2023-06-25 23:29:37 by ambuda-bot
This page has not been fully proofread.
೧೮೬
ಸಂಗೀತ ಪಾರಿಭಾಷಿಕ ಕೋಶ
ಬಹುದು.
ಇತರ ಭಾಷೆಗಳ ಕೀರ್ತನೆಗಳಲ್ಲದೆ ನಿರೂಪಣೆ ಎಂಬ ವಿಶಿಷ್ಟ ರಚನೆಯನ್ನು ಕೇಳ
ಇದು ಕಥಾ ಪ್ರಸಂಗಕ್ಕೆ ಸಂಬಂಧಿಸಿದ ಸರಳ ಸಾಹಿತ್ಯವಿರುವ, ಆಕರ್ಷಕ
ವಾದ, ಅರ್ಥಗರ್ಭಿತವಾದ ಹಾಡು. ತೆಲುಗು ಮತ್ತು ಕನ್ನಡದಲ್ಲಿ ಉತ್ತಮ ನಿರೂಪಣೆ
ಗಳಿವೆ. ಮೆರಟ್ಟೂರು ವೆಂಕಟರಾಮಶಾಸ್ತ್ರಿ ಮತ್ತು ಮಲೂರು ಸಭಾಪತಿ
ಅಯ್ಯರ್ ಅನೇಕ ಕಥೆಗಳಿಗೆ ಉತ್ತಮವಾದ ನಿರೂಪಣೆಗಳನ್ನು ರಚಿಸಿದ್ದಾರೆ.
ಸಭಾಪತಿ ಅಯ್ಯರನ್ನು ಚಿನ್ನ ತ್ಯಾಗರಾಜ ಎನ್ನುತ್ತಿದ್ದರು ನಿರೂಪಣೆಯು ಸರಳವಾದ
ರಚನೆ. ರಾಗವು ರಂಜಕವಾಗಿರುತ್ತದೆ. ಇದರಲ್ಲಿ ಸಂಗತಿಗಳಿಲ್ಲದಿದ್ದರೂ ಪಲ್ಲವಿ,
ಅನುಪಲ್ಲವಿಗಳಿರುತ್ತವೆ. ಕೆಲವಲ್ಲಿ ಚರಣಗಳಿರುವುದುಂಟು. ಕಾಲಕ್ಷೇಪದ ಉಪ
ಗಾಯಕರಿಗೆ ಅನೇಕ ನಿರೂಪಣೆ ಗೊತ್ತಿರುತ್ತವೆ. ತಮಿಳು, ತೆಲುಗು ಮತ್ತು
ಕನ್ನಡದಲ್ಲಿ ನಿರೂಪಣೆಗಳಿರುವಂತೆ ಸಂಸ್ಕೃತದಲ್ಲಿಲ್ಲ. ಪ್ರಸಿದ್ಧ ವೇಣುವಾದಕರಾಗಿದ್ದ
ಶರಭಶಾಸ್ತ್ರಗಳು ೬೩ ನಾಯನಾರರ ಕಥೆಗಳಿಗೆ ನಿರೂಪಣೆಗಳನ್ನು ರಚಿಸಿದರು.
ಇವನ್ನು ಸೂಲಮಂಗಲಂ ವೈದ್ಯನಾಥಭಾಗವತರು ಬಳಸಿಕೊಂಡು ಪ್ರಚಾರ
ಮಾಡಿದರು
ಕಾಲಕ್ಷೇಪದ ಪ್ರಾರಂಭದಲ್ಲಿ ಹಾಡುವ ಐದು ಭಕ್ತಿಗೀತೆಗಳಿಗೆ ಪಂಚಪದಗಳೆಂದು
ಹೆಸರು. ಆರ್ಯಗಳು, ಶ್ಲೋಕಗಳು, ವದ್ಯಗಳು, ವಿರುತ್ತಗಳು, ಕಂದಪದ್ಯಗಳು,
ಅಭಂಗಗಳು, ದೋಹರಗಳು, ಭಜನೆಗಳು, ಅಷ್ಟ ಪದಿ, ತರಂಗ, ಚೂರ್ಣಿಕೆ, ದಂಡಕ,
ಅಷ್ಟಕ, ಪದ, ಅಂಜಲಿಗೀತ, ನಾಮಾವಳಿ, ಸಾವಯಾ, ಖಡ್ಡಾ, ಲಾವಣಿ, ಸಾಕಿ,
ದಿಂಡಿ, ದೇವರನಾಮ, ತೇವಾರ, ತಿರುವಾಚಕ, ತಿರುಪ್ಪುಗಳ್, ವಚನ, ತಿಲ್ಲಾನ
ಗಳನ್ನು ಹಾಡುತ್ತಾರೆ. ಪ್ರಧಮಪದವು ಕಥಾಕಾಲಕ್ಷೇಪದ ವಿಷಯವನ್ನು ಸಂಗ್ರಹ
ವಾಗಿ ಪರಿಚಯ ಮಾಡಿಕೊಡುತ್ತದೆ.
ಭಾಗವತರ ಲಕ್ಷಣಗಳು -ಭಾಗವತರಿಗೆ ಆಕರ್ಷಕವಾದ ತೇಜಸ್ಸಿನಿಂದ
ಕೂಡಿದ ವ್ಯಕ್ತಿತ್ವ, ಸಚ್ಚಾರಿತ್ರ, ಸಂಸ್ಕೃತ, ತೆಲುಗು, ತಮಿಳು, ಕನ್ನಡ,
ಮರಾಠಿ ಭಾಷೆಗಳಲ್ಲಿ ಉತ್ತಮಜ್ಞಾನ, ಪ್ರತಿಭೆಯಿಂದ ಕೂಡಿದ ಪ್ರವಚನಶಕ್ತಿ,
ಧಾರ್ಮಿಕ ಗ್ರಂಥಗಳ ಪಾಂಡಿತ್ಯ, ಸಮಯೋಚಿತವಾಗಿ ಉಪಕಥೆಗಳನ್ನು ಹೇಳುವ
ಸಾಮರ್ಥ್ಯ, ಹಾಸ್ಯಪ್ರಿಯತೆ, ಹಾಸ್ಯ ಮಾಡುವುದರಲ್ಲಿ ಗಾಂಭೀರ್ಯ, ಕಾಲಮಿತಿಗೆ
ತಕ್ಕಂತೆ ಕಾಲಕ್ಷೇಪ ಮಾಡುವ ಚಾಕಚಕ್ಯತೆ, ಶಾಸ್ತ್ರ, ಪುರಾಣೇತಿಹಾಸಗಳಿಂದ ಸೂಕ್ತ
ವಾದ ಭಾಗಗಳನ್ನು ಉದ್ಧರಿಸಿ ಹೇಳುವ ಶಕ್ತಿ, ಕಧನಕೌಶಲ್ಯ, ವಿದ್ಯಾದಾಹ, ಸಂಗೀತ
ಮತ್ತು ಭರತಶಾಸ್ತ್ರದ ಪಾಂಡಿತ್ಯ, ಹಿತಕರವಾದ ಶಾರೀರ, ಹಲವು ವಾಗ್ಗೇಯಕಾರರ
ಕೃತಿಗಳು ಮತ್ತು ನಿರೂಪಣೆಗಳು ಮತ್ತು ಅವುಗಳ ಭಾಗಗಳನ್ನು ಸಂದರ್ಭೋಚಿತ
ವಾಗಿ ಹಾಡುವ ಯೋಗ್ಯತೆ, ರಾಗ ರಸಗಳ ವಿವೇಕ, ಮೊದಲಿನಿಂದ ಕೊನೆಯವರೆಗೂ
ಬೋಧಪ್ರದವಾಗಿ ಬೇಸರತರದಂತೆ ಕುತೂಹಲ ಕೆರಳುವಂತೆ ಕಾಲಕ್ಷೇಪ ಮಾಡುವುದು
ಮುಂತಾದುವು ಭಾಗವತರ ಲಕ್ಷಣಗಳು.