This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ತ್ಯಾಗರಾಜರ ಆಭೇರಿರಾಗದ ನಗುಮೋಮುಗನಲೇನಿ ಎಂಬ ಕೃತಿಯಲ್ಲಿ ಹಿಂದೂಸ್ಥಾನೀ
ಸಂಗೀತದ ಭಿಂಪಲಾಸಿ ರಾಗದ ಛಾಯೆಯನ್ನು ತರುವುದು ಅಥವಾ ಕಾನಡಾರಾಗದಲ್ಲಿ
ದರ್ಬಾರಿ ಕಾನಡರಾಗದ ಸ್ವರಗಳನ್ನು ಪ್ರಯೋಗಿಸಿ ಹಾಡುವುದು ಇದಕ್ಕೆ ನಿದರ್ಶನ
ಇದಕ್ಕೆ ದೇಶ್ಯವೆಂದು ಹೆಸರು.
 
೧೭೬
 
(೪) ಕ್ಷೇತ್ರ ಕಾಕು-ಒಂದು ರಾಗದ ಗ್ರಹ, ನ್ಯಾಸ ಮತ್ತು ಅಂಶ ಸ್ವರಗಳನ್ನು
ಹೆಚ್ಚಾಗಿ ಒತ್ತಿ ಪ್ರಯೋಗಿಸಿದರೆ ರಾಗದ ವಿಶಿಷ್ಟ ಸ್ವರೂಪವು ವ್ಯಕ್ತವಾಗುತ್ತದೆ.
ಇದಕ್ಕೆ ಕ್ಷೇತ್ರಕಾಕು ಎಂದು ಹೆಸರು.
 
(೫) ಅನ್ಯರಾಗಕಾಕು - ಒಂದು ರಾಗದಲ್ಲಿ ಇತರ ರಾಗದ ಛಾಯೆಯಿರುವುದು
ಅನ್ಯರಾಗಕಾಕು. ಮಾಂಜಿರಾಗದ ಉತ್ತರಾಂಗದಲ್ಲಿ ಭೈರವಿ ಛಾಯೆಯಿರುವುದು
ಇದಕ್ಕೆ ಉದಾಹರಣೆ. ಇದಕ್ಕೆ ಉಪರಾಗಕಾಕು ಅಥವಾ ತಾಯ ಎಂದು ಹೆಸರು.
ಠಾಯವೆಂದರೆ ರಂಜಕ ಪ್ರಯೋಗವನ್ನು ಹೆಚ್ಚಾಗಿ ಬಳಸಿರುವ ರಚನಾ ವಿಶೇಷಕ್ಕೆ
ರಾಯ ಎಂಬ ಹೆಸರು ಬಂದಿತು.
 
(೬) ವ್ಯಾದಕಾಕು ಅಥವಾ ಯಂತ್ರಕಾಕು ವಾದ್ಯದಲ್ಲಿ ವಿಶಿಷ್ಟ
ಶೈಲಿಯಲ್ಲಿ ನುಡಿಸಿ ರಾಗದ ಸ್ವರೂಪವನ್ನು ಪ್ರಕಟಗೊಳಿಸುವುದು ವಾದ್ಯಕಾಕು.
ಶಂಖ, ವೀಣಾ, ಮುರಜ ಮುಂತಾದ ವಾದ್ಯಗಳಿಗೆ ಸೂಕ್ತವಾದ ಸಾಹಿತ್ಯ ಮತ್ತು
ಸ್ವರಗಳು ವಾದ್ಯ ಕಾಕು. ಕೈವಾರ ಪ್ರಬಂಧಗಳಲ್ಲಿ ವಾದ್ಯಕಾಕುವಿನ ನಿದರ್ಶನಗಳಿವೆ.
ಕೆಲವು ಪ್ರತಿಭಾವಂತ ಗಾಯಕರು ರಾಗಗಳ ಆಲಾಪನೆ ಮಾಡುವಾಗ ವೀಣೆಯ ಧ್ವನಿ
ಯಂತೆ ಹಾಡುತ್ತಿದ್ದರು. ಇದೂ ಸಹ ವಾದ್ಯ ಕಾಕುವಿಗೆ ಉದಾಹರಣೆ.
ವಿದ್ವಾನ್ ವಿಲಾಕುಳಂಸಾಮಿ,
 
ಉದಾ :
 
(೭) ನಮನಕಾಕು ಅಥವಾ ನವಣಿ-ರಾಗವನ್ನು ಬಹಳ ಇಂಪಾಗಿ
ಸಂಚು ಮಾಡಿ ಹಾಡುವುದು.
 
(೮) ಭಾಷಾಕಾಕು-ಬೇರೆ ಬೇರೆ ಭಾಷೆಗಳ ಪದಗಳನ್ನು ಪ್ರಯೋಗಿಸಿ
ಭಾವಕ್ಕೆ ತಕ್ಕಂತೆ ಸ್ವರಪಡಿಸಿ ಹಾಡುವುದು. ಆನಲೇಕರ ಎಂಬ ಶುದ್ಧ ಸಾವೇರಿ
ರಾಗದ ಗೀತವು ಭಾಷಾಕಾಕುವಿಗೆ ಉದಾಹರಣೆ.
 
ಕಾತ್ತವರಾಯನ ಹಾಡು-ಗ್ರಾಮದೇವತೆಯಾದ ಕಾವರಾಯನನ್ನು
 
ಕುರಿತ ಹಾಡು
 
ಕಾತ್ಯಾಯನ ವೀಣೆ-ಕಾತ್ಯಾಯನ ಋಷಿಯ ಹೆಸರಿನ ವೀಣೆ ಇದಕ್ಕೆ
ನೂರುತಂತಿಗಳಿದ್ದುದರಿಂದ ಶತತಂತ್ರಿ ವೀಣೆ ಎಂಬ ಹೆಸರಿತ್ತು. ಇದು ಪರ್ಷಿಯಾ
ದೇಶದ ಸಂತಿರ್‌ವಾದ್ಯ ಮತ್ತು ಬೈಬಲ್‌ನಲ್ಲಿ ಹೇಳಿರುವ ಸಾಲ್ವರಿವಾದ್ಯವಾಯಿತು
ಮುಂದೆ ಇದು ಕ್ಲಾವಿಕಾರ್ಡ್ ಮತ್ತು ಪಿಯಾನೋವಾದ್ಯದ ವಿಕಾಸಕ್ಕೆ ದಾರಿ
 
ಯಾಯಿತು.