This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕರಣಯತಿ-ಇದು ೧೦೮ ತಾಳಗಳಲ್ಲಿ ೯೧ನೆ ತಾಳದ ಹೆಸರು. ಇದು ನಾಲ್ಕು
ದ್ರುತಗಳನ್ನು ಒಳಗೊಂಡಿದೆ. ಒಂದಾವರ್ತಕ್ಕೆ ೨ ಮಾತ್ರಾಕಾಲ ಅಥವಾ ೮ ಅಕ್ಷರ
ಕಾಲವಾಗುತ್ತದೆ.
 
೧೬೦
 
ಕರಣಿ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ,
ಸ ಗ ಪ ದ ನಿ ಸ
 
ಸ ನಿ ದ ಪ ಗ ಸ
 
ಕರಷಾನಿ-ಈ ರಾಗವು ೨೩ನೆ ಮೇಳಕರ್ತ ಗೌರೀಮನೋಹರಿಯ ಒಂದು
 

 
ಜನ್ಯರಾಗ
 

 
ಸ ರಿ ಗ ಪ ದ ನಿ ಸ
 
ಸ ನಿ ದ ಪ ಗ ರಿ
 
ಕರುಣಾಕರಿ-ಈ ರಾಗವು ೬೩ನೆಯ ಮೇಳಕರ್ತ ಲತಾಂಗಿಯ ಒಂದು
 
ಜನ್ಯರಾಗ
 
ಸ ಮ ಪ ದ ನಿ ದ ಸ
ಸ ನಿ ದ ಪ ಮ ಸ
 
ಕರುಣಪ್ರಿಯ ಈ ರಾಗವು ೩೭ನೆ ಮೇಳಕರ್ತ ಸಾಲಗನಾಟದ ಒಂದು
 
-
 
ಜನ್ಯರಾಗ,
 
ಸ ರಿ ಗ ಮ ನಿ ದ ಪ ನಿ ಸ
ಸ ನಿ ದ ಪ ಮ ಗ ರಿ ಸ
 
ಕರುಣತಾಳ -ಸಂಗೀತರತ್ನಾಕರವೆಂಬ ಗ್ರಂಧದಲ್ಲಿ ಉಕ್ತವಾಗಿರುವ ೧೨೦
ದೇಶೀತಾಳಗಳಲ್ಲಿ ಒಂದು ತಾಳ
 
ಕರುಣಠಾಯ-ಸಂಗೀತರತ್ನಾಕರವೆಂಬ ಗ್ರಂಧದಲ್ಲಿ ಉಕ್ತವಾಗಿರುವ ಒಂದು
 
ಬಗೆಯ ಠಾಯ
 
ಕರುಣರಸ ಕರುಣಂ ಶೋಕದಿನಕ್ಕುಂ ।
 
ಮರಣಂ ಗತನಾದ ಬಂಧುವಾಲು ಬನವಿ ॥
ನ್ನುರು ಬಂಧಾಕ್ರಂದನದ ಮುಖ ।
ಭರದುದ್ದೀಪನ ವಿಭಾವನಾ ರಸಕಕ್ಕುಂ ॥
 
(ಸಾಳ್ವ : ರಸರತ್ನಾಕರ ಪು ೩೭)
ತನ್ನಂತೆ ಪರರೆಂಬ ಭಾವನೆಯಿಂದ ಕಷ್ಟ ಪಡುವವರನ್ನು ಕಂಡು ಮರುಗುವುದರಿಂದ,
ಕೆಲವೊಮ್ಮೆ ದುಃಖದಿಂದ, ಯಾತನೆಯಿಂದ, ಇಷ್ಟಜನ ವಿಯೋಗದಿಂದ, ಸಂಪತ್ತು
ಹಾಳಾಗುವುದು, ವಧೆ, ಬಂಧನ ಇವುಗಳನ್ನು ನೋಡುವುದು ಅಥವಾ ಕೇಳುವುದರಿಂದ,
ಅನಿಷ್ಟ ಸಂಯೋಗಾದಿ ಆಲಂಬನಗಳಿಂದ, ನಿಶ್ವಾಸ, ತನುತ್ವ, ಮೂರ್ಛಾದಿ ಅನು
ಭಾವಗಳಿಂದ, ಸ್ವರಭೇದಾದಿ ಸಾತ್ವಿಕ ಭಾವವು ಉಂಟಾಗುತ್ತದೆ. ಇವುಗಳಿಂದ