This page has not been fully proofread.

೧೭೩
 
ಸಂಗೀತ ಪಾರಿಭಾಷಿಕ ಕೋಶ
 
(೭) ಪಡಯನಿಕಳಿ-ಇದು ಯುದ್ಧ ಭೂಮಿಗೆ ಸೈನ್ಯವು ಹೋಗುವ ಸಿದ್ಧತೆ
ಯನ್ನು ಚಿತ್ರಿಸುತ್ತದೆ.
 
ಕಳ್ಳಿಯೆತ್ತನಾಗಸ್ವರ-ಇದು ನವರತ್ನ ಖಚಿತವಾದ ನಾಗಸ್ವರ,
ಪೀಪಿಯ ಕೆಳಭಾಗದಲ್ಲಿ ನವರತ್ನಗಳನ್ನು ಅಳವಡಿಸಿದ್ದಾರೆ
ಇಂತಹ ನಾಗಸ್ವರವನ್ನು
ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನವಾಗಿ ಕೊಡುತ್ತಾರೆ. ಹಿಂದೆ ತಮಿಳು ನಾಡಿನಲ್ಲಿ
ಇಂತಹ ಸ್ಪರ್ಧೆಗಳು ಹೆಚ್ಚಾಗಿ ನಡೆಯುತ್ತಿದ್ದು ವು
ಈ ಶತಮಾನದ ಆದಿಭಾಗದಲ್ಲಿ
 
ಕೃಷ್ಣ ಮತ್ತು ಕುಪ್ಪನ್ ಎಂಬ ಇಬ್ಬರು ನಾಗಸ್ವರ ವಿದ್ವಾಂಸರಲ್ಲಿ ತಿರುವೋತಿಯೂರು
ತ್ಯಾಗಯ್ಯರ್‌ರವರ ಅಧ್ಯಕ್ಷತೆಯಲ್ಲಿ ಮದ್ರಾಸಿನ ಕೃಷ್ಣ ದೇವಾಲಯದಲ್ಲಿ ಸ್ಪರ್ಧೆ ನಡೆದು
ಕುಪ್ಪನಿಗೆ ಈ ಬಹುಮಾನವನ್ನು ಕೊಡಲಾಯಿತು.
 
ಕವಿಕುಂಜರ-ಶಿವಗಂಗೆಯ ರಾಜ ಗೌರೀವಲ್ಲಭನು ಕವಿ ಮತ್ತು ವಾಗ್ಗೇಯ
ಕಾರರಾಗಿದ್ದ ಕೋಟೀಶ್ವರ ಅಯ್ಯರ್‌ರವರಿಗೆ ಕೊಟ್ಟ ಬಿರುದು. ಅಂದಿನಿಂದ ಅಯ್ಯರ್
ರವರು ಕವಿಕುಂಜರಭಾರತಿ ಎಂದು ಪ್ರಸಿದ್ಧರಾದರು.
 
ಕವಿಕುಂಜರಭಾರತಿ (೧೮೧೦-೧೮೯೬)-ಇವರು ತಮಿಳುನಾಡಿನ ಪ್ರಸಿದ್ಧ
ವಾಗ್ಗೇಯಕಾರರು. ಸ್ಕಾಂದಪುರಾಣ ಕೀರ್ತನೆಗಳು, ವೆರಿಂಬಕೀರ್ತನೆಗಳು, ಅಳಗರ್
ಕುರವಂಜಿ ಎಂಬ ರಚನೆಗಳು ಇವರ ಪ್ರಮುಖ ಕೃತಿಗಳು. ಇವರು ತಮಿಳುನಾಡಿನ
ರಾಮನಾಡ್ ಜಿಲ್ಲೆಯ ಪೆರುಂಗರೆ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ
ಸುಬ್ರಹ್ಮಣ್ಯಭಾರತಿ ಮತ್ತು ತಾತ ಕೋಟೀಶ್ವರ ಭಾರತಿ ಮುಂತಾದವರೆಲ್ಲರೂ ಸಂಸ್ಕೃತ
ಮತ್ತು ತಮಿಳು ಪಾಂಡಿತ್ಯಕ್ಕೆ ಹೆಸರಾಗಿದ್ದರು. ಕವಿಕುಂಜರಭಾರತಿಯು ಚಿಕ್ಕಂದಿನಲ್ಲೇ
ತಮಿಳು, ಸಂಸ್ಕೃತ ಮತ್ತು ಸಂಗೀತದಲ್ಲಿ ಪಾಂಡಿತ್ಯವನ್ನು ಪಡೆದರು. ಮೊದಮೊದಲು
ರಚಿಸಿದ ಪದ್ಯಗಳು, ಕೀರ್ತನೆಗಳು ಮತ್ತು ಪದಗಳು ಹಲವರ ಮೆಚ್ಚುಗೆ ಪಡೆದುವು.
ಇವರಿಗೆ ತಮಿಳು ಪದಗಳ ವಾಗ್ಗೇಯಕಾರರಾಗಿದ್ದ ಮಧುರಕವಿ ಭಾರತಿಯ ಸ್ನೇಹ
ಲಭಿಸಿತು. ಕವಿಕುಂಜರರ ಕೃತಿಗಳಲ್ಲಿ ಭಕ್ತಿರಸ, ಸಂಗೀತ, ಪದಲಾಲಿತ್ಯ, ಉತ್ತಮ
ಭಾವನೆಗಳು ತುಂಬಿವೆ. ಇವುಗಳನ್ನು ತನ್ನ ಸಂಸ್ಥಾನ ವಿದ್ವಾಂಸರಿಂದ ಕೇಳಿ
ಆಕರ್ಷಿತನಾದ ಶಿವಗಂಗೆಯ ದೊರೆ ಗೌರೀವಲ್ಲಭರಾಜನು ಕವಿಕುಂಜರರನ್ನು ತನ್ನ
ಆಸ್ಥಾನಕ್ಕೆ ಆಹ್ವಾನಿಸಿ ಅವರ ಕೃತಿಗಳನ್ನು ಹಾಡಿಸಿ ಕೇಳಿ ಸಂತೋಷಪಟ್ಟು ಅವರಿಗೆ
ಕವಿಕುಂಜರ ಎಂಬ ಬಿರುದನ್ನಿತ್ತು ಗೌರವಿಸಿದನು ಮತ್ತು ತನ್ನ ಆಸ್ಥಾನ ವಿದ್ವಾಂಸ
ರನ್ನಾಗಿ ನೇಮಿಸಿದನು. ಅಂದಿನಿಂದ ಇವರು ಕವಿಕುಂಜರಭಾರತಿಯೆಂದು ಪ್ರಸಿದ್ಧ
 
ರಾದರು.
 

 
ರಾಜನ ಹಿರಿಯ ಅಣ್ಣ ಪೊನ್ನು ಸ್ವಾಮಿತೇವರ್ ಕೋರಿಕೆಯಂತೆ ಸ್ಕಾಂದ
ಪುರಾಣದ ಕೀರ್ತನೆಗಳನ್ನು ರಚಿಸಲು ೧೮೬೫ರಿಂದ ತೊಡಗಿ ಐದು ವರ್ಷಗಳಲ್ಲಿ
ಸಂಪೂರ್ಣಗೊಳಿಸಿದರು. ಈ ರಚನೆಗಳನ್ನು ಭಾರತಿಯ ಸೋದರಳಿಯ
ಆಳುಡೈ ಯಾರ್ ಕೋವಿಲ್ ಆತ್ಮನಾಥ ಭಾಗವತರು ಪ್ರಚಾರಕ್ಕೆ ತಂದರು.