This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕುಜಮೋಹನ-
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
 
ಜನ್ಮರಾಗ,
ನಿ ಸ ಗ ರಿ ಗ ಮ ಪ ದ ಸ

ಅ : ಸ ನಿ ದ ಪ ಗ ರಿ ಸ
 
ಜನ್ಮರಾಗ,
 

 
ಕುಂಕುಮಾಂಬರಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ

ಗೌಳದ ಒಂದು ಜನ್ಯರಾಗ,
 

ಸ ರಿ ಗ ಮ ಪ ದ ನಿ ಸ

ಸ ದ ಪ ಮ ಗ ರಿ ಸ
 

 
೧೯೯
 

 
ಕುಪ್ಪು ಸ್ವಾಮಿ-
ಇವರು
ತಾನವರ್ಣಗಳನ್ನು ರಚಿಸಿದ್ದಾರೆ.

ತಾಳದಲ್ಲಿರುವ ಚಲಮೇಲಜೇಸೇವು ಎಂಬ ವರ್ಣ ಬಹಳ ಪ್ರಸಿದ್ಧವಾಗಿದೆ.
 
ತಮಿಳುನಾಡಿನ ಒಬ್ಬ ವಾಗ್ಗೇಯಕಾರರು
 

ಇವರು ರಚಿಸಿರುವ ನಾಟಕುರಂಜಿ ರಾಗದ ಆದಿ
 

 
ಕುಪ್ಪು ಸ್ವಾಮಿಅಯ್ಯರ್-
ಇವರು ತಮಿಳುನಾಡಿನ ಒಬ್ಬ ಪ್ರಸಿದ್ಧ

ವಾಗ್ಗೇಯಕಾರರು ೧೮ನೆ ಶತಮಾನದ ದ್ವಿತೀಯಾರ್ಧದಲ್ಲಿದ್ದರು. ವೆಂಕಟೇಶ

ಎಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ಧನ್ಯಾಸಿರಾಗದ

(ರೂಪಕ) ಅನುದಿನಮುನು ನೀ ಕಥಲನ ಎಂಬ ಕೃತಿ ಬಹಳ ಪ್ರಸಿದ್ಧವಾಗಿದೆ.
 

 
ಕುಪ್ಪುಸ್ವಾಮಿಶಾಸ್ತ್ರಿ-
ಇವರು ಸಂಗೀತದ ತ್ರಿರತ್ನರಲ್ಲಿ ಒಬ್ಬರಾದ ಶ್ಯಾಮಾ

ಶಾಸ್ತ್ರಿಗಳ ಮರಿಮಗ, 'ಇವರು ಉತ್ತಮ ಗಾಯಕರೂ ವಾಗ್ಗೇಯಕಾರರೂ ಆಗಿದ್ದರು.
 
ಇವರು
 

 
ಕುಮಾರಗಂಧರ್ವ (೧೯೨೫) -
ಇವರು ಕರ್ಣಾಟಕದ ಬೆಳಗಾರಿ ಜಿಲ್ಲೆಯ

ಷಹಾಪುರ್ ಬಳಿಯಿರುವ ಸೂಳೆಬಾವಿ ಎಂಬ ಗ್ರಾಮದಲ್ಲಿ ಸಿದ್ಧರಾಮಯ್ಯ ಮತ್ತು

ಗುರುಸಿದ್ದಪ್ಪ ಎಂಬ ದಂಪತಿಗಳ ಪುತ್ರನಾಗಿ ಜನಿಸಿದರು. ಇವರ ಹೆಸರು ಶಿವಪುತ್ರ

ಕೊಂಕಾಳಿಮಠ, ಚಿಕ್ಕಂದಿನಲ್ಲೇ ಫಯಾಜ್ ಖಾನ್, ಅಲ್ಲಾದಿಯಾಖಾನ್

ಮುಂತಾದವರ ಗ್ರಾಮಾಫೋನ್ ರೆಕಾರ್ಡುಗಳನ್ನು ಕೇಳಿ ಅನುಕರಣೆ ಮಾಡುತ್ತಿದ್ದರು.

೧೯೩೬ರಲ್ಲಿ ಬೊಂಬಾಯಿನ ಗಂಧರ್ವ ಮಹಾವಿದ್ಯಾಲಯಕ್ಕೆ ಸೇರಿ ೧೨ ವರ್ಷಗಳ

ಶಿಕ್ಷಣ ಪಡೆದು ಹಿಂದೂಸ್ಥಾನಿ ಸಂಗೀತದ ಖ್ಯಾತ ಗಾಯಕರಾದರು.

ಗ್ವಾಲಿಯರ್ ಘರಾನಾಕ್ಕೆ ಸೇರಿದವರು. ೧೯೫೪ರಿಂದ ಗೀತವರ್ಷ, ಗೀತಹೇಮಂತ,

ಗೀತವಸಂತ, ಮಾಳ್ವದ ಜನಪದ ಗೀತೆಗಳು ಎಂಬ ರಚನೆಗಳನ್ನು ಪ್ರದರ್ಶಿಸಿದ್ದಾರೆ.

ಗಾಂಧೀಮಲ್ಲಾರ್ ಎಂಬ ಹೊಸ ಮಲ್ಲಾರ್ ಭೇದವನ್ನು ಬೆಳಕಿಗೆ ತಂದರು. ಉತ್ತರ

ಭಾರತದಲ್ಲೆಲ್ಲಾ ಹಲವಾರು ಕಡೆ ಬೈಠಕ್ ಮಾಡಿದ್ದಾರೆ. ದೇವಾಸ್‌ನಲ್ಲಿ (ಮ.ಪ್ರ.)

ಕುಮಾರ್ ಸಂಗೀತ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇವರ

ಗಾಯನದಲ್ಲಿ ಉತ್ತಮವಾದ ಶಾರೀರದ ಜೊತೆಗೆ

ಮನೋಧರ್ಮ,

ಗಾಂಭೀರ್ಯ ಮತ್ತು ಪಾಂಡಿತ್ಯ, ಇಂಪು ಮತ್ತು ಸೊಗಸುಗಳಿವೆ.
 

ಉತ್ತಮ