This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
(೨) ನಿನುಮಿಂಚಿನ-ಆದಿ ತೋಡಿ ವರ್ಣ
(೭) ಶ್ರೀಕಾಮಾಕ್ಷಿ-ಆದಿ-ಸಾರಂಗ
(೮) ಪರಮಪಾವನೀ - ಆದಿ ಅಠಾಣ
 
೧೦
 
ಶರಭಶಾಸ್ತ್ರಿಗಳ ಗುರು ಮೇಳಕ್ಕಾರ ಗೋವಿಂದನ್ ಮತ್ತು ವೀಣಾಧನಂ ಅವರ ಗುರು
ತಂಜಾವೂರು ಕಾಮಾಕ್ಷಿ ಇವರಿಬ್ಬರೂ ಶಾಸ್ತ್ರಿಗಳ ಪ್ರಸಿದ್ಧ ಗುರುಗಳು.
ತಮಿಳುನಾಡಿನ
 
ತಿರುಚಿರಪ್ಪಳ್ಳಿ
 
ಅಣ್ಣಾ ಸ್ವಾಮಿ ಭಾಗವತರು -ಇವರು
ಜಿಲ್ಲೆಯ ಪೇಟೆ ಎಂಬಲ್ಲಿ ೧೮೯೯ರಲ್ಲಿ ಜನಿಸಿದರು. ತಿರುವಯ್ಯಾರ್ ಸಂಸ್ಕೃತ ಕಾಲೇಜಿ
ನಲ್ಲಿ ಭೂವರಾಹಾಚಾರ್ ಮತ್ತು ಮಧುರೆ ರಾಮಸುಬ್ಬಶಾಸ್ತ್ರಿಗಳಲ್ಲಿ ಶಾಸ್ತ್ರಾಧ್ಯಯನ
ಮಾಡಿ, ತಿರುಪ್ಪಯಣಂ ಪಂಚಾಪಕೇಶ ಭಾಗವತರಲ್ಲಿ ಕಥಾಕಾಲಕ್ಷೇಪವನ್ನೂ,
ಮಾತೃಮಂಗಲಂ ನಟೇಶ ಅಯ್ಯರ್‌ರವರಲ್ಲಿ ಸಂಗೀತವನ್ನೂ ಕಲಿತು ಹರಿಕಥೆ ಮಾಡುವು
ದರಲ್ಲಿ ಅತ್ಯಂತ ಪ್ರಸಿದ್ಧರಾದರು. ರಕ್ತಿರಾಗಗಳನ್ನು ಅತ್ಯಂತ ಭಾವಪೂರ್ವಕವಾಗಿ
ಮತ್ತು ಸೂಕ್ತವಾಗಿ ಬಳಸುವುದರಲ್ಲಿ ಹಾಗೂ ಕಥಾ ನಿರೂಪಣಾ ಕೌಶಲ್ಯದಲ್ಲಿ ಪ್ರಸಿದ್ಧ
ರಾಗಿದ್ದರು.
 
ಅಣಿ ಸಂಗೀತರಚನೆಗೆ ಸೌಂದರ್ಯವನ್ನೀಯುವ ವಿಶೇಷಾಂಶ, ಸಂಗತಿ,
ಸ್ವರಾಕ್ಷರ, ಚಿಟ್ಟೆಸ್ವರ, ಸ್ವರಸಾಹಿತ್ಯ ಇವೆಲ್ಲವೂ ಕೃತಿಗೆ ಸೌಂದರ್ಯವನ್ನುಂಟು
ಮಾಡುತ್ತವೆ. ಧಾತುವಿಗೆ ಸಂಬಂಧಿಸಿದಂತೆ ಸಂಗತಿ, ಸಾಹಿತ್ಯಕ್ಕೆ ಸಂಬಂಧಿಸಿದಂತೆ
ಅಂತ್ಯಪ್ರಾಸ ಮತ್ತು ಅನುಪ್ರಾಸ, ಧಾತು ಮಾತುಗಳೆರಡಕ್ಕೂ ಸಂಬಂಧಿಸಿದ
ಸ್ವರಾಕ್ಷರಗಳು, ಗೋಪುಚ್ಛಯತಿ, ಶೋತೋವಹ ಯತಿ ಇವೆಲ್ಲವೂ ಅಣಿಗಳು,
 
ಅತಿಕೋಮಲ ಕೋಮಲಸ್ವರಕ್ಕಿಂತ ಒಂದು ಶ್ರುತಿ ಕಡಿಮೆಯಿರುವ ಸ್ವರ.
ಅತಿಕೋಮಲ-ಇದು ಅತಿಕೋಮಲ್ ಸ್ವರಕ್ಕಿಂತ ಒಂದು ಶ್ರುತಿ
 
ಕಡಿಮೆಯಿರುವ ಸ್ವರ,
 
ಅತಿಚಿತ್ರತಮನಾರ್ಗ- ಇದು ಷಣ್ಮಾರ್ಗಗಳಲ್ಲಿ ಆರನೆಯದು. ಇದರಲ್ಲಿ
ಪ್ರತಿತಾಳಾಕ್ಷರಕ್ಕೆ ೧/೪ ಮಾತ್ರೆ ಕಾಲವಿರುತ್ತದೆ. ಮುತ್ತು ಸ್ವಾಮಿ ದೀಕ್ಷಿತರ
ಶ್ರೀಮಹಾಗಣಪತಿ ಎಂಬ ಗೌಳರಾಗದ ಕೃತಿಯು ಈ ಮಾರ್ಗದಲ್ಲಿದೆ
ಅತಿಕ್ರಾಂತ-ಭರತನಾಟ್ಯದ ಹದಿನಾರು ಬಗೆಯ ಆಕಾಶಚಾರಿಗಳಲ್ಲಿ
ಮೊದಲನೆಯದು. ಕುಂಚಿತ ಪಾದವನ್ನು ಮೇಲೆತ್ತಿ, ಮುಂದಕ್ಕೆ ಚಾಚಿ ಮತ್ತೆ
ಮೇಲೆ, ಪಕ್ಕದಲ್ಲಿಡುವುದು ಅತಿಕ್ರಾಂತ.
 
ಅತಿದೇಶ-ಭರತನಾಟ್ಯದ ವಾಚಕಾಭಿನಯದಲ್ಲಿ ಒಂದು ವಿಧ. ನೀನು
ಹೇಳಿದ್ದನ್ನೇ ನಾನು ಹೇಳಿದೆ ಮುಂತಾದ ರೀತಿಯ ವಾಕ್ಯಾಭಿನಯ.
ಅತಿಭಂಗಿ-ಭರತನಾಟ್ಯದ ನಾಲ್ಕು ಬಗೆಯ
 
ಭಾವಭಂಗಿಮಗಳಲ್ಲಿ ಒಂದು
 
ವಿಧ. ಇದು ಸಮಭಂಗಿ, ಅಭಂಗಿ, ತ್ರಿಭಂಗಿಗಳನ್ನು ಮಾರಿ ವಿವಿಧ ಕೋನಾಂತರ
ಗಳನ್ನು ಸೂಚಿಸುತ್ತವೆ.