This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ತ್ತಿದ್ದ ರು. ಈಗ ಹಿತ್ತಾಳೆಯ ಕೊಡಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ
ಗಂಡಸರೇ ಕರಗದ ನೃತ್ಯವಾಡುತ್ತಾರೆ ಒಮ್ಮೊಮ್ಮೆ ಸ್ತ್ರೀಯರೂ ಕರಗವನ್ನು
ಹೊತ್ತು ಕುಣಿಯುವುದುಂಟು. ಹಳ್ಳಿಗಳ ಮಾರೀಹಬ್ಬಗಳಲ್ಲಿ ಕರಗದ ನೃತ್ಯವನ್ನು
 
ನೋಡಬಹುದು.
 
ಕರತಾಳ-ಇದಕ್ಕೆ ಚಿಟಕಿ ಎಂದು ಹೆಸರು. ಎರಡು ಗುಂಡಾಗಿರುವ ಮರದ
ತುಂಡುಗಳ ಹಿಂದೆ ಒಂದೊಂದು ಹಿತ್ತಾಳೆ ಉಂಗುರವಿರುತ್ತದೆ. ಇವುಗಳನ್ನು ಕೈ
ಬೆರಳುಗಳಿಗೆ ಸಿಕ್ಕಿಸಿಕೊಂಡು ತಾಳ ಹಾಕುತ್ತಾರೆ. ಇದನ್ನು ಸಾಮಾನ್ಯವಾಗಿ ಹರಿಕಥೆ
ಯಲ್ಲಿ ಮತ್ತು ಭಜನೆಗಳಲ್ಲಿ ಬಳಸುತ್ತಾರೆ.
 
ಕರತೋಯ -ಇದೇ ಹೆಸರಿನ ಎರಡು ರಾಗಗಳಿವೆ.
 
ರಾಗ.
 
೧೫೯
 
(೧) ಈ ರಾಗವು ೭ನೆಯ ಮೇಳಕರ್ತ ಸೇನಾವತಿಯ ಒಂದು ಜನ್ಯರಾಗ,
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಈ ರಾಗವು ೫೬ನೆಯ ಮೇಳಕರ್ತ ಷಣ್ಮುಖಪ್ರಿಯದ ಒಂದು ಜನ್ಮ
 
ಆ :
 
ಸ ಮ ಪ ದ ನಿ ಸ
 
ಸ ನಿ ದ ಪ ಮ ಸ
 
ಅ .
 
ಕರಡಿ ಕೈ-ಇದೊಂದು ಬಗೆಯ ಚರ್ಮವಾದ್ಯ. ಇದರ ಶಬ್ದವು ಕರಡಿಯು
ಗುರುಗುಟ್ಟುವ ಶಬ್ದವನ್ನು ಹೋಲುವುದರಿಂದ ಇದಕ್ಕೆ ಕರಡಿ ಕೈ ಎಂಬ ಹೆಸರು
 
ಬಂದಿದೆ.
 
ಕರಡೀಶಮೇಳ -ವೀರಶೈವರ ದೇವಾಲಯಗಳಲ್ಲಿ ಬಾರಿಸುವ ಎತ್ತರವಾದ
 
ನಗಾರಿ,
 
ಕರಡೀವಾದ ಇದು ಡಮರುಗದಂತಿರುವ ಒಂದು ದೊಡ್ಡ ವಾದ್ಯ. ತುದಿಗೆ
ಬಟ್ಟೆ ಅಥವಾ ಮೆದುವಾದ ಇನ್ನಾವುದಾದರೂ ವಸ್ತುವನ್ನು ಕಟ್ಟಿರುವ ಒಂದು ಕಡ್ಡಿ
ಯಿಂದ ಬಾರಿಸಿ ನುಡಿಸುತ್ತಾರೆ.
 
ಕರಣ - (೧) ರಾಗಾಲಾಪನೆಯ ಮುಖ್ಯ ಭಾಗವಾದ ರಾಗವರ್ಧಿನಿಯ
ಹೆಸರು. ಆಕ್ಷಿಪ್ತಿಕವಾದ ನಂತರ ಕರಣವು ಆರಂಭವಾಗುತ್ತದೆ. ತರುವಾಯ ಸ್ಥಾಯಿ
ಅಥವಾ ಮಕರಿಣಿ ಭಾಗಗಳು ಬರುತ್ತವೆ.
 
(೨) ಇದೊಂದು ಭರತನಾಟ್ಯದ ಭಂಗಿ, ತಮಿಳುನಾಡಿನ ಚಿದಂಬರಂ
ನಟರಾಜಸ್ವಾಮಿ ದೇವಾಲಯದ ಪೂರ್ವದಿಕ್ಕಿನ ಗೋಪುರದಲ್ಲಿ ೧೦೮ ಕರಣಗಳ ಶಿಲ್ಪ
 
ಗಳಿವೆ.
 
ಕರಣೆ-ಮೃದಂಗದ ಬಲಮುಖದ ಮಧ್ಯೆ ಅಂಟಿಸಿರುವ ಕಪ್ಪು ಬಣ್ಣದ ಗುಂಡಾ
ಗಿರುವ ಭಾಗ