This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತ್ತಿದ್ದ ರು. ಈಗ ಹಿತ್ತಾಳೆಯ ಕೊಡಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ

ಗಂಡಸರೇ ಕರಗದ ನೃತ್ಯವಾಡುತ್ತಾರೆ ಒಮ್ಮೊಮ್ಮೆ ಸ್ತ್ರೀಯರೂ ಕರಗವನ್ನು

ಹೊತ್ತು ಕುಣಿಯುವುದುಂಟು. ಹಳ್ಳಿಗಳ ಮಾರೀಹಬ್ಬಗಳಲ್ಲಿ ಕರಗದ ನೃತ್ಯವನ್ನು
 
ನೋಡಬಹುದು.
 

 
ಕರತಾಳ-
ಇದಕ್ಕೆ ಚಿಟಕಿ ಎಂದು ಹೆಸರು. ಎರಡು ಗುಂಡಾಗಿರುವ ಮರದ

ತುಂಡುಗಳ ಹಿಂದೆ ಒಂದೊಂದು ಹಿತ್ತಾಳೆ ಉಂಗುರವಿರುತ್ತದೆ. ಇವುಗಳನ್ನು ಕೈ

ಬೆರಳುಗಳಿಗೆ ಸಿಕ್ಕಿಸಿಕೊಂಡು ತಾಳ ಹಾಕುತ್ತಾರೆ. ಇದನ್ನು ಸಾಮಾನ್ಯವಾಗಿ ಹರಿಕಥೆ

ಯಲ್ಲಿ ಮತ್ತು ಭಜನೆಗಳಲ್ಲಿ ಬಳಸುತ್ತಾರೆ.
 

 
ಕರತೋಯ -
ಇದೇ ಹೆಸರಿನ ಎರಡು ರಾಗಗಳಿವೆ.
 
ರಾಗ.
 
೧೫೯
 

(೧) ಈ ರಾಗವು ೭ನೆಯ ಮೇಳಕರ್ತ ಸೇನಾವತಿಯ ಒಂದು ಜನ್ಯರಾಗ,

ಸ ರಿ ಗ ಮ ಪ ನಿ ಸ
 

ಸ ನಿ ಪ ಮ ಗ ರಿ ಸ
 

ಈ ರಾಗವು ೫೬ನೆಯ ಮೇಳಕರ್ತ ಷಣ್ಮುಖಪ್ರಿಯದ ಒಂದು ಜನ್ಮ
 
ಆ :
 

ಸ ಮ ಪ ದ ನಿ ಸ
 

ಸ ನಿ ದ ಪ ಮ ಸ
 
ಅ .
 

 
ಕರಡಿ ಕೈ-
ಇದೊಂದು ಬಗೆಯ ಚರ್ಮವಾದ್ಯ. ಇದರ ಶಬ್ದವು ಕರಡಿಯು

ಗುರುಗುಟ್ಟುವ ಶಬ್ದವನ್ನು ಹೋಲುವುದರಿಂದ ಇದಕ್ಕೆ ಕರಡಿ ಕೈ ಎಂಬ ಹೆಸರು
 
ಬಂದಿದೆ.
 

 
ಕರಡೀಶಮೇಳ -
ವೀರಶೈವರ ದೇವಾಲಯಗಳಲ್ಲಿ ಬಾರಿಸುವ ಎತ್ತರವಾದ
 

ನಗಾರಿ,
 

 
ಕರಡೀವಾದ್ಯ
ಇದು ಡಮರುಗದಂತಿರುವ ಒಂದು ದೊಡ್ಡ ವಾದ್ಯ. ತುದಿಗೆ

ಬಟ್ಟೆ ಅಥವಾ ಮೆದುವಾದ ಇನ್ನಾವುದಾದರೂ ವಸ್ತುವನ್ನು ಕಟ್ಟಿರುವ ಒಂದು ಕಡ್ಡಿ

ಯಿಂದ ಬಾರಿಸಿ ನುಡಿಸುತ್ತಾರೆ.
 

 
ಕರಣ -
(೧) ರಾಗಾಲಾಪನೆಯ ಮುಖ್ಯ ಭಾಗವಾದ ರಾಗವರ್ಧಿನಿಯ

ಹೆಸರು. ಆಕ್ಷಿಪ್ತಿಕವಾದ ನಂತರ ಕರಣವು ಆರಂಭವಾಗುತ್ತದೆ. ತರುವಾಯ ಸ್ಥಾಯಿ

ಅಥವಾ ಮಕರಿಣಿ ಭಾಗಗಳು ಬರುತ್ತವೆ.
 

(೨) ಇದೊಂದು ಭರತನಾಟ್ಯದ ಭಂಗಿ, ತಮಿಳುನಾಡಿನ ಚಿದಂಬರಂ

ನಟರಾಜಸ್ವಾಮಿ ದೇವಾಲಯದ ಪೂರ್ವದಿಕ್ಕಿನ ಗೋಪುರದಲ್ಲಿ ೧೦೮ ಕರಣಗಳ ಶಿಲ್ಪ
 
ಗಳಿವೆ.
 

 
ಕರಣೆ-
ಮೃದಂಗದ ಬಲಮುಖದ ಮಧ್ಯೆ ಅಂಟಿಸಿರುವ ಕಪ್ಪು ಬಣ್ಣದ ಗುಂಡಾ
ಗಿರುವ ಭಾಗ