This page has been fully proofread once and needs a second look.

ಸಂಗೀತ ಪಾರಿಕನ್ನಯ್ಯಭಾಷಿಕ ಕೋಶ
 
ಕನ್ನಯ್ಯಭಾಗವತರು-
ಗವತರು
ಇವರು ತ್ಯಾಗರಾಜರ ಒಬ್ಬ ಪ್ರಸಿದ್ಧ ಶಿಷ್ಯರು.

ತಿರುವನಂತಪುರಕ್ಕೆ ಹೋಗಿ ಸ್ವಾತಿತಿರುನಾಳ್ ಮಹಾರಾಜರ

ಆಸ್ಥಾನದಲ್ಲಿ

ತ್ಯಾಗರಾಜರ ಕೃತಿಗಳನ್ನು ಹಾಡಿದವರಲ್ಲಿ ಮೊದಲಿಗರು, ಅದೇ ಆಸ್ಥಾನ ವಿದ್ವಾಂಸರಾಗಿ

ನೇಮಕಗೊಂಡು ಗೌರವಿಸಲ್ಪಟ್ಟರು.
 
೫೦
 

 
ಕನ್ನಡಸಾಳವಿ-
ಈ ರಾಗವು ೮ನೆಯ ಮೇಳಕರ್ತ ಹನುಮತೋಡಿಯ

ಒಂದು ಜನ್ಯರಾಗ.
 
ಸ ಗ ಮ ಪ ದ ಸ
 

 
ಸ ನಿ ದ ಮ ಗ ಸ
 

ಸ ಗ ಮ ಪ ದ ಸ
ಸ ನಿ ದ ಮ ಗ ಸ
 
ಕನ್ನಡಸೌರಾಷ್ಟ್ರ
ಈ ರಾಗವು ೧೦ನೆಯ ಮೇಳಕರ್ತ ನಾಟಕಪ್ರಿಯದ

ಒಂದು ಜನ್ಯರಾಗ,
 
ಸ ರಿ ಮ ಗ ಮ ದ ಪ ದ ನಿ ಸ
ಸ ನಿ ದ ಪ ಮ ಗ ಸ
 

ಸ ರಿ ಮ ಗ ಮ ದ ಪ ದ ನಿ ಸ
ಸ ನಿ ದ ಪ ಮ ಗ ಸ
 
ಕನ್ನಡವರಾಳಿ-
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
 

ಒಂದು ಜನ್ಯರಾಗ.
 
ಸ ರಿ ಮ ಪ ನಿ ಸ
ಸ ಸ ದ ನಿ ಸ ಗ ರಿ ಸ
 

ಸ ರಿ ಮ ಪ ನಿ ಸ
ಸ ಸ ದ ನಿ ಸ ಗ ರಿ ಸ
 
ಕನ್ನಡವೇಳಾವಳಿ-
ಈ ರಾಗವು ೪೮ನೆಯ ಮೇಳಕರ್ತ ದಿವ್ಯಮಣಿಯ

ಒಂದು ಜನ್ಯರಾಗ
 
ಪ ನಿ ಸ ರಿ ಗ ಮ ಪ
 
ಪ ಮ ಗ ರಿ ಸ ನಿ ದ ನಿ ಸ
 

ಪ ನಿ ಸ ರಿ ಗ ಮ ಪ
ಪ ಮ ಗ ರಿ ಸ ನಿ ದ ನಿ ಸ
 
ಕನ್ಯಾವಿತಾನ-
ಈ ರಾಗವು ೩೧ನೆಯ ಮೇಳಕರ್ತ ಯಾಗಪ್ರಿಯದ ಒಂದು
 

ಅ.
 

ಜನ್ಯರಾಗ,
 
ಸ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಗ ರಿ ಸ
 

ಸ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಗ ರಿ ಸ
 
ಕನಿಷ್ಠ-
ನಾಯಕನ ಪ್ರೀತಿಗೆ ಅಷ್ಟಾಗಿ ಪಾತ್ರಳಾಗದಿರುವ ನಾಯಕಿ,

 
ಕನಿಷ್ಠಕ
ಅತ್ಯಂತ ಚಿಕ್ಕದಾದುದು ಎಂದರ್ಥ. ವಾದ್ಯವೃಂದಗಳನ್ನು

ವಾದ್ಯಗಳ ಸಂಖ್ಯೆಯನ್ನನುಸರಿಸಿ ಉತ್ತಮ, ಮಧ್ಯಮ ಮತ್ತು ಕನಿಷ್ಠಕವೆಂದು

ವರ್ಗಿಕರಿಸಲಾಗಿದೆ. ಉತ್ತಮ ವೃಂದದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ

ವಾದ್ಯಗಳು, ಮಧ್ಯಮ ವೃಂದದಲ್ಲಿ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲ, ಮತ್ತು

ಕನಿಷ್ಠಕ ವೃಂದದಲ್ಲಿ ಇರಬೇಕಾದ ಕಡಿಮೆ ಸಂಖ್ಯೆಯ ವಾದ್ಯಗಳಿರುತ್ತವೆ.

ವರ್ಗಿಕರಣವನ್ನು ಸಂಗೀತರತ್ನಾ ಕರವೆಂಬ ಗ್ರಂಥದಲ್ಲಿ ಹೇಳಿದೆ.