This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪುರಂದರೋಪನಿಷತ್ ಮುಂತಾದ ಗ್ರಂಥಗಳನ್ನೂ, ಹಲವಾರು ದೇವರನಾಮಗಳನ್ನು
ರಚಿಸಿದ್ದಾರೆ. ಅನಂತಪದ್ಮನಾಭ ಭಾಗವತರು ಯಕ್ಷಗಾನ ಪ್ರವೀಣರೂ
ಹರಿಕಥಾ ವಿದ್ವಾಂಸರಿಗೆ ಕೀರ್ತನ ಕೇಸರಿ,
ಭೂಷಣ, ಕೀರ್ತನಾಚಾರ್ಯ, ಮಹಾಕಥಕಂಠೀರವ ಇತ್ಯಾದಿ ಬಿರುದುಗಳನ್ನಿತ್ತು
ಸನ್ಮಾನಿಸುವುದು ರೂಢಿಯಲ್ಲಿದೆ.
 
ಹರಿಕಥೆಯ ಪ್ರಾರಂಭದಲ್ಲಿ ಗಣೇಶ, ಶಾರದಾದೇವಿ ಮತ್ತು ಗುರುಸ್ತುತಿಗಳನ್ನು
ಭಾಗವತರು ಹಾಡುತ್ತಾರೆ. ನಂತರ ಅವರಿಗೆ ಹಾರ ಹಾಕಿದ ನಂತರ ಮಂಗಳಾರತಿ
ಯಾಗುತ್ತದೆ. ಅವರ ಪೀಠವು ವ್ಯಾಸ ಶುಕ ಪೀಠ ಎಂಬ ನಂಬಿಕೆಯುಂಟು. ತರು
ವಾಯ ಅವರು ಪೀರಿಕೆ ಪ್ರಾರಂಭಿಸಿ ಕಥಾನಿರೂಪಣೆ ಮಾಡುತ್ತಾರೆ. ಸೂಕ್ತವಾದೆಡೆ
ವೇದಾಂತ ಪ್ರಚೋದಕವಾದ ಉಪಕಥೆಗಳನ್ನು ಹೇಳುತ್ತಾರೆ.
 
ಉಪಸಂಹಾರವು
 
೧೮೮
 
ಆಗಿದ್ದಾರೆ.
ಕೀರ್ತನ ರತ್ನಾಕರ, ಕೀರ್ತನ
 
ಪೀರಿಕೆಗೆ ಸಂಬಂಧಿಸಿರುತ್ತದೆ. ನಂತರ ಮಂಗಳ ಮತ್ತು ಮಂಗಳಾರತಿಯೊಂದಿಗೆ
ಕಥೆಯು ಮುಕ್ತಾಯಗೊಳ್ಳುತ್ತದೆ.
 
ಕಾಳಿತಾಂಡವ -ಇದು ನಟರಾಜನ ಊರ್ಧ್ವತಾಂಡವದ ಮತ್ತೊಂದು
ಹೆಸರು. ಈ ನಾಟ್ಯಕ್ಕೆ ಕಾಳಿಯು ಮುಖ್ಯ ಕಾರಣವಾದ್ದರಿಂದ ಈ ಹೆಸರು ಬಂದಿದೆ.
 
ಪಳಗಿದವರು.
 
ಕಾಳಿಂಗರಾವ್ ಪಿ. (೧೯೧೫)-ಕರ್ಣಾಟಕದ ಅತ್ಯಂತ ಜನಪ್ರಿಯ ಲಲಿತ
ಸಂಗೀತಗಾಯಕರಾದ ಕಾಳಿಂಗರಾಯರು ಕುಂದಾಪುರದ ತಾಲ್ಲೂಕಿನ ಆಲೂರಿನಲ್ಲಿ
ಜನಿಸಿದರು. ಇವರ ತಂದೆ ಪಾಂಡೇಶ್ವರದ ಪುಟ್ಟಯ್ಯನವರು ಯಕ್ಷಗಾನದಲ್ಲಿ
ಚಿಕ್ಕಂದಿನಲ್ಲಿ ಹಾಡು ಮತ್ತು ಮದ್ದಲೆಯ ಧ್ವನಿಮಯವಾದ
ವಾತಾವರಣದಲ್ಲಿ ಬೆಳೆದ ರಾಯರಿಗೆ ಒಳ್ಳೆಯ ಕಂಠ ಮತ್ತು ಹಾಡುವ ಉತ್ಸಾಹವಿದ್ದು
ದನ್ನು ಗಮನಿಸಿದ ನಟ ಮುಂಡಾಜೆ ರಂಗನಾಧ ಭಟ್ಟರು ತಮ್ಮ ಅಂಬಾಪ್ರಾಸಾದಿತ
ನಾಟಕ ಮಂಡಲಿಯಲ್ಲಿ ಬಾಲಕನ ಪಾತ್ರಗಳನ್ನು ವಹಿಸುವ ಅವಕಾಶಕೊಟ್ಟರು.
ರಾಯರು ಬಾಲಕರ ಮತ್ತು ಸ್ತ್ರೀಯರ ಪಾತ್ರಗಳನ್ನು ವಹಿಸಿ ಜನಪ್ರಿಯರಾದರು.
ಸವಾಯಿಗಂಧರ್ವರ ಶಿಷ್ಯರಾಗಿದ್ದ ರಾಮದುರ್ಗದ ವೆಂಕಟರಾಯರಲ್ಲೂ ನಂತರ ರಾಮ
ಚಂದ್ರ ಮರೋಲ್‌ರ್‌ರವರಲ್ಲಿ ಹಲವಾರು ವರ್ಷಗಳ ಕಾಲ ಹಿಂದೂಸ್ಥಾನಿ ಸಂಗೀತ
ವನ್ನು ಕಲಿತು ಕಚೇರಿಗಳಲ್ಲಿ ಹಾಡಲು ತೊಡಗಿದರು. ಇವರು ಮದ್ರಾಸಿನಲ್ಲಿದ್ದಾಗ
ನಾಟಕ ಮತ್ತು ಚಲನಚಿತ್ರ ಕ್ಷೇತ್ರಗಳ ಸಂಪರ್ಕ ಹೆಚ್ಚಿತು. ಅಲ್ಲಿಯ ಹಿಂದೀ
ಪ್ರಚಾರ ಸಭೆಯ ಸಂಗೀತದ ಪ್ರಾಧ್ಯಾನಕರಾಗಿ ಹಲವು ವರ್ಷಗಳ ಕಾಲ ಸೇವೆ
ಸಲ್ಲಿಸಿದರು. ರವೀಂದ್ರನಾಧ ಠಾಕೂರರ ಕಾವ್ಯ ಧರ್ಮಿ ಗೀತ ಶೈಲಿಯಿಂದ ಪ್ರಭಾವಿತ
ರಾಗಿ ಸಂಗೀತದ ಕ್ಷೇತ್ರಗಳಲ್ಲಿ ನೂತನ ವಿಧಾನಗಳನ್ನು ಪ್ರಯೋಗಿಸಲು ತೊಡಗಿ
ನಾಟಕ ಮತ್ತು ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮತ್ತು ಗೀತೆಗಳನ್ನು ಒದಗಿಸಿದರು.
ಮಹಾಶಿಲ್ಪಿ, ನಟಶೇಖರ, ಸುಭದ್ರಾ ಕಲ್ಯಾಣ ಮುಂತಾದ ಹಲವು ಚಲನಚಿತ್ರಗಳಿಗೆ
ಸಂಗೀತ ಸಂಯೋಜನೆ ಮಾಡಿದರು.