2023-07-02 12:25:19 by jayusudindra
This page has been fully proofread once and needs a second look.
ತಂಜಾವೂರು ಕೃಷ್ಣಭಾಗವತರು (೧೮೪೭-೧೯೦೩), ವರಹೂರು ಗೋಪಾಲ
ಭಾಗವತರು, ಅಂಡಮಾನ್ ಶಿವರಾಮಭಾಗವತರು, ನರಸಿಂಹಭಾಗವತರು, ಪಂಡಿತ
ಲಕ್ಷ್ಮಣಾ
ಣಾಚಾರ್ಯ (೧೮೫೭-೧೯೨೧), ತಿರುಪ್ಪಯಣಂ ಪಂಚಾಪಕೇಶಶಾಸ್ತ್ರಿ
(೧೮೬೮-೧೯೨೪), ತಂಜಾವೂರು ಪಂಚಾಪಕೇಶ ಭಾಗವತರು, ಅನಂತರಾಮಭಾಗ
ವತರು, ಸೂಲಮಂಗಲಂ ವೈದ್ಯನಾಥಭಾಗವತರು, ಹರಿಕೇಶನಲ್ಲೂರು ಮುತ್ತಯ್ಯ
ಭಾಗವತರು, ಅಣ್ಣಾಸ್ವಾಮಿಭಾಗವತರು, ಶ್ರೀಮತಿ ಸರಸ್ವತಿಬಾಯಿ, ಶ್ರೀರಂಗಂ ಶಠ
ಗೋಪಾಚಾರ್ಯ ಮತ್ತು ಎಂಬಾರ್ ವಿಜಯರಾಘವಾಚಾರ್ಯ
ಕನ್ನಡನಾಡಿನ ಕೆಲವು ಪ್ರಸಿದ್ಧ ಭಾಗವತರು-ಕೀರ್ತನೆ ಅಥವಾ ಕಥಾಕಾಲಕ್ಷೇಪ
ದಲ್ಲಿ ಬಹುಮಟ್ಟಿಗೆ ಕನ್ನಡನಾಡಿನ ಭಾಗವತರು ೩೦ ಅಂಶಗಳನ್ನು ಬಳಸುತ್ತಿದ್ದರು.
ಷಟ್ಟದಿಗಳು, ವೃತ್ತಗಳು, ಕಂದಪದ್ಯಗಳು, ಆರ್ಯಗಳು, ಸೀಸಪದ್ಯಗಳು, ಚೂರ್ಣಿಕೆ
ಗಳು, ದಂಡಕಗಳು, ಸಂಸ್ಕೃತ ಶ್ಲೋಕಗಳು, ನಾಟಕದ ಮಟ್ಟುಗಳು, ಯಕ್ಷಗಾನಗಳು,
ಸ್ತೋತ್ರಗಳು, ತ್ಯಾಗರಾಜರೇ ಮೊದಲಾದವರ ಕೃತಿಗಳು, ದಾಸರ ಪದಗಳು, ಸುಳಾದಿ
ಗಳು, ಉಗಾಭೋಗಗಳು, ಸ್ವಂತ ನಿರೂಪಣೆಗಳು, ಮರಾಠಿ ರಚನೆಗಳು, ವಚನಗಳು,
ತ್ರಿಪದಿಗಳು, ಸಾಂಗತ್ಯಗಳು, ಸರ್ವಜ್ಞನ ವಚನಗಳು, ನೀತಿಪದ್ಯಗಳು, ವೇಮನನ
ಪದ್ಯಗಳು, ಮಂತ್ರಗಳು, ಗೀತೆಗಳು, ತೊರಾಚರಣಗಳು, ಗಾದೆಗಳು, ಚಾಟುಕ
ಗಳು ಮುಂತಾದುವು ಈ ಅಂಶಗಳು. ಕರ್ಣಾಟಕದಲ್ಲಿ ಕಥೆಗಳನ್ನು ಮಾಡುತ್ತಿದ್ದ
ಭಾಗವತರು ದಾಸವಂಥ, ಮಹಾರಾಷ್ಟ್ರದ ಕೀರ್ತನ ಪದ್ಧತಿ ಹಾಗೂ ಯಕ್ಷಗಾನ
ಪದ್ಧತಿಯ ಪ್ರಭಾವದಿಂದ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಬೆಳೆಸಿದರು
ಶತಮಾನದ ಉತ್ತರಾರ್ಧ ಮತ್ತು ೨೦ನೆ ಶತಮಾನದಲ್ಲಿ ಬೇಲೂರು ವೆಂಕಟಸುಬ್ಬ
ದಾಸರು, ಹರಿಕಥಾ ಗುಂಡಾಚಾರ್ಯರು, ಬೇಲೂರು ಕೇಶವದಾಸರು ಮತ್ತು ರಂಗ
ದಾಸರು, ಸೋಸಲೆರಾಮದಾಸರು, ವೀಣಾವಿರ್ದ್ವಾ ಹೆಚ್. ಪಿ. ಕೃಷ್ಣರಾವ್, మిలీ
ಸುಬ್ಬರಾಯರು, ಗಮಕಿ ರಾಮಕೃಷ್ಣ ಶಾಸ್ತ್ರಿ, ಬಿಡಾರಂ ಸುಬ್ಬಯ್ಯ, ಕುರ್ತುಕೋಟಿ
ನಾರಾಯಣಶಾಸ್ತ್ರಿ, ಎಸ್. ಕೃಷ್ಣಯ್ಯಂಗಾರ್, ಮುಂತಾದವರು ಖ್ಯಾತ ಭಾಗವತರು.
ಬೇಲೂರು ಕೇಶವದಾಸರು ಕರ್ಣಾಟಕ ಭಕ್ತ ವಿಜಯ ಮತ್ತು ಕನ್ಯಕಾಪರಮೇಶ್ವರಿ
ಎಂಬ ಗ್ರಂಥಗಳನ್ನು ರಚಿಸಿದ್ದಾರೆ.
ವಿದ್ವಾಂಸರಾಗಿದ್ದರು ಟಿ. ಕೆ. ವೇಣುಗೋಪಾಲದಾಸರು, ಹರಿಸರ್ವೋತ್ತಮದಾಸರು,
ಕೊಣನೂರು ಸೀತಾರಾಮಶಾಸ್ತ್ರಿ, ಭದ್ರಗಿರಿ ಅಚ್ಯುತದಾಸರು ಮತ್ತು ಭದ್ರಗಿರಿ
ಕೇಶವದಾಸರು, ಎನ್. ಕೆ. ಅನಂತಪದ್ಮನಾಭ ಭಾಗವತರೇ ಮುಂತಾದವರು ಖ್ಯಾತ
ಭಾಗವತರಾಗಿದ್ದಾರೆ. ಭದ್ರಗಿರಿ ಕೇಶವದಾಸರು ಬೆಂಗಳೂರಿನಲ್ಲಿ ದಾಸಾಶ್ರಮವೆಂಬ
ಸಂಸ್ಥೆಯನ್ನು ಸ್ಥಾಪಿಸಿ ದೇಶವಿದೇಶಗಳಲ್ಲಿ ಖ್ಯಾತ ಭಾಗವತರಾಗಿರುವುದಲ್ಲದೆ
೧೮೭
೧೯ನೆ