2023-07-02 12:30:39 by jayusudindra
This page has been fully proofread once and needs a second look.
ಇದು ಭರತನಾಟ್ಯದ ಅಸಂಯುತ ಹಸ್ತಗಳಲ್ಲಿ ಒಂದು ಹಸ್ತ
ಮುದ್ರೆ, ಪದ್ಮಕೋಶ ಹಸ್ತದಲ್ಲಿನ ಅನಾಮಿಕವನ್ನು ಮಡಿಸಿದರೆ ಕಾಂಗುಲ ಹಸ್ತ
ವಾಗುವುದು. ಗಜನಿಂಬೆಹಣ್ಣು, ವಧೂಕುಚಗಳು, ಕಾರಪುಷ್ಪ, ಚಕೋರ,
ಅಡಿಕೆಯಮರ, ಕಿರುಗೆಜ್ಜೆಗಳು, ಗುಳಿಗೆ, ಚಾತಕಪಕ್ಷಿ ಇವುಗಳನ್ನು ಸೂಚಿಸಲು ಈ
ಹಸ್ತ ವಿನಿಯೋಗಿಸಲ್ಪಡುವುದು.
ಕಾಂಚನ ವೆಂಕಟಸುಬ್ರಹ್ಮಣ್ಯಂ (೧೯೨೧)
ಇವರು ಕೇರಳದ ಪಾಲ್
ಘಾಟಿನ ಕಲ್ಯಾತಿ ಎಂಬ ಊರಿನಲ್ಲಿ ಜನಿಸಿದರು ಇವರ ತಂದೆ ಶೃಂಗೇರಿ
ಉ
ದಕ್ಷಿಣಕನ್ನಡ ಜಿಲ್ಲೆಯ ಕಾಂಚನ ಗ್ರಾಮವನ್ನು ವೆಂಕಟರಮಣ ಅಯ್ಯರಿಗೆ ದತ್ತಿಯಾಗಿ
ಕೊಡಲಾಗಿತ್ತು. ಸುಬ್ರಹ್ಮಣ್ಯಂರವರಿಗೆ ಸಂಗೀತದ ಪ್ರಾರಂಭ ಶಿಕ್ಷಣವು ವೀಣಾ
ವಿದುಷಿಯಾಗಿದ್ದ ಅವರ ತಾಯಿಯಿಂದ ದೊರಕಿತು. ನಂತರ ಚಕ್ರಕೋಡಿ
ನಾರಾಯಣಶಾಸ್ತ್ರಿಯವರಲ್ಲ, ಚೆಂಬೈ ವೈದ್ಯನಾಥ ಭಾಗವತರು ಮತ್ತು ಜಿ.ಎನ್.
ಬಾಲಸುಬ್ರಹ್ಮಣ್ಯಂರವರಲ್ಲೂ ಶಿಕ್ಷಣವನ್ನು ಪಡೆದು ವಿದ್ವಾಂಸರಾದರು. ಇವರ
ಮೊದಲ ಕಚೇರಿ ಚೆಂಬೈರವರ ನೇತೃತ್ವದಲ್ಲಿ ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿ
ಯಲ್ಲಿ ನಡೆಯಿತು. ಅಂದಿನಿಂದ ದಕ್ಷಿಣದಲ್ಲೆಲ್ಲಾ
ಅಂದಿನಿಂದ ದಕ್ಷಿಣದಲ್ಲೆಲ್ಲಾ ಕಚೇರಿ ಗಾಯನ ಮಾಡುತ್ತ
ಬಂದಿದ್ದಾರೆ. ದಕ್ಷಿಣ ಭಾರತದ ಖ್ಯಾತ ಪಿಟೀಲು ವಿದ್ವಾಂಸರು ಮತ್ತು ಮೃದಂಗ
ವಿದ್ವಾಂಸರ ಪಕ್ಕವಾದ್ಯಗಳೊಡನೆ ಹಾಡಿದ್ದಾರೆ. ೧೯೫೩ ರಿಂದ ಕಾಂಚನ ಗ್ರಾಮದಲ್ಲಿ
ನೆಲೆಸಿ ಅಲ್ಲಿ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಶಾಲೆಯನ್ನು ಕಟ್ಟಿಸಿ ಗುರುಕುಲ
ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ವಸತಿ, ವಸನ, ಅನ್ನವಿಟ್ಟು ವಿದ್ಯಾದಾನ ಮಾಡುತ್ತ
ಬಂದಿದ್ದಾರೆ. ಹಿತವಾದ ಸತ್ವ ಉಳ್ಳ ಶಾರೀರ, ಉತ್ತಮ ಮನೋಧರ್ಮದ ರಾಗ
ವಿಸ್ತರಣೆ, ಅಚ್ಚು ಕಟ್ಟಿನ ಕೃತಿಗಳ ನಿರೂಪಣೆ, ಲಯವ್ರಧಾನವಾದ ಸ್ವರಕಲ್ಪನೆ
ಉತ್ತಮ ಭವಿಷ್ಯವುಳ್ಳ ಪಿಟೀಲು ವಿದ್ವಾಂಸರು. ಕಾಂಚನದ ಸಂಸಾರವು ಸಂಗೀತದ
ಕಾಂತಮಂಜರಿ
ಈ ರಾಗವು ೩೭ನೆಯ ಮೇಳಕರ್ತ ಸಾಳಗದ ಒಂದು
ಸ ರಿ ಗ ಮ ದ ನಿ ಸ
ಸ ನಿ ಸ ದ ಸ ನಿ ದ ಮ ರಿ ಗ ರಿ ಮ ಗ ರಿ ಸ
ಕಾಂತಾಮಣಿ
ಈ ರಾಗವು ೬೧ನೆ ಮೇಳಕರ್ತರಾಗ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಇದು ೧೨ನೆ ರುದ್ರ ಚಕ್ರದ ಮೊದಲಮೇಳ.
ಜನ್ಯರಾಗ,
ಆ .
DEO
-
ಷಷ್ಟಸ್ವರವು ಗ್ರಹ,