This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ತಂದರು. ಸರಸ ಸಾಮದಾನ ಎಂಬ ಈ ರಾಗದ ತ್ಯಾಗರಾಜರ ಕೃತಿಯು ಬಹು
ಪ್ರಸಿದ್ಧವಾಗಿದೆ.
 
ಕಾವ್ಯನಾಗ-ಈ ರಾಗವು ೧೨ನೆ ಮೇಳಕರ್ತ ರೂಪವತಿಯ ಒಂದು
 
ಸ ರಿ ಗ ಮ ಪ ಸ
 
ಸ ನಿ ದ ಪ ಮ ಗ ರಿ ಸ
 
ಜನ್ಯರಾಗ,
 

 
ಕಾಫಿ-ಹಿಂದೂಸ್ಥಾನಿ ಸಂಗೀತದ ಥಾಟ್ ಅಥವಾ ಮೇಳದ ಹೆಸರು.
ಇದು ಕರ್ಣಾಟಕ ಸಂಗೀತದ ಖರಹರಪ್ರಿಯ ಮೇಳವನ್ನು ಹೋಲುತ್ತದೆ. ಕಾಫಿ
ರಾಗವು ಸಂಪೂರ್ಣ-ಸಂಪೂರ್ಣರಾಗ ಅಂತರ ಗಾಂಧಾರ, ಶುದ್ಧಧೈವತ ಮತ್ತು
ಕಾಕಲಿ ನಿಷಾದಗಳನ್ನು ಅನ್ಯಸ್ವರಗಳನ್ನಾಗಿ ಬಳಸಿಕೊಂಡು ಹಾಡುವ ಪದ್ಧತಿಯಿದೆ.
ಕಾಮದ ಇ-ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಆರು ಮುಖ್ಯರಾಗ
ಗಳಲ್ಲಿ ಒಂದು ರಾಗದ ಹೆಸರು.
 
ಕಾಮದೇವಿಯ-ವಿಜಯನಗರದ ದೊರೆ ರಾಮರಾಯನ ಕಾಲದಲ್ಲಿ
ಬರೆಯಲ್ಪಟ್ಟ ಸಂಗೀತ ಮತ್ತು ನಾಟ್ಯಶಾಸ್ತ್ರ ಗ್ರಂಥ.
 
ಕಾಮಕೇಳಿ-ಇದು ವಸಂತದ ರಾಗಿಣಿಯ ಒಂದು ದಾಸಿರಾಗವೆಂದು
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿದೆ.
 
ಕಾರರು.
 
ಕಾಮಕೋಟಿಶಾಸ್ತ್ರಿ-ಇವರು ತ್ಯಾಗರಾಜರ ನಂತರ ಇದ್ದ ಒಬ್ಬ ವಾಗ್ಗೇಯ
ಇವರು ಸಂಸ್ಕೃತ ಮತ್ತು ತೆಲುಗಿನಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.
ಇವರು ಸ್ವನಾಮ ಮುದ್ರಕಾರರು,
ಇವರು ರಚಿಸಿರುವ ಕೆಲವು ಪ್ರಸಿದ್ಧ ಕೃತಿಗಳು :
ನಿರುಪಮಾನ
 
ಅಂಬಾಶಿವೇ
 
ರಮಾಪತೇ
 
ದಯಯಂತಯು
 
ದೇವಾದಿದೇವ
 
ನೆರದಾತಯು
 
ನೆರನಮ್ಮಿ
 
ಚಿಂತಾಕ್ರಾಂತುಲಕು
ವಿನುಮಾ ಓ ಮನಸಾ
 
-
 
ರೂಪಕ
 
ಆದಿ
 
ರೂಪಕ
 
-
 
ಆದಿ
 
ರೂಪಕ
 
ರೂಪಕ
 
ಛಾಪು
 
ರೂಪಕ
 
ಆದಿ
 
-
 
ಮಧ್ಯಮಾವತಿ
ಮಧ್ಯಮಾವತಿ
 
-
 
೧೭೯
 
ಭೈರವಿ
 
ಬೇಗಡೆ
 
ತೋಡಿ
 
ಬೇಗಡೆ
 
ಬೇಗಡೆ
 
ಬಿಲಹರಿ
 
ಕಾಂಭೋಜಿ
 
ಕಾಮಿಕಾಗಮ-ದೇವಾಲಯಗಳ ಉತ್ಸವಗಳನ್ನು ಕುರಿತು ಬರೆದಿರುವ
ಒಂದು ದೊಡ್ಡ ಗ್ರಂಥ. ಇದರಲ್ಲಿ ರಾಗಗಳು, ತಾಳಗಳು, ವಾದ್ಯಗಳು, ಆಡಬೇಕಾದ
ನಾಟ್ಯಗಳು, ಹಾಡಬೇಕಾದ ಹಾಡುಗಳು, ಯಾವ ಉತ್ಸವಗಳಲ್ಲಿ ಯಾವ ಹಾಡನ್ನು
ಹಾಡಬೇಕು, ಯಾವ ನಾಟ್ಯವಾಡಬೇಕು ಇತ್ಯಾದಿ ವಿವರಣೆಗಳಿವೆ.