This page has been fully proofread once and needs a second look.

೧೦
 
ವಾಗಿತ್ತು. ಒಂದು ಸಲ ಇವರು ಇದ್ದಕ್ಕಿದ್ದಂತೆ ಸವಣೂರು ದಿವಾನ ಖಂಡೇರಾಯನ

ಮನೆಗೆ ಹೋಗಿ ನವಾಬನನ್ನು ಭೇಟಿ ಮಾಡಿಸಬೇಕೆಂದು ಹೇಳಿದರು. ಏನಾದರೂ

ಉಪಾಯ ಮಾಡಿ ನಿವಾರಿಸೋಣವೆಂದು ಪ್ರಯತ್ನಿಸಿ ಸಫಲವಾಗದೆ ಮಾರನೆಯ ದಿನ

ಭೇಟಿ ಮಾಡಿಸಿದರು. ಹುಚ್ಚನಂತೆ ತೋರುತ್ತಿದ್ದ ಅವಧೂತರು ಒಂದು ಪದವನ್ನು

ಹೇಳಿ ನವಾಬನು ತಲೆತೂಗುವಂತೆ ಮಾಡಿದರು ನವಾಬನು ಅವರಿಗೆ ಬಹುಮಾನ

ಮಾಡಿದನು. ಮಹಲಿನಿಂದ ಹೊರಗಡೆ ಬಂದು ಎಲ್ಲವನ್ನೂ ಕಂಡ ಕಂಡವರಿಗೆ ದಾನ

ಮಾಡಿದರು. ಇವರ ಒಂದು ಕನ್ನಡ ಪದ ದಾವಾಧಾರದ ದುರ್ವಿಷಯದಿ ನೀ

ಮುಳುಗಿ ಹರಿಯುತಿದ್ದಿ ? ಎಂಬುದು ಪೂರ್ವಿರಾಗದಲ್ಲಿ ಆದಿತಾಳದಲ್ಲಿದೆ, ಇವರ

ತ್ರಿಭಾಷಾ ಪದಗಳು ಹರಿದಾಸ ಸಾಹಿತ್ಯದ ಉತ್ತಮ ಭಾಗಗಳಾಗಿವೆ. ಅಣ್ಣಾವ

ಧೂತರು ಅಥವಾ ಬಡ ಅಣ್ಣಯ್ಯಾಚಾರ್ಯರು ಅವಧೂತ ಹರಿದಾಸರು
 
ಕರ್ಣಾಟಕ
 
ಮಗ
 
ಇತರರು
 

 

 
ಅಣ್ಣಾಸ್ವಾಮಿ ಶಾಸ್ತ್ರಿ (೧೮೨೭-೧೯೦೦)-
ಇವರು

ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಗಳ ಪ್ರಥಮ ಪತ್ನಿಯ ಪುತ್ರ

ಪಂಜುಶಾಸ್ತ್ರಿಗಳ ಮೂರನೆಯ ಪುತ್ರರು, ಶ್ಯಾಮಾಶಾಸ್ತ್ರಿಗಳ ಎರಡನೆಯ

ಸುಬ್ಬರಾಯ ಶಾಸ್ತ್ರಿಗಳಿಗೆ ಸಂತತಿಯಿರಲಿಲ್ಲ. ಅವರು ಅಣ್ಣಾಸ್ವಾಮಿ ಶಾಸ್ತ್ರಿಗಳನ್ನು

ದತ್ತು ತೆಗೆದುಕೊಂಡರು. ಶ್ಯಾಮಾಶಾಸ್ತ್ರಿಗಳು ದಿವಂಗತರಾದ ವರ್ಷದಲ್ಲಿ

ಹುಟ್ಟಿದ್ದರಿಂದ

ಸ್ವಾಮಿಗೆ ಶ್ಯಾಮಕೃಷ್ಣ ಎಂಬ ಹೆಸರಿಟ್ಟರು.

ಇವರನ್ನು ಅಣ್ಣ ಎಂದು ಕರೆಯುತ್ತಿದ್ದುದ್ದರಿಂದ ಅದೇ ರೂಢಿಗೆ ಬಂದು ಅಣ್ಣಾ ಸ್ವಾಮಿ

ಶಾಸ್ತ್ರಿಗಳಾದರು. ತಂದೆಯವರಲ್ಲಿ ಕಾವ್ಯ, ನಾಟಕ, ಅಲಂಕಾರ, ವ್ಯಾಕರಣಶಾಸ್ತ್ರ

ಮತ್ತು ಸಂಗೀತವನ್ನು ಅಭ್ಯಾಸ ಮಾಡಿ ವಿದ್ವಾಂಸರಾದರು.

ತೆಲುಗು ಮತ್ತು

ಸಂಸ್ಕೃತದಲ್ಲಿ ಶ್ರೇಷ್ಠ ವಿದ್ವಾಂಸರಾದರು. ಅದ್ವಿತೀಯ ಗಾಯಕರಾಗಿದ್ದುದಲ್ಲದೆ ಪಿಟೀಲು

ವಾದನ ಪಟುವಾಗಿದ್ದರು. ಕಷ್ಟಕರವಾದ ಪಲ್ಲವಿಗಳಿಗೆ ಕಲ್ಪನೆ ಸ್ವರಗಳನ್ನು ಹಾಡಿ

ಆನಂದ ಪಡಿಸುತ್ತಿದ್ದರು ಇವರು ಹಲವು ಕೃತಿಗಳನ್ನು ರಚಿಸಿದರು. ಶ್ಯಾಮಾಶಾಸ್ತ್ರಿ
 

ಗಳ ಮಧ್ಯಮಾವತಿ ರಾಗದ ( ಪಾಲಿಂಚು ಕಾಮಾಕ್ಷೀ ' ಎಂಬ ಕೃತಿಗೆ ಸ್ವರ ಸಾಹಿತ್ಯ

ವನ್ನು ಸೇರಿಸಿದರು

ಇವರ ಕೃತಿಗಳು ಯಾವುವೆಂದರೆ :

(೧) ಆನಂದಭೈರವಿ ರಾಗದ : ಪಾಹಿ ಗಿರಿರಾಜಸುತೇ ?
 

(೨) ಉಡೈ ಯಾರ್ ಪಾಳ್ಯದ ದೇವರನ್ನು ಕುರಿತು ರಚಿಸಿರುವ ಸಹಾನಾರಾಗದ

ಇಂಕೆವರುನ್ನಾರು
 
C
 
>
 

(೩) ಉಡೈ ಯಾರ್
 
ಸಂಗೀತ ಪಾರಿಭಾಷಿಕ ಕೋಶ
 
CC
 
ಪಾಳ್ಯದ ಕಚ್ಚಿ ಕಲ್ಯಾಣರಂಗಪ್ಪ
ಉಡೈಯರ
ಪ್ರಶಂಸಾತ್ಮಕವಾದ ಕೇದಾರಗೌಳರಾಗದ (ರೂಪಕತಾಳ) ದರು

( ಕಾಮಿಂಚಿಯುನ್ನದಿರಾ '
 
ಉಡೈಯರ
 

(೪) ಶ್ರೀ ಕಾಂಚಿನಗರ ನಾಯಿಕೇ ಆದಿ ಅಸಾವೇರಿ

(೫) ಶ್ರೀ ಮಹಾರಾಜ್-ಛಾಪು-ಬಿಲಹರಿ