2023-07-02 12:27:11 by jayusudindra
This page has been fully proofread once and needs a second look.
ಗಳಿಗೆ ಸಂಗೀತವನ್ನು ಅಳವಡಿಸಿ ಹಾಡುವುದು. ಇವರ ವಾದನದಲ್ಲಿ ಸರಳವಾದ
ಲಯವಿರುತ್ತದೆ ಇವರು ಹಾಡುವಾಗ ಜೊತೆಗೆ ಅನುರಣನದ ರಂಗು ಕೊಡಲು
ಹೆಚ್ಚಿನ ಸ್ಥಾಯಿಯ ಧ್ವನಿಯಲ್ಲಿ ಮೋಹನ್‌ಕುಮಾರಿ ಮತ್ತು ಸೋಹನ್‌ಕುಮಾರಿ
ಹಾಡುತ್ತಾರೆ. ಇವರ ಶೈಲಿಯಲ್ಲಿ ಪಾಶ್ಚಾತ್ಯ ಸಂಗೀತದ ಕೂನರ್ ಶೈಲಿಯ
ಪ್ರಭಾ
ಉದವಯವಾಗಲಿ, ಏರಿಸಿ ಹಾರಿಸಿ ಕನ್ನಡದ ಬಾವುಟ, ಇಳಿದು ಬಾ ತಾಯೆ, ಬಾರಯ್ಯ
ಬೆಳದಿಂಗಳೇ ಇವೇ ಮುಂತಾದುವುಗಳ ಪರಿಚಯ ಎಲ್ಲರಿಗೂ ಇದೆ. ಕಾಳಿಂಗರಾಯರು
ಕರ್ಣಾಟಕದ ಸಮಕಾಲೀನ ಲಲಿತ ಸಂಗೀತದ ನಿರ್ಮಾಣ ಮತ್ತು ಪ್ರಚಾರವಲ್ಲದೆ
ಆಧುನಿಕ ಕವಿಗಳ ರಚನೆಗಳಿಗೆ ಭಾವ ಮತ್ತು ಆಶಯಕ್ಕೆ ಚೆನ್ನಾಗಿ ಹೊಂದಿಕೊಳ್ಳುವ
ಸಂಗೀತ ಸಂಯೋಜನೆ ಮಾಡಿ ಒಂದು ನವ್ಯ ಸಂಗೀತಕ್ಕೆ ನಾಂದಿ ಮಾಡಿರುವ ಸಿರಿ
ಕಂಠದ ಜನಪದ ಗಾಯಕ ಮತ್ತು ಲಲಿತಗಾಯನದ ವಿಶಿಷ್ಟ ಶೈಲಿಯ ಗಾಯಕ
ರಾಗಿದ್ದಾರೆ.
೧೮೯
ಕಾವಡಿ ಚಂದು
ಇದು ತಮಿಳುನಾಡಿನ ಒಂದು ಬಗೆಯ ಜನಪದ ಗೀತೆ.
ಈ ಶತಮಾನದ ಆದಿಭಾಗದಲ್ಲಿದ್ದ ಅಣ್ಣಾಮಲೆ ರೆಡ್ಡಿ ಯಾರ್ ಎಂಬುವರು ಈ ಹಾಡು
ಗಳನ್ನು ರಚಿಸಿ ಪ್ರಚಾರಕ್ಕೆ ತಂದರು. ಇವರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ
ಚಿನ್ನಿ ಕುಲಂ ಎಂಬ ಊರಿನವರು. ಈ ಹಾಡುಗಳಲ್ಲಿ ಪಲ್ಲವಿ, ಅನುಪಲ್ಲವಿ ಎಂಬ
ಭಾಗಗಳಿಲ್ಲ. ಇವು ಝುಂಝುಟಿ, ಆನಂದಭೈರವಿ ಮುಂತಾದ ರಾಗಗಳಲ್ಲಿವೆ. ಈ
ಹಾಡುಗಳು ಸುಬ್ರಹ್ಮಣ್ಯ ಸ್ವಾಮಿಯ ಸ್ತುತಿಗಳು, ಸಾಹಿತ್ಯವು ಸುಂದರವಾದ ಅಂತ್ಯ
ಪ್ರಾಸಗಳಿಂದ ಕೂಡಿದೆ. ಕಾವಡಿ ಚಿಂದುಗಳನ್ನು ಕಾವಡಿ ಹರಕೆ ಹೊತ್ತಿರುವ
ಯಾತ್ರಿಕರು ಹಾಡಲು ರಚಿಸಲಾಗಿದೆ. ಇವುಗಳನ್ನು ಸಂಗೀತ ಕಚೇರಿಯ ಮುಕ್ತಾಯ
ಭಾಗದಲ್ಲಿ ಹಾಡುವುದು ರೂಢಿಯಾಗಿದೆ. ರೆಡ್ಡಿ ಯಾರ್ ಸ್ವನಾಮ ಮುದ್ರಕಾರ
ರಾಗಿದ್ದರು.
ಕಾರ್
ಇದು ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿರುವ ಒಂದು
ಸಂಗೀತ ಕಲಾಕೇಂದ್ರ,
ಪ್ರಸಿದ್ಧ ವಿದ್ವಾಂಸರಾಗಿದ್ದ ಸಾರಂಗಪಾಣಿ, ಗೋವಿಂದ
ಸಾಮಯ್ಯ ಮತ್ತು ಕೂವನಸಾಮಯ್ಯ ಈ ಊರಿನವರು. ಇಲ್ಲಿಯ ಮುಖ್ಯ ದೇವ
ರಾದ ವೇಣುಗೋಪಾಲಸ್ವಾಮಿಯ ಸ್ತುತಿರೂಪವಾದ ಅನೇಕ ಪದಗಳನ್ನು ಸಾರಂಗ
ಪಾಣಿ ರಚಿಸಿದ್ದಾರೆ.
ಕಾರ್ವೆಟರಂಗ
ಪ್ರಸಿದ್ಧ ವಾಗ್ಗೇಯಕಾರರಾಗಿದ್ದ ಕಾರ್ವೆಟಿನಗರಂ ಗೋವಿಂದ
ಸಾಮಯ್ಯನವರು ರಚಿಸಿರುವ ಪದಗಳು ಮತ್ತು ಇತರ ರಚನೆಗಳಲ್ಲಿ ಬಳಸಿರುವ
ಕಾಶೀನಾಥ
ಇವರು ೧೮ನೆ ಶತಮಾನದಲ್ಲಿದ್ದ ಒಬ್ಬ ಪ್ರಸಿದ್ಧ ವಾಗ್ಗೇಯ