2023-06-25 23:29:40 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಮೋಹನರಾಗದ ಹಿಂದಿನ
ಕೀರ್ತನೆಗಳಿವೆ. ಮೋಹನ ರಾಗದ ಹೆಸರು ಕಂಡುಬರುವುದಿಲ್ಲ. ರೇಗುಪ್ತರಾಗದ
ಹೆಸರು ಅನೇಕ ಕೀರ್ತನೆಗಳಲ್ಲಿ ಕಂಡುಬರುತ್ತದೆ.
ಹೆಸರು ರೇಗುಪ್ತಿ ಎಂದು ಈಗ ಗೊತ್ತಾಗಿದೆ. ಕೃತಿಯನ್ನು ಪಲ್ಲವಿ, ಅನುಪಲ್ಲವಿ,
ಚರಣ ಎಂಬ ಮೂರು ಅಂಗಗಳಿರುವಂತೆ ರಚಿಸಿರುವುದು ಕರ್ಣಾಟಕ ಸಂಗೀತದ
೧೯೮
ಇತಿಹಾಸದಲ್ಲಿ ಇದೇ ಮೊದಲು. ಅನೇಕ ಕೃತಿಗಳ ಮೂಲರಾಗಗಳು ತಿಳಿದು
ಬರುವುದಿಲ್ಲ. ಮೈಸೂರಿನ ಬಿಡಾರಂ ಕೃಷ್ಣಪ್ಪನವರ ಶಿಷ್ಯರೂ, ಮಹಾರಾಜ
ಕಾಲೇಜಿನ ನಿವೃತ್ತ ತೆಲುಗು ಪಂಡಿತರೂ ಆಗಿದ್ದ ರಾಳ್ಳಪಳ್ಳಿ ಅನಂತಕೃಷ್ಣಶರ್ಮ ಮತ್ತು
ನೇದನೂರಿಕೃಷ್ಣಮೂರ್ತಿ ಹಲವಾರು ಕೃತಿಗಳನ್ನು ಸ್ವರಪಡಿಸಿ ಪ್ರಕಟವಾಗುವಂತೆ
ಮಾಡಿದರು.
ಕೀವಲೂರು ಮೀನಾಕ್ಷಿ ಸುಂದರಂಪಿ -ಇವರು ತಮಿಳುನಾಡಿನ
ಕೀವಲೂರಿನವರು, ತಮಿಳು ಮತ್ತು ಸಂಗೀತದಲ್ಲಿ ಉತ್ತಮ ವಿದ್ವಾಂಸರಾಗಿದ್ದರು.
ತ್ಯಾಗರಾಜರ ಭಕ್ತರಾಗಿ ಅವರನ್ನು ಕುರಿತು ಹಲವಾರು ಲೇಖನಗಳನ್ನು ಬರೆದರು.
ತ್ಯಾಗರಾಜರ ಕೃತಿಗಳನ್ನು ಅರ್ಥಸಹಿತವಾಗಿ ಎರಡು ಗ್ರಂಥಗಳಲ್ಲಿ ಪ್ರಕಟಿಸಿದ್ದಾರೆ. ಈ
ಗ್ರಂಥಗಳಿಗೆ ತ್ಯಾಗರಾಜ ಕೀರ್ತನೈ, ವೊರುಳಿ ವಿಳಕ್ಕಂ ಎಂದು ಹೆಸರು. ಇವರು
೧೯೭೧ರಲ್ಲಿ ಕಾಲವಾದರು.
ಕುಕ್ಕುಟತಾನ-ಇದೊಂದು ಶೈಲಿಯ ತಾನ. ಇದರಲ್ಲಿ ತಾನದ ಸ್ವರ
ಸಮೂಹಗಳ ಗತಿಯ ಶೈಲಿಯು ಹುಂಜದ ನಡಗೆಯಂತೆ ಇರುತ್ತದೆ.
ಕುಕ್ಕಿಲ ಕೃಷ್ಣ ಭಟ್ಟ (೧೯೧೧)-ಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ
ಪುತ್ತೂರು ತಾಲ್ಲೂಕು ವಿಠಲ ಪಡೂರು ಗ್ರಾಮದಲ್ಲಿ ಜನಿಸಿದರು. ಪ್ರಾಚೀನ ಗುರು
ಕುಲ ಸಂಪ್ರದಾಯದಲ್ಲಿ ಸತತ ವ್ಯಾಸಂಗಮಾಡಿ ವಿದ್ವಾಂಸರಾದರು. ವಿದ್ವಾನ್
ಕಡವದ ಶಂಭುಶರ್ಮರಲ್ಲಿ ಭರತನಾಟ್ಯಶಾಸ್ತ್ರವನ್ನು ವ್ಯಾಖ್ಯಾನ ಸಹಿತ ಹಲವು
ವರ್ಷಗಳಕಾಲ ದೀರ್ಘ ವ್ಯಾಸಂಗ ಮಾಡಿದರು. ಮಂಗಳೂರಿನ ವಿದ್ವಾನ್ ಹೆಚ್.
ಕೃಷ್ಣ ಉಡುಪರಲ್ಲಿ ಸಂಗೀತಾಭ್ಯಾಸಮಾಡಿ ಯಕ್ಷಗಾನ ಭಾಗವತರೂ ಗಮಕಿಗಳೂ
ಆಗಿದ್ದಾರೆ. ಸಂಗೀತಶಾಸ್ತ್ರ ಛಂದಸ್ಸು, ಯಕ್ಷಗಾನ, ದ್ರಾವಿಡ ಛಂದಸ್ಸು, ನಿರುಕ್ತ
ಮುಂತಾದ ಹಲವು ಶಾಸ್ತ್ರಗಳನ್ನು ಮೂಲ ಆಕರ ಗ್ರಂಥಗಳಿಂದ ಆಳವಾಗಿ ಅಧ್ಯಯನ
ಮಾಡಿದ್ದಾರೆ. ಭರತನಾಟ್ಯಶಾಸ್ತ್ರವನ್ನು ವ್ಯಾಖ್ಯಾನಸಹಿತ ಕನ್ನಡದಲ್ಲಿ ಬರೆಯುವ
ಕೆಲಸದಲ್ಲಿ ನಿರತರಾಗಿದ್ದಾರೆ. ಭಾರತೀಯ ಸಂಗೀತಶಾಸ್ತ್ರದಲ್ಲಿ ಶ್ರುತಿ ಸಿದ್ಧಾಂತವನ್ನು
ಕುರಿತು ಗ್ರಂಥ ಬರೆದಿದ್ದಾರೆ. ಇವರು ಈಗ ಮೈಸೂರು ನಗರದ ನಿವಾಸಿಗಳಾಗಿದ್ದಾರೆ.
ಕುಕುಡ ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಮರಾಗ,
ಸ ರಿ ಗ ಪ ದ ನಿ ದ ಸ
ಸ ನಿ ದ ಪ ಮ ರಿ ಸ