This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಷಡ್ಡವು ಗ್ರಹ, ಅಂಶ ಮತ್ತು ನ್ಯಾಸಸ್ವರ, ಕರುಣ ಮತ್ತು ಶೋಕರಸ ಪ್ರಧಾನವಾದ
ಸಾರ್ವಕಾಲಿಕ ರಾಗ, ಧೈವತ ನಿಷಾದಗಳು ರಾಗ ಛಾಯಾ ಸ್ವರಗಳು. ಈ ರಾಗಕ್ಕೆ
ಕಟ್ಟಡ ಎಂಬ ಹೆಸರೂ ಇದೆ. ತ್ಯಾಗರಾಜ ವಿರಚಿತ ಸಮಯಮುಏಮರಕೇ,
ಶ್ಯಾಮಾಶಾಸ್ತ್ರಿ ವಿರಚಿತ ಪಾರ್ವತಿ ನಿನ್ನು ನೇ ಮತ್ತು ತಳಗಂಬಾಡಿ ಪಂಚನದ
ಅಯ್ಯರ್ ವಿರಚಿತ ಸರಸಿಜನೇತ್ರ ಸಮಯಮಿದೇರ ಎಂಬ ರಚನೆಗಳು ಈ ರಾಗದ
ಪ್ರಸಿದ್ಧ ಕೃತಿಗಳು.
 
ಕಡಂ-ಇದು ಕ್ರಿ. ಶ ೧೦ನೆ ಶತಮಾನದ ಒಂದು ತಮಿಳು ಗ್ರಂಥ.
ಇದರಲ್ಲಿ ಸಂಗೀತದ ಕೆಲವು ಪ್ರಸ್ತಾಪಗಳಿವೆ.
 
ಕಲಂಯಾಳ್-ದಕ್ಷಿಣ ಭಾರತದ ಪುರಾತನ ಯಾಳ್ ವಾದ್ಯ, ಪೆರುಂಗಲಂ
ಎಂಬುದು ದೊಡ್ಡ ಯಾಳ್. ಇದರಲ್ಲಿ ನೂರು ತಂತಿಗಳಿದ್ದುವು.
 
ಕಲಹಂಸ ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು ಜನ್ಯ
 
ರಾಗ.
 
೧೬೯
 
ಸ ರಿ ಮ ಪ ದ ನಿ ದ ಸ
ಸ ನಿ ದ ಪ ಮ ರಿ ಸ
 
ಋಷಭ ಮತ್ತು ನಿಷಾದವು ದೀರ್ಘ ಮತ್ತು ಜೀವಸ್ವರಗಳು. ಕರುಣರಸ ಪ್ರಧಾನ
 
ವಾದ ಸಾರ್ವಕಾಲಿಕ ರಾಗ,
 
ಕಲಹಾಂತರಿತ (ಕಲಹಂತರಿ)-ಭರತನಾಟ್ಯಶಾಸ್ತ್ರದಂತೆ ನಾಯಕಿಯರ
ಮೂಲಭೇದಗಳು ಎಂಟು ವಿಧ. ಅವುಗಳಲ್ಲಿ ಇದೊಂದು ಬಗೆಯ ನಾಯಕಿ. ಇವಳು
ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಮಾತೆತ್ತಿದರೆ ಜಗಳಕಾದು, ಪತಿಯನ್ನು
ಅವಮಾನಿಸಿ ನಂತರ ಚಿಂತಿಸುವವಳು ಕಲಹಾಂತರಿತ.
 
ಕಳಂಹಾಡು-ಇವು ಮಲಬಾರಿನಲ್ಲಿ ಕಾಳೀಪೂಜೆಯಲ್ಲಿ ಹಾಡುವ ಹಾಡು
ಗಳು. ಇವುಗಳನ್ನು ಹಾಡುವಾಗ ಕೈ ಮಣಿ ಮತ್ತು ನಂದು ಎಂಬ ವಾದ್ಯಗಳನ್ನು
ವಕ್ಕವಾದ್ಯಗಳನ್ನಾಗಿ ನುಡಿಸುವರು.
 
ಕಲಾಧರ್ಮ-ಸಂಗೀತ ಕಚೇರಿಗೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸು
ವುದು ಕಲಾಧರ್ಮ, ಒಂದು ಕೃತಿಯನ್ನು ಹಾಡಬೇಕಾದರೆ ಅದನ್ನು ವಾಗ್ಗೇಯ
ಕಾರನು ಹೇಗೆ ರಚಿಸಿರುವನೋ ಅದೇ ರೀತಿಯಲ್ಲಿ ಹಾಡಬೇಕು. ಕೀರ್ತನೆಗಳನ್ನು
ತಮ್ಮ ಪ್ರತಿಭೆಯಿಂದ ಸ್ವಶೈಲಿಯಲ್ಲಿ ಹಾಡಲು ಸಂಗೀತ ವಿದ್ವಾಂಸರು ಸ್ವತಂತ್ರರು.
ತ್ಯಾಗರಾಜ ವಿರಚಿತ ಸೀತಾಪತೇ ಮತ್ತು ಸುಜಿನ ಜೀವನ ಎಂಬ ಕೃತಿಗಳಲ್ಲಿ ಕಾಕಲಿ
ನಿಷಾದವಿಲ್ಲ. ಖಮಾಚ್ ರಾಗವು ಅವರ ಕಾಲದಲ್ಲಿ ಉಪಾಂಗರಾಗವಾಗಿತ್ತು.
೧೯ನೇ ಶತಮಾನದ ಉತ್ತರಾರ್ಧದಲ್ಲಿ ಕಾಕಲಿ ನಿಷಾದ ಪ್ರಯೋಗಮಾಡಿ ಹಾಡಲು
ಇವೆರಡು ಕೃತಿಗಳನ್ನು ಕಾಕಲಿ ನಿಷಾದವಿಲ್ಲದೆ ಹಾಡುವುದು
ಕಲಾಧರ್ಮ. ಈ ಕೃತಿಗಳನ್ನು ಹಾಡುವ ಮೊದಲು ಆಲಾಪನೆ ಮಾಡುವಾಗ
 
ಆರಂಭವಾಯಿತು.