2023-07-01 08:37:03 by jayusudindra
This page has been fully proofread once and needs a second look.
೧೫೩
ಉಪದೇಶವಿಲ್ಲದೆ
ಉಪದೇಶವನ್ನು ಯಾರೂ ಮಾನ್ಯ ಮಾಡರೆಂದು ತಿಳಿದು ಗುರುವಿನ ಅನ್ವೇಷಣೆಯಲ್ಲಿ
ತೊಡಗಿದರು ಆಗ ಕಾಶಿಯಲ್ಲಿ ಪ್ರಸಿದ್ಧರಾಗಿದ್ದ ಸ್ವಾಮಿ ರಾಮಾನಂದರು ಪ್ರತಿದಿನ
ಪ್ರಾತಃಕಾಲ ಬ್ರಾಹ್ಮಮುಹೂರ್ತದಲ್ಲಿ ಪಂಚಗಂಗಾ ಘಾಟ್‌ನಲ್ಲಿ ಸ್ನಾನಮಾಡಲು
ಹೋಗುತ್ತಿದ್ದರು. ಕಬೀರರು ಈ ಘಟ್ಟದ ಮೆಟ್ಟಲಿನ ಮೇಲೆ ಮಲಗಿದರು.
ಸ್ವಾಮಿಗಳು ಸ್ನಾನಾನಂತರ ಹಿಂತಿರುಗುವಾಗ ಕತ್ತಲೆಯಲ್ಲಿ ಕಾಣದೆ ತಮ್ಮ ಪಾದವನ್ನು
ಕಬೀರರ ತಲೆಯ ಮೇಲೆ ಇಟ್ಟರು.
ಆಗ ಸ್ವಾಮಿಯವರ ಬಾಯಿಂದ ರಾಮ ರಾಮ
ಕಬೀರರು ತಕ್ಷಣವೇ ಎದ್ದು ಸ್ವಾಮಿಗಳ ಪಾದವನ್ನು
ಹಿಡಿದು - ನೀವಿಂದು ರಾಮನಾಮದ ಮಂತ್ರವನ್ನು ಆಶೀರ್ವದಿಸಿ ನನ್ನ ಗುರುಗಳಾದಿರಿ?
ರಾಮಾನಂದರು ಪ್ರತ್ಯುತ್ತರಿಸದೆ ಹೊರಟುಹೋದರು. ಅಂದಿನಿಂದ
ಕಬೀರರು ರಾಮಾನಂದರ ಶಿಷ್ಯರಾದರು. ಕಬೀರರು ಮುಸಲ್ಮಾನ ತಂದೆ ತಾಯಿಗಳ
ಮಗನಿರಲಿ, ಇಲ್ಲದಿರಲಿ, ಮುಸಲ್ಮಾನ ಮನೆತನದಲ್ಲಿ ಲಾಲನೆ ಪಾಲನೆಗಳನ್ನು
ಪಡೆದಿದ್ದರೂ ಅವರ ಹಿಂದೂ ವಿಚಾರಧಾರೆಯು ಬಾಲ್ಯದಿಂದ ಹರಿಯುತ್ತ ಬಂದಿದೆ.
ಮುಸಲ್ಮಾನ ಕಬೀರ ಪಂಧದವರು ಕಬೀರರು ಸೂಫಿ ಮುಸಲ್ಮಾನ ಫಕೀರ ಶೇಖ
ತಕಿಯವರಿಂದ ದೀಕ್ಷೆಯನ್ನು ಪಡೆದರೆಂದು ಹೇಳುತ್ತಾರೆ. ಆದರೆ ಕಬೀರರು ತಮ್ಮ
ಗುರುಗಳ ನಿವಾಸವು ಬನಾರಸ್ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಬೀರರು
ಎರಡು ಸಲ ಮದುವೆಯಾದರೆಂದು ಹೇಳುತ್ತಾರೆ. ಮೊದಲನೆಯ ಹೆಂಡತಿ ಲೋಯಿ
ದ್ವಿತೀಯ ಪತ್ನಿ ಧನಿಯಾ ಎಂಬುವಳು. ಕಬೀರರು ಯಾವ ಶಾಲೆಯಲ್ಲಿ ಶಿಕ್ಷಣ
ಪಡೆಯಲಿಲ್ಲ. * ಮಸಿಕಾಗದ ಛುವೋನಹಿ, ಕಲಮಗ ನಹಿಂಹಾಧೆ ".
ವನ್ನು ಅಂತ್ಯಸಂಸ್ಕಾರ ಮಾಡಬೇಕೆಂದೂ, ಮುಸಲ್ಮಾನರು ಗೋರಿಯಲ್ಲಿಡಬೇಕೆಂದೂ
ಬಯಸಿದರು. ಆಗ ಆಕಾಶವಾಣಿಯಲ್ಲಿ ( ಜಗಳವಾಡಬೇಡಿ, ನನ್ನ ಶವವನ್ನು
ಎತ್ತಿನೋಡಿ " ಎಂದಾಗ, ದೇಹವು ಮಾಯವಾಗಿ ಹೂವಿನ ರಾಶಿಯಾಯಿತು.
ಹಿಂದುಗಳು ತಮ್ಮ ಪಾಲಿನ ಹೂವನ್ನು ದಹನ ಮಾಡಿದರು. ಮುಸಲ್ಮಾನರು
ಈವರೆಗೆ ಕಬೀರರ ೬೧ ಗ್ರಂಥಗಳು ದೊರಕಿವೆ. ಅವರು ಒಟ್ಟು ಸುಮಾರು
೨೦೦೦೦ ಪದಗಳನ್ನು ರಚಿಸಿದ್ದಾರೆ. ಇವರ ರಚನೆಗಳ ವಿಷಯ ಜ್ಞಾನೋಪದೇಶ,
ಯೋಗಾಭ್ಯಾಸ, ಸತ್ಯ ವಚನ, ವಿನಯ, ಪ್ರಾರ್ಥನೆ, ನಾಮಮಹಿಮೆ, ಸ್ವರಜ್ಞಾನ
ವರ್ಣನಾಶೈಲಿ ಸರಳ. ಕಬೀರರು ಸಹೃದಯಿ, ಸ್ಪಷ್ಟವಾದಿ
ಭಕ್ತ, ತಾರ್ಕಿಕ, ಪ್ರಚಾರಕ, ಲೋಕಚತುರ ಇವರ ರಚನೆಗಳಲ್ಲಿ ಸಂದೇಶದ
ಸೌಂದರ್ಯವಿದೆ. ಭಾವಗಳ ತೀವ್ರತೆ, ಶ್ರೀರಾಮಾನುಜರ ಶ್ರೀವೈಷ್ಣವ ಸಂಪ್ರದಾಯ,