This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ನಿರೂಪಣೆ
 
ರೂಢಿಯಲ್ಲಿತ್ತು. ವಾಲ್ಮೀಕಿರಾಮಾಯಣ, ಭಾಗವತ, ದೇವೀಪುರಾಣ ಇತ್ಯಾದಿ
ಗಳನ್ನು ಪಠಣಮಾಡಿ ವ್ಯಾಖ್ಯಾನ ಮಾಡುವುದು ದಕ್ಷಿಣಭಾರತದಲ್ಲೆಲ್ಲಾ ರೂಢಿ
ಯಲ್ಲಿತ್ತು. ತಮಿಳುನಾಡಿನಲ್ಲಿ ಪರಿತ್ತಿಯರು ಕೃಷ್ಣಶಾಸ್ತ್ರಿಗಳು ವಾಲ್ಮೀಕಿ
ರಾಮಾಯಣವನ್ನು ಕುರಿತು ಉಪನ್ಯಾಸ ಮಾಡುತ್ತಾ ಶ್ಲೋಕಗಳನ್ನು ಆಲಾಪನೆ
ಸಹಿತ ವಾಚನ ಮಾಡುತ್ತಿದ್ದರು ಗ್ವಾಲಿಯರ್‌ನ ಕೀರ್ತನಕಾರರಾದ ಮೋರ್ಕರ್
ಬಾವಾ ಮತ್ತು ರಾಮಚಂದ್ರ ಬಾವಾ ಸುಮಾರು ೧೮೬೦ರಲ್ಲಿ ತಂಜಾವೂರಿಗೆ ಬಂದು
ಮರಾಠಿ ಕೀರ್ತನವನ್ನು ಜನಪ್ರಿಯವಾಗುವಂತೆ ಮಾಡಿದರು. ಕೃಷ್ಣ ಭಾಗವತರು
ಮರಾಠ ಶೈಲಿಯ ಲಾಲಿತ್ಯವನ್ನೂ, ತಮಿಳು ಶೈಲಿಯ ಉತ್ತಮಾಂಶಗಳನ್ನೂ
ಸಮ್ಮಿಳನಗೊಳಿಸಿ ಆಧುನಿಕ ಕಾಲಕ್ಷೇಪ ಪದ್ಧತಿಯನ್ನು ರೂಪಿಸಿದರು.
ಗಳಿಗೆ ತ್ಯಾಗರಾಜರ ಕೃತಿಗಳನ್ನೂ ಬಳಸಿಕೊಂಡರು. ಇದಲ್ಲದೆ ತಮಗೆ ಬೇಕಾದ
ನಿರೂಪಣೆಗಳನ್ನು ಸ್ವತಃ ರಚಿಸಿಕೊಂಡರು. ಮವ್ವಲೂರು ಸಭಾಪತಿಅಯ್ಯರ್
ತೆಲುಗಿನಲ್ಲಿ ಹಲವು ಸುಂದರವಾದ ನಿರೂಪಣೆಗಳನ್ನು ರಚಿಸಿದರು. ಭಾಗವತರಿಗೆ
ಅಸಾಧಾರಣ ಶ್ರುತಿ ಜ್ಞಾನವಿತ್ತು. ನಾಟ್ಯ ಕಲೆಯಲ್ಲಿ ಪರಿಣತಿಯಿತ್ತು. ಇವೆಲ್ಲ
ವನ್ನೂ ಚೆನ್ನಾಗಿ ಬಳಸಿಕೊಂಡು ಹರಿಕಥೆಯನ್ನು ಒಂದು ಉತ್ತಮವಾದ ಉನ್ನತ
ಮಟ್ಟದ ನೀತಿಬೋಧಕವಾದ ಮನೋರಂಜನೆಯನ್ನಾಗಿ ಬೆಳೆಸಿದರು.
ಗೋಪಾಲಕೃಷ್ಣ ಭಾರತಿಯವರ ನಂದನಾರ್ ಚರಿತವನ್ನು ಬಳಸಿಕೊಂಡ ರೀತಿಯಿಂದ
ಭಾರತಿಯವರ ಮೆಚ್ಚುಗೆಯನ್ನು ಪಡೆದರು. ದಕ್ಷಿಣ ಭಾರತದ ಕಥಾಕಾಲಕ್ಷೇಪದ
ಮಾರ್ಗದರ್ಶಿ ಎಂದು ಪ್ರಸಿದ್ಧರಾದರು. ಕಾಲಕ್ಷೇಪದಲ್ಲಿ ಭಕ್ತಿರಸವಲ್ಲದೆ ಇತರ
ರಸಗಳೂ ಉಂಟಾಗುವಂತೆ ಮಾಡುತ್ತಿದ್ದರು.
 
ಇವರು
 
೮೫
 
ಮೈಸೂರು ದೇಶದಲ್ಲಿ ಕಥಾಕಾಲಕ್ಷೇಪವು ನಡೆದುಬಂದ ದಾರಿ ಹೆಚ್ಚು ಕಡಿಮೆ
ಹೀಗೆಯೇ ಇದೆ. ಮೈಸೂರಿನಲ್ಲಿ ಹಲವು ವರ್ಷಗಳ ಕಾಲವಿದ್ದ ಪ್ರಸಿದ್ಧ ಗಾಯಕ
ರಾದ ಮುತ್ತಯ್ಯ ಭಾಗವತರು ಸೊಗಸಾದ ರೀತಿಯಲ್ಲಿ ಹರಿಕಥೆ ಮಾಡುತ್ತಿದ್ದರು.
ಇತರ ಕನ್ನಡಿಗರಾದ ಭಾಗವತರು ಸಂಸ್ಕೃತ ಕಾವ್ಯಗಳು, ರಾಮಾಯಣ, ಮಹಾ
ಭಾರತ, ಪುರಾಣಾದಿಗಳಲ್ಲದೆ ಕುಮಾರವ್ಯಾಸ, ಲಕ್ಷ್ಮೀಶ, ಪಂಪ ಮುಂತಾದವರ
ಕಾವ್ಯಗಳನ್ನೂ, ತ್ಯಾಗರಾಜರು ಮತ್ತು ಪುರಂದರದಾಸಾದಿಗಳ ಹರಿದಾಸರ ಕೀರ್ತನೆ
ಗಳನ್ನೂ ಸಂದರ್ಭೋಚಿತವಾಗಿ ಬಳಸಿ ನಿರೂಪಣೆಮಾಡಿ ಹರಿಕಥೆ ಮಾಡುವ ಪದ್ಧತಿ
ಯನ್ನು ರೂಢಿಗೆ ತಂದರು. ಇವಲ್ಲದೆ ಹಿಂದೀ ಭಜನ್‌ಗಳು ಮತ್ತು ಮರಾಠಿ
 
ಅಭಂಗಗಳನ್ನು ಬಳಸಿಕೊಳ್ಳುವ ಪದ್ಧತಿಯಿದೆ.
 
ಇದೆ.
 
ಈಗಿನ ಕಥಾಕಾಲಕ್ಷೇಪವು ಸಾಮಾನ್ಯವಾಗಿ ೩-೪ ಗಂಟೆಗಳ ಕಾಲ ನಡೆಯು
ಹಿಂದೀ ಹಾಡು
ಇದರಲ್ಲಿ ಕನ್ನಡ, ಸಂಸ್ಕೃತ, ತಮಿಳು, ಮರಾಠಿ,
ಗಳುಂಟು. ಉಪಕಥೆಗಳು ಮತ್ತು ಲಘುಗೀತೆಗಳು ಬೇಸರವನ್ನು ಹೋಗಿಸಿ ಹಾಸ್ಯ
ರಸದಲ್ಲಿ ಶೋತೃಗಳನ್ನು ಮುಳುಗಿಸುತ್ತವೆ. ಕಥಾಕಾಲಕ್ಷೇಪದಲ್ಲಿ ಸಂಸ್ಕೃತ ಮತ್ತು