2023-07-01 08:34:23 by jayusudindra
This page has been fully proofread once and needs a second look.
ಬಲಗೈಯ ಕಿರುಬೆರಳಿನಿಂದ ಮೇಲಕ್ಕೆ ಮಾಟುವುದು:
ಕನ್ನು ಸ್ವಾಮಿ ನಟುವನಾರ್
ಇವರು
ಇವರು ಬರೋಡಕ್ಕೆ
ತಂಜಾವೂರು ಸೋದರ ಚತುಷ್ಟಯದ ಮನೆತನಕ್ಕೆ ಸೇರಿದವರು
ಹೋಗಿ ನೆಲೆಸಿದವರಲ್ಲಿ ಮೊದಲಿಗರು. ಅಲ್ಲಿ ಭರತನಾಟ್ಯದ ಒಂದು ವಿದ್ಯಾಶಾಲೆ
ಯನ್ನು ಸ್ಥಾಪಿಸಿದರು. ಅಲ್ಲಿಯ ರಾಜರ ಆಸ್ಥಾನದ ಪ್ರಸಿದ್ಧ ನಾಟ್ಯ ಕಲಾವಿದೆಯ
ರಾಗಿದ್ದ ಗೌರಿ ಮತ್ತು ಕಾಂತಿಮತಿ ಎಂಬುವರು ಇವರ ಪ್ರಸಿದ್ಧ ಶಿಷ್ಯರು.
ಕಪಿಲಾ ಈ ರಾಗವು ೧೨ನೆಯ ಮೇಳಕರ್ತ ರೂಪವತಿಯ ಒಂದು
ಜನ್ಯರಾಗ
ಆ
ಸ ನಿ ದ ಸ ಗ ರಿ ಸ
೫೧
ಇಲ್ಲಿಯ
ಕಪಿಸ್ಥಳಂ
ಕಪಿಸ್ಥಳಂ ಎಂಬುದು ತಮಿಳುನಾಡಿನ
ತಂಜಾವೂರು ಜಿಲ್ಲೆಯ ಒಂದು ಊರು.
ಸಂಗೀತಪ್ರಿಯರೂ ಪೋಷಕರೂ
ಮೂಪ್ಪನಾರ್ ಎಂಬುವರು
ತ್ಯಾಗರಾಜರ ಶಿಷ್ಯರಾದ
ಸಂಗೀತ
ಕೃಷ್ಣ ಭಾಗವತರು ಮತ್ತು ಸುಂದರಭಾಗವತರಲ್ಲಿ
ಕಲಿಯಲು ಬಂದ ವಿದ್ಯಾರ್ಥಿಗಳ ಪೋಷಣೆಗೆ ಏರ್ಪಾಡು ಮಾಡುತ್ತಿದ್ದರು. ಉಚಿತ
ವಸತಿ ಮತ್ತು ಊಟ ಹಾಗೂ ಪ್ರತಿವಾರವೂ ಅಭ್ಯಂಜನ ಸ್ನಾನಕ್ಕೆ ವ್ಯವಸ್ಥೆ ಗೊಳಿಸು
ತಿದ್ದರು. ಕೃಷ್ಣ ಭಾಗವತರಿಂದ ವಿದ್ಯಾರ್ಥಿಗಳ ಪ್ರಗತಿಯ ವರದಿ ಬರುತ್ತಿರುವವರೆಗೂ
ಕಪಿಸ್ಥಳದ ಛತ್ರದಲ್ಲಿ ಅವರಿಗೆ ಈ ಅನುಕೂಲಗಳು ದೊರಕುತ್ತಿದ್ದುವು. ಮೂಪ್ಪ
ನಾರರ ಕುಟುಂಬ ವರ್ಗದವರು ತಿರುವೈಯ್ಯಾರಿನ ತ್ಯಾಗರಾಜೋತ್ಸವದಲ್ಲಿ ಅಪಾರ
ಶ್ರದ್ಧೆಯಿಂದ ಆಸಕ್ತಿ ವಹಿಸಿ ಉದಾರವಾಗಿ ಖರ್ಚು ಮಾಡುತ್ತಿದ್ದರು.
ಕಪಿತ್ಥ ಹಸ್ತ
ಇದು ಭರತನಾಟ್ಯದ ಒಂದು ಅಸಂಯುತ ಹಸ್ತಮುದ್ರೆ,
ಶಿಖರ ಹಸ್ತದ ಅಂಗುಷ್ಠದ ಮೇಲೆ ತೋರುಬೆರಳನು
ಮಡಿಸಿದರೆ ಕಪಿತ್ಥ ಹಸ್ತ
ವಾಗುವುದು. ಲಕ್ಷ್ಮಿ, ಸರಸ್ವತಿಯರನ್ನು ಸೂಚಿಸುವುದು, ಸುತ್ತುವುದು, ತಾಳವನ್ನು
ಹಿಡಿದುಕೊಳ್ಳುವಿಕೆ, ಹಾಲು ಹಿಂಡುವಿಕೆ, ಕಾಡಿಗೆ ಇಟ್ಟು ಕೊಳ್ಳುವುದು,
ಆನಂದಕ್ಕಾಗಿ ಪುಷ್ಪ ಹಿಡಿದುಕೊಳ್ಳುವುದು, ಮುಸುಕು ಹಾಕಿಕೊಳ್ಳುವುದು, ಧೂಪ
ದೀಪಾರ್ಚನೆಗಳನ್ನು ತೋರಿಸಲು ಈ ಹಸ್ತ ಉಪಯೋಗಿಸಲ್ಪಡುವುದು.
ಕಪಡಿಯ
ಒಂದು ಕಡ್ಡಿಯಿಂದ ನುಡಿಸಲಾಗುವ ಒಂದು ಸಣ್ಣ ಮದ್ದಲೆ.
ಕಪ್ಪ
ಇದು ತಮಿಳಿನ ಓಡಂ ಅಥವಾ ಪುನ್ನಾಗವರಾಳಿರಾಗ, ಪ್ರಾರಂಭ
ಮತ್ತು ಮುಕ್ತಾಯದ ಭಾಗವನ್ನು ವಿಳಂಬದಲ್ಲಿ ಹಾಡುವರು ಮಿಕ್ಕ ಭಾಗವನ್ನು
ದ್ರುತಗತಿಯಲ್ಲಿ ಹಾಡುವರು. ವಿಳಂಬದ ಭಾಗವು ಚತುರಶ್ರಗತಿ ಆದಿತಾಳದಲ್ಲಿ,
ಮಿಕ್ಕ ಭಾಗವು ಖಂಡಗತಿ ಆದಿತಾಳದಲ್ಲೂ ಇರುತ್ತದೆ. ದೀರ್ಘವಾದ ಕಥಾನಕಗಳನ್ನು