This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಉತ್ತರ ಪೂರ್ವದ ಸಿದ್ಧ ಹಾಗೂ ನಾಥಪಂಧ, ಪಶ್ಚಿಮದ ಸೂಫಿವಾದ, ಮಧ್ವಾ
ಚಾರ್ಯರು, ವಲ್ಲಭಚಾರ್ಯರು ಮತ್ತು ಇತರ ಸಂಪ್ರದಾಯಗಳ ಪ್ರಭಾವವಿದೆ.
ಕಾರದ ಮಾಧ್ಯಮದಲ್ಲಿ ಬ್ರಹ್ಮವಿಚಾರ ಮತ್ತು ಆತ್ಮ ಸಾಧನೆಗಳನ್ನು
ವ್ಯಕ್ತಗೊಳಿಸಿರುವರು.
ಇವರ ರಚನೆಗಳನ್ನು ಸಂಗೀತ ಕಚೇರಿಗಳಲ್ಲಿ ಹಾಡುವುದು
 
ರೂಢಿಯಲ್ಲಿದೆ.
 
ಕಮಲ-ಈ ರಾಗವು ೨೩ನೆಯ ಮೇಳಕರ್ತ ಗೌರಿ ಮನೋಹರಿಯ ಒಂದು
 
ಸ ಗ ಮ ದ ನಿ ಸ
ಸ ನಿ ದ ಮ ಗ ಸ
 
ಕಮಲು-ಇದು ೬೦ನೆಯ ಮೇಳಕರ್ತ ನೀತಿಮತಿಯ ಒಂದು ಜನ್ಮ
 
ಜನ್ಯರಾಗ,
 

 

 
ರಾಗ.
 
ಸ ಗ ಮ ದ ನಿ ಸ
ಆ . ಸ ನಿ ದ ಮ ಗ ಸ
 
ಕಮಲಂ -ಇವರು ೧೯ನೆ ಶತಮಾನದ ಒಬ್ಬ ಪ್ರಸಿದ್ಧ ನಾಟ್ಯ ಕಲಾವಿದೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುವಾಂಕೂರಿನಲ್ಲಿ ವಾಸಿಸುತ್ತಿದ್ದರು.
ಸಂಗೀತದಲ್ಲಿ ಮುತ್ತು ಸ್ವಾಮಿ ದೀಕ್ಷಿತರ ಶಿಷ್ಯ ಭರತನಾಟ್ಯವನ್ನು ಮವ್ವಲೂರು
ಸಭಾಪತಿ ಅಯ್ಯರ್‌ರವರಲ್ಲಿ ಕಲಿತರು. ಸಭಾಪತಿ ಅಯ್ಯರ್‌ರವರು ಪ್ರಸಿದ್ಧ ನಾಟ್ಯಾ
ಚಾರರಾಗಿದ್ದು ತೆಲುಗಿನಲ್ಲಿ ಅನೇಕ ಪದಗಳನ್ನು " ರಾಜಗೋಪಾಲ ' ಎಂಬ ಅಂಕಿತ
ದಲ್ಲಿ ರಚಿಸಿದರು. ಇವು ಕ್ಷೇತ್ರಜ್ಞನ ಪದಗಳಷ್ಟೇ ಉತ್ತಮವಾದುವು.
 
ಕಮಲಂಗೆ ಭರತನಾಟ್ಯದ ಶಿಕ್ಷಣವು ಪೂರೈಸಿದ ನಂತರ ತ್ಯಾಗರಾಜರ
ಆಶೀರ್ವಾದವನ್ನು ಪಡೆಯಬೇಕೆಂಬ ಹಂಬಲ ಉಂಟಾಯಿತು. ಒಂದು ಸಂಜೆ
ತ್ಯಾಗರಾಜರು ತಮ್ಮ ಮನೆಯ ಜಗಲಿಯ ಮೇಲೆ ಕುಳಿತು ಸಂದರ್ಶಕರು ಮತ್ತು
ಶಿಷ್ಯರೊಡನೆ ಸಂಭಾಷಿಸುತ್ತಿದ್ದರು. ಆಗ ಕಮಲಂ ಸಂಪೂರ್ಣಾಲಂಕೃತಳಾಗಿ
ತ್ಯಾಗರಾಜರ ಮುಂದೆ ಬಂದು ನಮಸ್ಕರಿಸಿ, ತಾನು ಸಭಾಪತಿ ಅಯ್ಯರ್‌ರವರಲ್ಲಿ
ನಾಟ್ಯಾಭ್ಯಾಸ ಮಾಡಿರುವುದಾಗಿಯೂ, ತ್ಯಾಗರಾಜರ ಸಮ್ಮುಖದಲ್ಲಿ ಅಭಿನಯ
ಬಂದಿರುವುದಾಗಿಯೂ ವಿನಂತಿಸಿಕೊಂಡಳು.
ಸಭಾಪತಿ ಅಯ್ಯರ್‌ರವರಲ್ಲಿ ತ್ಯಾಗರಾಜರಿಗೆ ಅಪಾರ ಗೌರವವಿತ್ತು. ಅವರು ಸಂತೋಷ
ದಿಂದ ಯಾವುದಾದರೂ ಕೃತಿಗೆ ಅಭಿನಯ ಮಾಡಬೇಕೆಂದು ಹೇಳಿದರು. ಕಮಲಂ
ತಕ್ಷಣವೇ ಛಾಪುತಾಳದಲ್ಲಿರುವ ತೋಡಿರಾಗದ ಎಂದುದಾಗಿನಾಡೋ' ಎಂಬ ಕೃತಿಗೆ
ಅಭಿನಯ ಮಾಡಿದಳು. ಕರುಣರಸ ಪ್ರಧಾನವಾದ ಈ ಕೃತಿಯ
ಅಡಕವಾಗಿರುವ ಭಾವನೆಗಳನ್ನು
ತ್ಯಾಗರಾಜರಿಗೆ ಅವಳ ಭರತನಾಟ್ಯವು ಬಹಳ ಮೆಚ್ಚುಗೆಯಾಯಿತು.
 
ಮಾಡಿ ಆಶೀರ್ವಾದ ಪಡೆಯಲು
 
ಸಾಹಿತ್ಯದಲ್ಲಿ
ಅಭಿನಯಿಸಿದಳು.
 
ಮನಮುಟ್ಟುವಂತೆ