This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕಲ್ಲೋಲಬಂಗಾಳ-
ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ

ಒಂದು ಜನ್ಯರಾಗ
 
ಸ ರಿ ಮ ಸ ನಿ ದ ಸ
ಸ ನಿ ಪ ದ ಮ ಗ ರಿ ಸ
 

ಸ ರಿ ಮ ಸ ನಿ ದ ಸ
ಸ ನಿ ಪ ದ ಮ ಗ ರಿ ಸ
 
ಕಲ್ಲೋಲಧ್ವನಿ-
ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 

 
ಜನ್ಯರಾಗ,
 
ಸ ರಿ ಮ ಗ ಮ ಪ ನಿ ದ ನಿ ಸ
 
ಸ ನಿ ದ ಪ ಮ ನಿ ದ ಮ ಗ ಸ ರಿ ಸ
 

ಸ ರಿ ಮ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ನಿ ದ ಮ ಗ ಸ ರಿ ಸ
 
ಕಲ್
ಲೋಲಸಾವೇರಿ
ಈ ರಾಗವು ೨೫ನೆಯ ಮೇಳಕರ್ತ ಮಾರರಂಜನಿಯ

ಒಂದು ಜನ್ಯರಾಗ,
 
ಆ .
 
ಸ ರಿ ಮ ಪ ವ ದ ಸ
ಸ ನಿ ದ ಪ ಮ ಗ ರಿ ಸ
 

ಸ ರಿ ಮ ಪ ವ ದ ಸ
ಸ ನಿ ದ ಪ ಮ ಗ ರಿ ಸ
 
ಕಲ್ಲೋಲಿನಿ-
ಬೃಹದ್ಧರ್ಮ ಪುರಾಣೋಕ್ತವಾಗಿರುವ ವಿಭಾಷಾರಾಗದ ಒಂದು
 

ದಾಸಿರಾಗ.
 
೧೬೩
 

 
ಕಲೋಪಲತ
ರಿಷಭವು ಆಧಾರಸ್ವರವಾಗಿರುವ ಮಧ್ಯಮ ಗ್ರಾಮ

ಮೂರ್ಛನೆ. ಇದು ಈಗಿನ ತೋಡಿಮೇಳದಂತಿದೆ.
 

ರಾಗ.
 

 
ಕಲ್ಪಲತ-
ಶಾರ್ಙ್ಗದೇವನ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿ

ರುವ ಒಂದು ನಾಟ್ಯಶಾಸ್ತ್ರ ಗ್ರಂಥ.
 

 
ಕಲ್ಪತರು-
ಅಹೋಬಲನ ಸಂಗೀತಪಾರಿಜಾತದಲ್ಲಿ ಉಕ್ತವಾಗಿರುವ ಒಂದು
 

 
ಕಲ್ಪವಲ್ಲಿ-
ಶಾರ್ಙ್ಗದೇವನ ಸಂಗೀತರತ್ನಾಕರದಲ್ಲಿ ಉಕ್ತವಾಗಿರುವ ಒಂದು

ನಾಟ್ಯಶಾಸ್ತ್ರ ಗ್ರಂಥ.
 

 
ಕಲ್ಪಿತ ಮೇಳಕರ್ತಗಳು
ವೆಂಕಟಮಖಿಯ ೭೨ ಮೇಳಗಳಲ್ಲಿ ಆ ಕಾಲದಲ್ಲೇ

ಪ್ರಸಿದ್ಧವಾಗಿದ್ದ ೧೯ ಮೇಳಗಳು. ಮಿಕ್ಕ ೫೩ ಮೇಳಗಳನ್ನು ಕಲ್ಪಮಾನ ಮೇಳಗಳು

ಅಂದರೆ ಆಗತಾನೆ ಜನಪ್ರಿಯವಾಗುತ್ತಿದ್ದ ಮೇಳಗಳು ಮತ್ತು ಕಲ್ಪಯಿಮಾನ ಮೇಳ

ಗಳು ಅಥವಾ ಮುಂದೆ ಪ್ರಸಿದ್ಧವಾಗುವಂಧ ಮೇಳಗಳು ಎಂದು ವರ್ಗೀಕರಿಸಲಾಗಿತ್ತು,

 
ಕಲ್ಯಾಣ ಕೇಸರಿ-
ಈ ರಾಗವು ೩೧ನೆ ಮೇಳಕರ್ತ ಗಾಯಕಪ್ರಿಯದ

ಒಂದು ಜನ್ಯರಾಗ
 

ಆ.
 
ಸ ರಿ ಗ ಪ ದ ಸ
 
ಸ ರಿ ಗ ಪ ದ ಸ

 
ಸ ದ ಪ ಮ ಗ ರಿ ಸ
 
ಸ ದ ಪ ಮ ಗ ರಿ ಸ
 
ಕಲ್ಯಾಣ ಕೈಶಿಕಿ
ವಿಜಯನಗರದ ದೊರೆ ಕೃಷ್ಣದೇವರಾಯ ವಿರಚಿತ

ಅಮುಕ್ತಮಾಲ್ಯದಾ ಎಂಬ ತೆಲುಗು ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ,
 
ಕಲ್ಯಾಣ ಕೈಶಿಕಿ