This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಾರರು. ಇವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ಮೆರಟ್ಟೂರಿನಲ್ಲಿ ವಾಸ
ವಾಗಿದ್ದು, ನಾಟ್ಯಕ್ಕೆ ಬೇಕಾದ ಸಂಗೀತವಾದ ಶಬ್ದ ಮತ್ತು ವದಗಳನ್ನು ರಚಿಸಿ ಪ್ರಸಿದ್ಧ
ರಾಗಿದ್ದರು. ಗಜೇಂದ್ರಮೋಕ್ಷ ಶಬ್ದ, ಸೀತಾಕಲ್ಯಾಣ ಶಬ್ದ, ರಾಮಪಟ್ಟಾಭಿಷೇಕ
ಶಬ್ದ, ಹಲವು ದೇವತೆಗಳ ಮತ್ತು ಪುರಾಣಗಳ ಕಥೆಗಳನ್ನು ಕುರಿತು ಶಬ್ದಗಳನ್ನು
ರಚಿಸಿದ್ದಾರೆ. ಗಜೇಂದ್ರಮೋಕ್ಷ ಶಬ್ದಕ್ಕೆ
ಗಜೇಂದ್ರಮೋಕ್ಷ ಶಬ್ದಕ್ಕೆ ಮಂಡೂಕ ಶಬ್ದವೆಂಬ ಮತ್ತೊಂದು
ಹೆಸರಿದೆ. ಇದರಲ್ಲಿರುವ ದೀರ್ಘವಾದ ಜತಿಗಳು ಗಜೇಂದ್ರನನ್ನು ಮೊಸಳೆಯು ಹಿಡಿದು
ಕೊಂಡ ತಾವರೆಕೊಳದಲ್ಲಿರುವ ಕಪ್ಪೆಗಳು ವಟಗುಟ್ಟುವ ಶಬ್ದವನ್ನು ಹೋಲುತ್ತವೆ.
ಕಾಶೀನಾಥನು ಸ್ವನಾಮ ಮುದ್ರಕಾರ,
 
ಕಾಶೀರಾಮಕ್ರಿಯ-ಇದು ಅಸಂಪೂರ್ಣ ಮೇಳಪದ್ಧತಿಯಲ್ಲಿ ನೆ
 
೧೯೦
 
ಮೇಳದ ಹೆಸರು.
 
ಕಾಶ್ಮೀರ-ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು ಜನ್ಯರಾಗ,
ಸ ರಿ ಗ ಪ ದ ನಿ ಸ
 
ಸ ನಿ ದ ಪ ಗ ರಿ ಸ
 

 

 
ಕಾಶ್ಯಪ ಪುರಾತನಕಾಲದ ಒಬ್ಬ ಸಂಗೀತ ವಿದ್ವಾಂಸನ ಹೆಸರು.
ಕಾಶ್ಯಪಿ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ ಒಂದು
 
ಜನ್ಯರಾಗ,
 
ಸ ರಿ ಗ ಪ
 
ಆ ಸ ನಿ ದ ಪ ಗ ರಿ ಸ
 
ಕಾಹಕ-ಇದೊಂದು ಪುರಾತನ ಸಂಗೀತವಾದ್ಯ
ಕಾಹಳ-ಚಿನ್ನ, ತಾಮ್ರ ಅಧವಾ ಬೆಳ್ಳಿಯ ಕಹಳೆ,
 
ಕಾವ್ಯ-ಇದು ತಾಳದರ ಪ್ರಾಣಗಳಲ್ಲಿ ಕಾಲದ ಒಂದು ಘಟಕ ಅಥವಾ
ಪ್ರಾಣ. ಇದು ಅನುದ್ರುತದ ೧/೨೫೬ ಭಾಗಕ್ಕೆ ಸಮನಾದುದು
 
ಕಾಷ್ಟತರಂಗ-ಇದು
 
ಜಲತರಂಗ ವಾದ್ಯದ ಬಟ್ಟಲುಗಳಂತೆ ಮರದಿಂದ
ಮಾಡಿರುವ ಬಟ್ಟಲುಗಳ ವಾದ್ಯ, ಈ ಬಟ್ಟಲುಗಳು ಮಂದ ಮತ್ತು ಆಕಾರದಲ್ಲಿ ವಿವಿಧ
ವಾಗಿವೆ. ಒಂದು ಕಡ್ಡಿಯಿಂದ ಈ ಬಟ್ಟಲುಗಳನ್ನು ಬಾರಿಸಿ ವಾದ್ಯವನ್ನು ನುಡಿಸು
ತ್ತಾರೆ. ನೀರನ್ನು ತುಂಬಿಕೊಂಡು ಬಾರಿಸುವುದಿಲ್ಲ. ಆದ್ದರಿಂದ ಇವುಗಳ ಶ್ರುತಿಗಳು
ಅಚಲವಾಗಿರುತ್ತವೆ. ಪ್ರತಿಯೊಂದು ಬಟ್ಟಲಿನ ಶ್ರುತಿಯು ಅವನ್ನು ಮಾಡುವಾಗಲೇ
ಗೊತ್ತು ಮಾಡಲಾಗಿರುತ್ತದೆ.
 
ಕಾಕ್ಷರ-ದ್ವಾವಿಂಶತಿ ಶ್ರುತಿಗಳಲ್ಲಿ ಇದು ಋಷಭದ ನಿಯತ ಶ್ರುತಿಯ
ಹೆಸರು. (೧೦/೯). ಈ ಹೆಸರು ಭಾವಭಟ್ಟನ ಅನೂಪ ಸಂಗೀತವಿಲಾಸವೆಂಬ ಗ್ರಂಥ
ದಲ್ಲಿ ಉಕ್ತವಾಗಿದೆ.