This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಮಲಿನಿ-ಈ ರಾಗವು ೧ನೆಯ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಇದೇ ಹೆಸರಿನ ಮತ್ತೊಂದು ರಾಗವು ೩೦ನೆಯ ಮೇಳಕರ್ತ ನಾಗಾನಂದಿನಿಯ ಒಂದು
ಜನ್ಯವಾಗಿದೆ.
 
ಆ .
 

 
ಸ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 
ಕಮಾಚ್ -ಈ ರಾಗವು ೨೮ನೆಯ ಹರಿಕಾಂಭೋಜಿ ಮೇಳದ ಒಂದು
 
ಜನ್ಯರಾಗ,
 
ಸ ಮ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಈ ರಾಗವು ಕರ್ಣಾಟಕ ಸಂಗೀತ ಪದ್ಧತಿಯಲ್ಲಿ ಸುಮಾರು ಎರಡು ಶತಮಾನಗಳಿಂದ
ಹರಿಕಾಂಭೋಜಿಮೇಳದ ಭಾಷಾಂಗರಾಗವಾಗಿ ಅಂಗೀಕೃತವಾಗಿ ರೂಢಿಯಲ್ಲಿದೆ.
ಷಾಡವ ಸಂಪೂರ್ಣರಾಗ, ಮಧ್ಯಮ ನಿಷಾದಗಳು ವಾದಿಸಂವಾದಿಗಳು, ಮಧ್ಯಮ,
ಧೈವತ ಮತ್ತು ನಿಷಾದಗಳು ರಂಜಕವಾದ ಜೀವಸ್ವರಗಳು. ಆರೋಹಣದಲ್ಲಿ ಕಾಕಲಿ
ನಿಷಾದವೂ, ಅವರೋಹಣದಲ್ಲಿ ಕೈಶಿಕಿನಿಷಾದವೂ ಬರುತ್ತವೆ. ತ್ಯಾಗರಾಜರು
ರಚಿಸಿರುವ ಈ ರಾಗದ ಕೃತಿಗಳಲ್ಲಿ ಉಪಾಂಗ ಸ್ವರೂಪವಿದೆ.
ಕೆಲವು ಪ್ರಸಿದ್ಧ
 
ರಚನೆಗಳು :
 
೧೫೭
 
ಕೃತಿ - ಸೀತಾಪತೀ ನಾಮನಸುನ ದೇಶಾದಿ
ಚೇವಾರೆವರುರ
 
ತ್ಯಾಗರಾಜ
ವಾಸುದೇವಾಚಾರ
 
ಆದಿ
 
ಕಮಟಧ್ವಜ-ಈ ರಾಗವು ೫೫ನೆಯ ಮೇಳಕರ್ತ ಶ್ಯಾಮಲಾಂಗಿಯ
 
ಒಂದು ಜನ್ಯರಾಗ,
 
-
 
-
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಗ ಸ
 
ಕಮ್ಮಜಿ-ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
 
ಆ :
 
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ಸ
 
ಕರ್ಕಡಿಕೈ-ಭರತ ಸಿದ್ಧಾಂತವೆಂಬ ಗ್ರಂಥದಲ್ಲಿ (ಪು. ೫೩) ತಾಳಾಧ್ಯಾಯ
ದಲ್ಲಿ ಹೇಳಿರುವ ಎಂಟು ಬಗೆಯ ಮದ್ದಳೆಗಳಲ್ಲಿ ಒಂದು ಬಗೆಯ ಮದ್ದಳೆ,
ಕರ್ಕಟಕ-ಇದು ಭರತನಾಟ್ಯದ ಒಂದು ಸಂಯುತ ಹಸ್ತ. ಕಪೋತ ಹಸ್ತ
ದಲ್ಲಿನ ಬೆರಳುಗಳನ್ನು ಬೆರಳು ಸಂದಿಗಳಲ್ಲಿ ಪರಸ್ಪರವಾಗಿ ಒಳಗೆ ಅಥವಾ ಹೊರಗೆ