This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
೧೭೫
 
ಕಹಂಡಿಕ-ವಂಚಮಹಾಶಬ್ದಗಳಲ್ಲಿ ಒಂದು ವಾದ್ಯ
ಕಾಕಳಿ (೧) ಕಾಕಲಿ ನಿಷಾದ ಸ್ವರ.
 
ಅಂತರಗಾಂಧಾರ ಮತ್ತು ಕಾಕಲಿ
 
ನಿಷಾದ ಸ್ವರಗಳು ಷಡ್ಡ ಗ್ರಾಮದ ಶುದ್ಧ ಸ್ವರಗಳ ನಂತರ ಮಾನವನಿಗೆ ತಿಳಿದುಬಂದ
ಅತ್ಯಂತ ಪುರಾತನ ಸ್ವರಗಳು.
 
(೨) ಈ ರಾಗವು ೫೫ನೆ ಮೇಳಕರ್ತ ಶ್ಯಾಮಲಾಂಗಿಯ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಕಾಕಲಿ ನಿಷಾದ -ತೀವ್ರ ನಿಷಾದ ಸ್ವರ.
 
ಕಾಕಪಾದ ಅಥವಾ ಕಾಕಪಾದಂ-ಇದು ತಾಳದ ಆರು ಅಂಗಗಳಲ್ಲಿ
ಒಂದು ಅಂಗ ಒಂದು ಘಾತ, ಪತಾಕ, ಕೃಷ್ಣ ಮತ್ತು ಸರ್ಪಿಣಿ ಇದರ ಕ್ರಿಯೆಗಳು.
ಒಂದು ಕ್ರಿಯೆಯ ಕಾಲವು ಒಂದು ಮಾತ್ರೆ ಅಧವಾ ೪ ಅಕ್ಷರಕಾಲ, ಇದರ ಚಿಹ್ನೆ
+. ೧೦೮ ತಾಳಗಳಲ್ಲಿ ಅತ್ಯಂತ ದೀರ್ಘತಾಳವಾದ ಸಿಂಹನಂದನ ತಾಳದಲ್ಲಿ ಕಾಕ
ಪಾದವು ಬರುತ್ತದೆ
 
ಕಾಕಪಾದನರು ಇದು ೧೪ ಬಗೆಯ
ಕಾಕಿ-ಇದು ಗಾಯನದ ಒಂದು ದೋಷ
 
ತಾಳಪ್ರಸ್ತಾರಗಳಲ್ಲಿ ಒಂದು ವಿಧ.
ಕಾಗೆಯ ಧ್ವನಿಯಂತೆ ಮಾಡಿ
 
ಹಾಡುವವನು ಕಾಕಿ,
 
ಕಾಕು-ಇದು ಗಾಯನದ ಲಕ್ಷಣದ ಒಂದು ಅಂಶ. ರಾಗದ ಸೌಂದರ್ಯ
ಮತ್ತು ಸ್ವರೂಪವನ್ನು ಹೆಚ್ಚಿಸಿ ಅದರ ವೈಶಿಷ್ಟ್ಯತೆಯನ್ನು ತೋರಿಸುವಂತೆ ಸ್ವರಗಳನ್ನು
ಬಳಸಿ ಹಾಡುವುದು ಕಾಕು. ಪಾರ್ಶ್ವದೇವನು ಸಂಗೀತ ಸಮಯಸಾರವೆಂಬ ಗ್ರಂಥ
ದಲ್ಲಿ ಹಲವು ಬಗೆಯ ಕಾಕುಗಳನ್ನು ಹೇಳಿದ್ದಾನೆ.
 
(೧) ರಾಗ ಕಾಕು ರಾಗದ ಭಾವವನ್ನೂ ಸೌಂದರ್ಯವನ್ನೂ ಪ್ರಕಟ
ಗೊಳಿಸಲು ಬಳಸುವ ಸ್ವರಗುಚ್ಛಗಳು. ಉದಾ : ಹುಸೇನಿರಾಗದಲ್ಲಿ ಸಸಾಪಪಾನಿದಾಮ
ಎಂಬ ವಿಶೇಷ ಪ್ರಯೋಗ,
 
(೨) ಸ್ವರಕಾಕು-ಒಂದು ರಾಗದ ಗೊತ್ತಾದ ಒಂದು ಸ್ವರವನ್ನು ಗಮಕ
ಯುಕ್ತವಾಗಿ ಅಥವಾ ಅದರ ಮೇಲಿನ ಅಧವಾ ಕೆಳಗಿನ ಸ್ಥಾನದಿಂದ ಹಾಡಿದಾಗ
ಅದು ಆ ರಾಗದ ವೈಶಿಷ್ಟತೆಯನ್ನು ಪ್ರಕಟಗೊಳಿಸುತ್ತದೆ.
ಅಸಾವೇರಿ ರಾಗದ ಸ್ವರಗುಚ್ಛದಲ್ಲಿ ಕಂಪಿತ ಗಾಂಧಾರವು ಇದಕ್ಕೆ ನಿದರ್ಶನ. ಹೀಗೆ
ಹಾಡುವುದಕ್ಕೆ ಸ್ವರಕಾಕು ಎಂದು ಹೆಸರು.
 
ಗಾರಿಸಾ ఎంబ
 
(೩) ದೇಶಕಾಕು-ಕರ್ಣಾಟಕ
ಸ್ವರಗುಚ್ಛಗಳನ್ನು ಪ್ರಯೋಗಿಸಿ ಹಾಡುವುದು ಅಥವಾ
ಕರ್ಣಾಟಕ ಸಂಗೀತದ ರಾಗಗಳ ಸ್ವರಗುಚ್ಛಗಳನ್ನು ಹಾಡುವುದು
ಹೀಗೆ ಹಾಡಿದಾಗ ರಾಗಗಳಿಗೆ ಹೆಚ್ಚು ಲಾಲಿತ್ಯ ಮತ್ತು ಪ್ರಕಾಶ ಉಂಟಾಗುತ್ತದೆ.
 
ರಾಗಗಳಲ್ಲಿ ಹಿಂದೂಸ್ಥಾನಿ ರಾಗಗಳ
ಹಿಂದೂಸ್ತಾನೀ ರಾಗಗಳಲ್ಲಿ
ದೇಶಕಾಕು.