This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಈ ಶೈಲಿಯಲ್ಲಿ ನಿರೂಪಿಸುತ್ತಾರೆ. ರಾಮಾಯಣದ ಕಥೆಯನ್ನು ಈ ರೀತಿಯಲ್ಲಿ

ನಿರೂಪಿಸಿರುವುದು ರಾಮಾಯಣಕಪ್ಪಲ್.
 

 
ಕರ್ಪೂರ-
ಈ ರಾಗವು ೩೦ನೆಯ ಮೇಳಕರ್ತ ನಾಗಾನಂದಿನಿಯ ಒಂದು
 
೧೫೨
 
6
 

ಜನ್ಯರಾಗ,
 


 
: ಸ ಮ ಪ ದ ನಿ ಸ
 

ಸ ನಿ ದ ಪ ಮ ಸ
 

 
ಕಪೋತ-
ಭರತನಾಟ್ಯದ ಅಂಜಲಿ ಹಸ್ತದಲ್ಲಿನ ಮೊದಲು ತುದಿ, ಪಾರ್ಶ್ವ

ಭಾಗಗಳನ್ನು ಸೇರಿಸುವುದು ಕಪೋತ ಹಸ್ತ, ಪ್ರಮಾಣ, ಗುರುಗಳಲ್ಲಿ ಸಂಭಾಷಣೆ,

ವಿನಯ, ಒಪ್ಪಿಗೆತೋರುವಿಕೆಗಳಲ್ಲಿ ಈ ಹಸ್ತ ವಿನಿಯೋಗಿಸಲಾಗುವುದು.
ಕಥೆ-

 
ಕಫೈ
ಇದು
 
ಈಗ ಪ್ರಚಲಿತವಿಲ್ಲದ ಮೊದಲು ಮತ್ತು ಕೊನೆಯಲ್ಲಿ

ಜತಿಗಳಿರುವ ಒಂದು ಬಗೆಯ ದೇಶೀಘ್ರ ಬಂಧ.

ಇಂತಹ ಒಂದು ಪ್ರಬಂಧವನ್ನು

ಸಂಗೀತ ಸಂಪ್ರದಾಯ ಪ್ರದರ್ಶಿನಿ ಎಂಬ ಗ್ರಂಥದಲ್ಲಿ (ಸಂಪುಟ ೨, ಪು. ೧೧೯೧)

ಕೊಟ್ಟಿದೆ. ಇದು ಯಮುನಾಕಲ್ಯಾಣಿ ರಾಗದಲ್ಲಿರುವ ಆದಿತಾಳದ ಪ್ರಬಂಧ.
 

 
ಕಬೀರದಾಸರು
ಭಾರತದ ಇತಿಹಾಸದಲ್ಲಿ ಭಕ್ತಿ ಚಳುವಳಿಯ ಕಾಲವು

ಹಿಂದೀ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಯುಗವಾಗಿದೆ.

ಈ ಯುಗದ ಸಾಹಿತ್ಯ

ಸೃಷ್ಟಿಗೆ ಭಕ್ತಿಯೇ ಮೂಲಚೇತನ.

ಒಂದೊಂದು ಭಕ್ತಿಸಾಧನೆಯ ಪಂಧಕ್ಕೆ

ಒಬ್ಬೊಬ್ಬರು ಮೂಲ ಪ್ರವರ್ತಕರಾಗಿದ್ದರು. ಜ್ಞಾನಭಕ್ತಿಗೆ ಕಬೀರದಾಸರೂ,

ರಾಮಭಕ್ತಿಗೆ ತುಳಸೀದಾಸರೂ, ಕೃಷ್ಣ ಭಕ್ತಿಗೆ ಸೂರದಾಸರೂ ಮೂಲಪ್ರವರ್ತಕ

ರಾಗಿದ್ದರು.
 

ಕಬೀರದಾಸರ ಜೀವನವು ರಹಸ್ಯ ಭ್ರಮೆಗಳಿಂದಾವರಿಸಿದೆ. ಅವರ ಜನ್ಮ,

ಕಾಲ, ಮರಣಗಳ ಬಗ್ಗೆ ನಮಗೆ ಯಾವ ಸ್ಪಷ್ಟ ನಿದರ್ಶನಗಳೂ ಸಿಕ್ಕುತ್ತಿಲ್ಲ. ಜನ

ಜನಿತವಾದ ಒಂದು ಕತೆ ಹೀಗಿದೆ. ಕಾಶಿಯಲ್ಲಿ ರಾಮಾನಂದ ಸ್ವಾಮಿಗಳೆಂಬುವರಿದ್ದರು.

ಅವರ ಭಕ್ತನಾದ ಓರ್ವ ಬ್ರಾಹ್ಮಣನಿಗೆ ಓರ್ವ ವಿಧವಾಪುತ್ರಿ ಇದ್ದಳು. ಅವಳು

ಒಂದು ಸಲ ತಂದೆಯ ಸಂಗಡ ಸ್ವಾಮಿಗಳನ್ನು ಸಂದರ್ಶಿಸಿ ನಮಸ್ಕರಿಸಿದಾಗ

ಪುತ್ರವತೀಭವ ಎಂದು ಅವರು ಆಶೀರ್ವದಿಸಿದರು. ಮಹಾತ್ಮರ ನುಡಿಯು
 
ಹುಸಿಯಾಗುವುದುಂಟೆ ? ಅದರಂತೆ ಅವಳಿಗೆ ಒಂದು ಗಂಡು ಮಗು ಜನಿಸಿತು.

ಜನಾಪವಾದ ಹಾಗೂ ಮಯ್ಯಾದೆಯ ರಕ್ಷಣೆಗಾಗಿ ಆಕೆ ಆ ಮಗುವನ್ನು ಲಹರತಾರಾ

ಎಂಬ ಕೆರೆಯ ದಂಡೆಯ ಮೇಲೆ ಬಿಟ್ಟು ಬಂದಳಂತೆ. ಅದನ್ನು ನೋಡಿದ ಆಲೀ

ಅಧವಾ ನೀರೂ ಎಂಬ ನೇಕಾರನು ಅದನ್ನು ತನ್ನ ಮನೆಗೆ ಎತ್ತಿಕೊಂಡು ಹೋಗಿ

ಜೋಪಾನವಾಗಿ ಬೆಳೆಸಿದನು. ಸಂತಾನಹೀನರಾದ ನೀರೂ ಮತ್ತು ನಿಮಾ

ದಂಪತಿಗಳಿಗೆ ಅನುಕೂಲವಾಯಿತು. ಈ ಮಗುವೇ ಬೆಳೆದು ಮುಂದೆ ಕಬೀರ

ದಾಸನಾದನು.
 
2