This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದೈನ್ಯ, ಆಲಸ್ಯ, ಆವೇಗ, ವಿಷಾದ, ಜಡತೆ, ಉನ್ಮಾದ, ಚಿಂತೆ ಇತ್ಯಾದಿ ವ್ಯಭಿಚಾರಿ
ಚರ್ವಿತವಾಗಿ ಕರುಣರಸ
 
ಪೂರಕಗಳು.
 
ಭಾವಗಳುಂಟಾಗಿ ಶೋಕವೆಂಬ ಸ್ಥಾಯಿಭಾವ ಉಂಟಾಗಿ
ಉಂಟಾಗುತ್ತದೆ. ತ್ಯಾಗ, ಆರ್ತತೆ, ದೀನತೆ ಮುಂತಾದುವು ಕರುಣರಸಕಾರಕಗಳು,
ನಿರ್ವೇದ, ಗ್ಲಾನಿ, ಚಿಂತೆ, ಮೋಹ, ಅಶ್ರು, ವೈವರ್ಣ್ಯ ಮೊದಲಾದುವು ಕರುಣರಸ
ಇದರ ವಿಭಾವವು ವಿರಹತಾವ, ಬಡತನ, ಮರಣ, ಸೆರೆ, ಅನು
ಭಾವವು ಕಣ್ಣೀರಿಡುವುದು, ಶೋಕ, ಬಾಯಾರಿಕೆ, ಬಣ್ಣ ಬದಲಾಗುವುದು,
ನಿಟ್ಟುಸಿರು ಬಿಡುವುದು. ಒಟ್ಟಿನಲ್ಲಿ ಇದನ್ನು ಇಷ್ಟವಿಯೋಗ, ಅನಿಷ್ಟ ಸಂಯೋಗ
ಎನ್ನಬಹುದು ಇದು ಅತಿ ಸುಕುಮಾರವಾದ ರಸ ಇದರ ಅನುಭವಕಾಲದಲ್ಲಿ
ಹೃದಯವು ಅಧಿಕವಾಗಿ ಕರಗುತ್ತದೆ. ಹೃದಯ ಸಂವಾದ ಬಲದಿಂದ ಶೋಕವನ್ನೇ
ಕೇವಲ ರೂಪದಲ್ಲಿ ನಾವು ಅನುಭವಿಸುತ್ತೇವೆ.
 
೧೬೧
 
ಪುನ್ನಾಗವರಾಳಿ, ನಾದನಾಮಕ್ರಿಯ, ಮುಖಾರಿ, ಆಹಿರಿ, ಗೌಳೀಪಂತು,
ಶಹಾನ, ದೇವಗಾಂಧಾರಿ ಮುಂತಾದ ರಾಗಗಳು ಕರುಣರಸವನ್ನು ಕೆರಳಿಸುತ್ತವೆ.
ನೃತ್ಯ ರೂಪಕ ಮತ್ತು ಗೇಯನಾಟಕಗಳಲ್ಲಿ ಕರುಣರಸ ಉಂಟುಮಾಡುವ ರಾಗಗಳನ್ನು
ಹೆಚ್ಚಾಗಿ ಬಳಸಿದ್ದಾರೆ.
 
ಕರಪಾಲಮೇಳ-ಇದು ಕರ್ಣಾಟಕದ ಒಂದು ಜನಪದ ಮೇಳ, ಮುಖ್ಯ
ಕಥೆಗಾರನೊಬ್ಬನು ಇಬ್ಬರು ಸದಸ್ಯತ್ಯಗಾರರೊಡನೆ ಜನಪ್ರಿಯವಾದ ಕಥೆಯೊಂದನ್ನು
ನಾಟಕೀಯವಾಗಿ ಅಭಿನಯಿಸಿ, ನಿರೂಪಿಸಿ ಮನೋರಂಜನೆ ನೀಡುವನು. ಸರಳವಾದ
ವೇಷಭೂಷಣಗಳೊಂದಿಗೆ ಈ ನೃತ್ಯ ಸಂಗೀತವು ಆಕರ್ಷಕವಾಗಿರುತ್ತದೆ.
 
ಕರಪು –ಈ ರಾಗವು ೪೪ನೆ ಮೇಳಕರ್ತ ಭವಪ್ರಿಯದ ಒಂದು ಜನ್ಯರಾಗ,
ಆ . ಸ ಗ ಮ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಕರಮುರಳಿ ಎರಡು ಕೈಗಳನ್ನು ಸೇರಿಸಿ ಮೇಲ್ಬಾಗದಲ್ಲಿ ಊದಿ ಕೊಳಲಿ
ನಂತೆ ನಡಿಸುವುದು. ಮೈಸೂರಿನ ಸಂಗೀತ ವಿದ್ವಾಂಸ ಎಸ್. ಕೆ. ರಾಮಾಚಾರ್
ಎಂಬುವರು ಪ್ರಸಿದ್ಧ ಕರಮುರಳಿ ವಿದ್ವಾಂಸರಾಗಿದ್ದರು.
 
ಕರೂರು-ಈ ಸ್ಥಳವು ತಮಿಳುನಾಡಿನ ತಿರುಚಿ ಜಿಲ್ಲೆಯಲ್ಲಿದೆ. ಇದಕ್ಕೆ
ಗರ್ಭಪುರಿ ಎಂದು ಹೆಸರು. ಈ ಸ್ಥಳವು ಒಂದು ಪ್ರಮುಖ ಸಂಗೀತ ಕಲಾಕೇಂದ್ರ
ವಾಗಿತ್ತು. ಇಲ್ಲಿ ಪ್ರಸಿದ್ಧ ವಾಗ್ಗೇಯಕಾರರಾಗಿದ್ದ ಕರೂರು ದೇವುಡಯ್ಯ ಮತ್ತು
ಕರೂರು ದಕ್ಷಿಣಾಮೂರ್ತಿಶಾಸ್ತ್ರಿ ವಾಸವಾಗಿದ್ದರು. ಇವರು ವರ್ಣಗಳು ಮತ್ತು ಕೃತಿ
ಗಳನ್ನು ರಚಿಸಿದ್ದಾರೆ. ಇವು ಭಾವಪುಷ್ಟಿಯಿಂದ ಕೂಡಿದ ಸುಂದರ ಹಾಗೂ ಸರಳ
ರಚನೆಗಳಾಗಿವೆ. ಕೆಲವು ರಚನೆಗಳು ಇಲ್ಲಿಯ ದೇವಾಲಯದ ಪಶುಪತೀಶ್ವರ ಮತ್ತು
ಸೌಂದರ್ಯ ನಾಯಕಿ ಅಮ್ಮನವರ ಸ್ತುತಿರೂಪವಾಗಿವೆ. ಈ ಊರಿನಲ್ಲಿ ನಾರದ