This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅವರು
 
ಕಲ್ಯಾಣಕೃಷ್ಣ ಭಾಗವತರು-
ಇವರು ೧೯ನೆ ಶತಮಾನದಲ್ಲಿದ್ದ ತಿರು

ವಾಂಕೂರಿನ ದೊರೆ ಆಯಿಲಂ ತಿರುನಾಳರ ಆಸ್ಥಾನದ ಪ್ರಸಿದ್ಧ ವೈಣಿಕರು.

ವೀಣೆಯನ್ನು ನುಡಿಸುತ್ತಿದ್ದ ರೀತಿ ಬಹಳ ಮೇಲ್ಮಟ್ಟದ್ದಾಗಿತ್ತು. ಅತಿದ್ರುತ ಕಾಲದಲ್ಲಿ

ನುಡಿಸುವುದರಲ್ಲಿ ಪ್ರವೀಣರಾಗಿದ್ದರು.
 

 
ಕಲ್ಯಾಣಗೌರಿ-
ಈ ರಾಗವು ೩೯ನೆ ಮೇಳಕರ್ತ ರೂಲವರಾಳಿಯ ಒಂದು
 

ಜನ್ಯರಾಗ,
 

ಸ ರಿ ಗ ರಿ ಮ ಪ ದ ನಿ ಸ

ಸ ದ ಪ ಗ ರಿ ಸ
 

 
ಕಲ್ಯಾಲತರಂಗಿಣಿ-
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ

ಒಂದು ಜನ್ಯರಾಗ
 

ಸ ರಿ ಗ ಮ ಪ ಮ ನಿ ದ ನಿ ಸ
 

 

ದ ನಿ ಪ ದ ಪ ಮ ಗ ಮ ರಿ ಗ ಸ

 
ಕಲ್ಯಾಣದಾಯಿನಿ-
ಈ ರಾಗವು ೬೫ನೆಯ ಮೇಳಕರ್ತ ಮೇಚ

ಕಲ್ಯಾಣಿಯ ಒಂದು ಜನ್ಯರಾಗ,
 

ಆ :
 
ಸ ರಿ ಗ ಮ ದ ನಿ ಸ
ಸ ರಿ ಗ ಮ ದ ನಿ ಸ
ಅ: ಸ ನಿ ದ ಮ ಗ ರಿ ಸ
 
વ્હેણ
 
ಅ :
 

 
ಕಲ್ಯಾಣನಾಟ
ಅಹೋಬಲನ ಸಂಗೀತಪಾರಿಜಾತವೆಂಬ ಗ್ರಂಥದಲ್ಲಿ ಉಕ್ತ
 

ವಾಗಿರುವ ಒಂದು ರಾಗ,
 

 
ಕಲ್ಯಾಣಭಾರತಿ
೧೯ನೆ ಶತಮಾನದಲ್ಲಿದ್ದ ಪುದುಕೋಟೆ ಸಂಸ್ಥಾನದ

ಆಸ್ಥಾನ ವಿದ್ವಾಂಸರಾಗಿದ್ದ ಒಬ್ಬ ಪ್ರಸಿದ್ಧ ಗಾಯಕ,
 

 
ಕಲ್ಯಾಣಿ
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿ ರಾಗ, ಇದು

ಪ್ರತಿ ಮಧ್ಯಮ ರಾಗಗಳಲ್ಲಿ ಅತ್ಯಂತ ಜನಪ್ರಿಯವಾದುದು.
 

ಸ ರಿ ಗ ಮ ಪ ದ ನಿ ಸ

ಸ ನಿ ದ ಪ ಮ ಗ ರಿ ಸ
 

ಇದು ಸರ್ವಸ್ವರಗಮಕವರಿಕರಕ್ತಿರಾಗ, ಇದಕ್ಕೆ ಸುಮಾರು ೮೦ ಜನ್ಯರಾಗಗಳಿವೆ.

ಆರೋಹಣ ಮತ್ತು ಅವರೋಹಣದಲ್ಲಿರುವ ಎಲ್ಲಾ ಸ್ವರಗಳು ಛಾಯಾಸ್ವರಗಳು,

ರಿಷಭ, ಗಾಂಧಾರ, ಧೈವತ, ನಿಷಾದಗಳು ಛಾಯಾ ಸ್ವರಗಳು, ಮಧ್ಯಮ ವರ್ಜ್ಯ

ಪ್ರಯೋಗಗಳು ರಾಗದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಸಾಯಂಕಾಲದ ವೇಳೆ

ಯಲ್ಲಿ ಹಾಡಲು ಬಹು ಪ್ರಶಸ್ತವಾದ ರಾಗ. ಈ ರಾಗದ ಕೃತಿಗಳು ಸ, ರಿ, ಗ, ಪ

ನಿ, ಸ್ವರಗಳಿಂದ ಆರಂಭವಾಗುತ್ತವೆ. ಇದು ಪುರಾತನ ಷಡ್ವಗ್ರಾಮದ ಗಾಂಧಾರ

ಮೂರ್ಛನ ಮತ್ತು ಮೊದಲನೆ ಪ್ರತಿ ಮಧ್ಯಮ ರಾಗ, ಎಲ್ಲಾ ವಾಗ್ಗೇಯಕಾರರು