This page has been fully proofread once and needs a second look.

೧೭೨
 
ಸ ರಿ ಗ ಮ ಮ ಪ ದ ಸ ಸ
ಸ ದ ಸ ಮ ರಿ ಸ
 
ಸ ರಿ ಗ ಮ ಮ ಪ ದ ಸ ಸ
ಸ ದ ಸ ಮ ರಿ ಸ
 
ಕಲಿಕಿ-
ಈ ರಾಗವು ೧೩ನೆಯ ಮೇಳಕರ್ತ ಗಾಯಕಪ್ರಿಯದ ಒಂದು

ಜನ್ಯರಾಗ
 

ಸ ರಿ ಗ ಮ ಪ ದ ನಿ ಸ

ಸ ನಿ ದ ಪ ಮ ರಿ ಸ
 

 
ಕಲಿಕವಸಂತ-
ಈ ರಾಗವು ೪೩ನೆಯ ಮೇಳಕರ್ತ ಗವಾಂಭೋದಿಯ
 

 

ಸಂಗೀತ ಪಾರಿಭಾಷಿಕ ಕೋಶ
 

ಒಂದು ಜನ್ಯರಾಗ,
 

ಸ ಗ ಮ ಪ ದ ನಿ ಸ

ಸ ನಿ ಪ ಮ ರಿ ಸ

 
ಕಲ್ಲಿನಾಥ -
ಶಾರ್ಙ್ಗದೇವನ ಸಂಗೀತರತ್ನಾಕರವೆಂಬ ಗ್ರಂಥಕ್ಕೆ ಕಲಾನಿಧಿ

ಎಂಬ ವ್ಯಾಖ್ಯಾನವನ್ನು ರಚಿಸಿದ್ದಾನೆ.

ಇವನು ವಿಜಯನಗರದ ದೊರೆ ಇಮ್ಮಡಿ

ದೇವರಾಯನ (೧೪೪೬-೧೪೬೫) ಕಾಲದಲ್ಲಿದ್ದ ಲಾಕ್ಷಣಿಕ, ಸಂಗೀತವಲ್ಲದೆ ಶ್ರುತಿ,

ಸ್ಮೃತಿ, ಉವನಿಷತ್ತು, ವ್ಯಾಕರಣ, ತರ್ಕ, ಅಲಂಕಾರ, ಛಂದಸ್ಸು, ಆಯುರ್ವೇದ,

ಕೌಲತಂತ್ರ ಇತ್ಯಾದಿ ಅನೇಕ ಶಾಸ್ತ್ರಗಳಲ್ಲಿ ಅನುಪಮ ಪರಿಣತಿಯನ್ನು ಪಡೆದಿದ್ದನು.

ಸಂಗೀತದ ವಿಶ್ವಕೋಶದಂತಿರುವ ಸಂಗೀತರತ್ನಾ ಕರಕ್ಕೆ ಇವನು
 

ಬರೆದಿರುವ
 

ವ್ಯಾಖ್ಯಾನವೂ ನಿಷ್ಕೃಷ್ಟವೂ, ನೇರವೂ, ಹೃದಯಸ್ಪರ್ಶಿಯೂ, ವಿದ್ವತ್ ಪೂರ್ಣವೂ

ಆದ ಶ್ರೇಷ್ಠ ಗ್ರಂಧ ಇವನಿಗೆ ಅಭಿನವಭರತಾಚಾರ್ಯ, ರಾಯಬಯಕಾರ ಅಥವಾ

ರಾಜವಾಗ್ಗೇಯಕಾರ ಎಂಬ ಬಿರುದುಗಳಿದ್ದುವು.
 

 
ಕಲ್ಲಿನಾಥಮತ
ಕಲ್ಲಿನಾಧನು ಪ್ರತಿಪಾದಿಸಿರುವ ಸಂಗೀತ ಪದ್ಧತಿ.

 
ಕಳಿನೃತ್ಯ, ಆಟ ಅಥವಾ ನಾಟಕ-
ಈ ಆಟವು ಕೇರಳ ರಾಜ್ಯದಲ್ಲಿ

ಪ್ರಚಲಿತವಾಗಿದೆ ಇದರಲ್ಲಿ ಹಲವು ಬಗೆಗಳಿವೆ.
 

(೧) ಕೆಂಬಡಿಕಳಿ-ಇದು ಗಂಡಸರ ಕೋಲಾಟ, ಉದ್ದವಾದ ಕೋಲು

ಗಳನ್ನು ಹಿಡಿದು ಆಡುತ್ತಾರೆ
 

(೨) ಪರುತ್ತಿವೆಟ್ಟು ಕಳೆ ಹತ್ತಿಯನ್ನು ಬೆಳೆದು ಪಡೆಯುವ ವಿಧಾನಗಳನ್ನು

ಸೂಕ್ತವಾದ ನಟನೆ, ಚಲನೆಗಳಿಂದ ಚಿತ್ರಿಸಲಾಗುವುದು.
 
(

೩) ಕೇಳಿರುಕ- ಹುಂಜನ ಕಾಳಗದ ವಿವಿಧ ಹಂತಗಳನ್ನು

ಚಿತ್ರಿಸುವ ಆಟ.
 

(೪) ನಾಗಚ್ಚುಟುಕಳಿ-ಸರ್ಪಗತಿಯನ್ನು ಗಂಡಸರು ತಮ್ಮ ಚಲನೆಗಳಿಂದ

ತೋರಿಸುತ್ತಾರೆ.
 

(೫) ಕೈಯಡಿಚ್ಚು ಕಳಿ ಗಂಡಸರು ಆಡುವ ಕುಮ್ಮಿ ಆಟ.

(೬) ತಿರುಮರಿಚ್ಛ೮ಕಳಿ ಸಮುದ್ರದ ಅಲೆಗಳಂತಿರುವ ಕುಣಿತ
 
=======