುಂಭಕರ್ಣ (೧೪೩೩-೧೪೬೮), ಇವನ ವ್ಯಾಖ್ಯಾನಕ್ಕೆ ರಸಿಕಪ್ರಿಯವೆಂದು ಹೆಸರು.
ಇದಲ್ಲದೆ ಸಂಗೀತಶಾಸ್ತ್ರವನ್ನು ಕುರಿತು ಸಂಗೀತರಾಜ ಅಥವಾ ಸಂಗೀತ ಮಾಮಾಂಸ
ಎಂಬ ಬೃಹದ್ಗಂಥವನ್ನು ಬರೆದಿದ್ದಾನೆ. ಇವನನ್ನು ರಾಣಾಕುಂಭ ಎನ್ನುವುದುಂಟು.
ಇವನು ಶ್ರೀಕೃಷ್ಣನ ಪರಮಭಕ್ಕೆ ಮಾರಾಬಾಯಿ ಇವನ ಪತ್ನಿ,