This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಲ್ಯಾಣ ಸೌಗಂಧಿಕಂ-ತಿರುವಾಂಕೂರಿನ ಮಹಾರಾಜ ಕಾರ್ತಿಕ ತಿರು
ನಾಳ್ ರಾಮವರ್ಮ ವಿರಚಿತವಾದ ಒಂದು ಕಥಕಳಿ ರೂಪಕ,
 
ಕಣ್ಣಿ-ಉಡುವಾದ್ಯದ ಬಲಮುಖದ ಮೇಲೆ ಕಟ್ಟಿರುವ
ಕೂದಲಿನ ದಾರ,
 
ಇದು ಅನುರಣನದ ಚರ್ಮದ ಭಾಗದ ಜೊತೆಗೆ ಹಿತಕರವಾದ
ಶಬ್ದವನ್ನು ಕೊಡುತ್ತದೆ. ಕೆಲವು ವಾದ್ಯಗಳಲ್ಲಿ ಎರಡು ದಾರಗಳಿರುತ್ತವೆ.
 
ಕಣ್ಣು ಸ್ವಾಮಿನಟುವನಾರ್-ಇವರು ೧೯ನೆ ಶತಮಾನದಲ್ಲಿದ್ದ ತಂಜಾ
ವೂರು ಸಹೋದರ ಚತುಷ್ಟಯರ ಮನೆತನದವರು. ಇವರು ಬರೋಡಾಕ್ಕೆ ಹೋಗಿ
ಭರತನಾಟ್ಯಶಾಲೆಯನ್ನು ಸ್ಥಾಪಿಸಿದವರಲ್ಲಿ ಮೊದಲಿಗರು. ಅಲ್ಲಿದ್ದ ಪ್ರಸಿದ್ಧ ಭರತ
 
ನಾಟ್ಯ ಕಲಾವಿದೆಯರಾಗಿದ್ದ ಗೌರಿ ಮತ್ತು ಕಾಂತಿಮತಿ ಎಂಬುವರು ಇವರ ಶಿಷ್ಯ
ರಾಗಿದ್ದರು.
 
೧೬೭
 
$9
 
ಕಣ್ಣು ಸ್ವಾಮಿರಾವ್ ಎಂ. ಬಿ. (೧೮೫೫-೧೯೩೬)-ಇವರು ಪುದುಕೋಟೆ
ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಸ್ವರಬತ್ ವಾದ್ಯವನ್ನು ನುಡಿಸುತ್ತಿದ್ದರು.
ಇವರ ಕಿರಿಯ ಸಹೋದರ ಚಿಟ್ಟು ಸ್ವಾಮಿರಾವ್ ಸ್ವರಬತಿ ನುಡಿಸುತ್ತಿದ್ದರು.
 
ಕಯಲ್-ಕಾಲೆಜ್ಜೆ. ನರ್ತನ ಮಾಡುವವರು ಕಾಲುಗಳಿಗೆ ಈ ಗೆಜ್ಜೆಗಳನ್ನು
ಕಟ್ಟಿಕೊಳ್ಳುತ್ತಾರೆ
 
ಕಯುಗುಮಲೆ-ಈ ಸ್ಥಳವು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ
ಕೋವಿಲ್ಟ್ಟ ಎಂಬ ಸ್ಥಳದಿಂದ ೧೨ ಮೈಲಿ ದೂರದಲ್ಲಿದೆ. ಸಂಗೀತ ಶಿಲ್ಪ ಮತ್ತು
ವಾಸ್ತುಶಿಲ್ಪದ ದೃಷ್ಟಿಯಿಂದ ಇದೊಂದು ಮುಖ್ಯವಾದ ಸ್ಥಳ. ಇಲ್ಲಿಯ ಸ್ಥಳ
ಪುರಾಣದಂತೆ ಜಟಾಯುವಿನ ಅಣ್ಣನಾದ ಸಂಪಾತಿಯು ಇಲ್ಲಿಯ ದೇವಾಲಯದಲ್ಲಿ
ಪೂಜೆ ಮಾಡಿದನು. ಇಲ್ಲಿಯ ದೇವರಾದ ಸುಬ್ರಹ್ಮಣ್ಯನಿಗೆ ಇತರ ಸ್ಥಳಗಳಲ್ಲಿರುವಂತೆ
ಆರುಮುಖಗಳಿಲ್ಲ. ಅದಕ್ಕೆ ಬದಲು ಒಂದು ಮುಖ ಮತ್ತು ಆರು ಕೈಗಳಿವೆ.
ಸುಬ್ರಹ್ಮಣ್ಯನ ರಕ್ಷಿತೋಹಂ ಎಂಬ ಶುದ್ಧ ಧನ್ಯಾಸಿ ರಾಗದ
ಕೃತಿಯಲ್ಲಿ ಮುತ್ತು ಸ್ವಾಮಿ ದೀಕ್ಷಿತರು ಕಯುಗುಮಲೆಯನ್ನು ಕುರಿತು ಹೇಳಿದ್ದಾರೆ.
ಈ ಕೃತಿಯ ಕನಕಶೈಲ ವಿಹಾರೇಣ ಎಂಬುದು ಸ್ಥಳ ಮುದ್ರೆ, ಅರುಣಗಿರಿನಾದರು
ಇಲ್ಲಿಯ ಸುಬ್ರಹ್ಮಣ್ಯನನ್ನು ಕುರಿತು ಕೆಲವು ತಿರುಪ್ಪುಗಳಗಳನ್ನು ರಚಿಸಿದ್ದಾರೆ ರೆ.
ಇತ್ತೀಚೆಗೆ ಕಾವಡಿಚೆಂದ್ ಹಾಡುಗಳಿಗೆ ಪ್ರಸಿದ್ಧರಾದ ಅಣ್ಣಾಮಲೈ ರೆಡ್ಡಿ ಯಾರ್
ಕಯುಗಾಚಲ ಮುರುಗನನ್ನು ಸ್ತುತಿಸಿ ಕೆಲವು ಸುಂದರವಾದ ಹಾಡುಗಳನ್ನು
 
ಇದೊಂದು ವಿಶೇಷ
 
ರಚಿಸಿದ್ದಾರೆ. ಮುರುಗನ್ ತಿರುಮಲ್ ಮುರುಗನ್ ಪೆರು ಎಂಬ ಆಶಾಣರಾಗದ
ಕೃತಿಯು ಇವುಗಳಲ್ಲಿ ಬಹಳ ಪ್ರಸಿದ್ಧ. ಈ ದೇವಾಲಯದ ಒಂದು ಫರ್ಲಾಂಗ್
ದೂರದಲ್ಲಿ ಮಹಾಬಲಿಪುರದ ಪಗೋಡದಂತಿರುವ ವಾಸ್ತುಶಿಲ್ಪವಿದೆ. ಇದರಲ್ಲಿ ಸುಂದರ
ವಾದ ವಿಗ್ರಹಗಳನ್ನು ಕೆತ್ತಿದೆ. ಇವು ಹಲವು ನಾಟ್ಯಭಂಗಿಗಳಲ್ಲಿವೆ. ತಾಳ, ಶಂಖ,
ಮದ್ದಳೆ, ಕಮಾನಿನಿಂದ ನುಡಿಸುವ ತಂತೀವಾದ್ಯ, ಕೊಳಲು, ಮಡಕವಾದ್ಯ, ರುದ್ರ