This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
( ಜಪವ ಮಾಡಿದರೇನು ತಪವ ಮಾಡಿದರೇನು, ಕಪಟಗುಣ ವಿಪರೀತ ಕಲುಷ
ವಿದ್ದವರು ??.
 
ಕನಕದಾಸರು ಲೋಕದ ಹಿತದೃಷ್ಟಿಯಿಂದ ನಾಡಿನ ನಾನಾ ಕಡೆಗಳಲ್ಲಿ ಸಂಚರಿಸಿ
ಭಕ್ತಿ ತತ್ವದ ಹಿರಿಮೆಯನ್ನು ಪ್ರಚಾರ ಮಾಡಿದರು. * ಭಜಿಸಿ ಬದುಕೆಲೋ ಮನುಜ
ಮನಮುಟ್ಟಿ ಹರಿಯ' ಎಂದು ಸಾರಿ ಸಾರಿ ಹೇಳಿದರು. ದಾಸರು ದೇಶದ ಅನೇಕ
ಪುಣ್ಯಕ್ಷೇತ್ರಗಳನ್ನು ಸಂದರ್ಶನ ಮಾಡಿದರು. ತೀರ್ಥಯಾತ್ರೆಯು ಸದ್ಧತಿಯನ್ನು
ಹೊಂದುವುದಕ್ಕೆ ಸುಲಭ ಮಾರ್ಗವೆಂದು ತಿಳಿಸಿದ್ದಾರೆ.
ತಿರುಪತಿ ವೆಂಕಟೇಶ್ವರನನ್ನು
ಒಬ್ಬ ಶೆಟ್ಟಿಗೆ ಹೋಲಿಸಿ ಹಾಸ್ಯ ಮಾಡಿದ್ದಾರೆ
 
ಶ್ರೀರಂಗಪಟ್ಟಣಕ್ಕೆ ಹೋದ ದಾಸರು
 
ಅಲ್ಲಿ ಮಲಗಿರುವ ರಂಗನಾಧಸ್ವಾಮಿಯನ್ನು ನೋಡಿ - ಯಾಕೆ ನೀನಿಲ್ಲಿ ಪವಡಿಸಿದೆ
ಹರಿಯೆ ಜಗದೇಕ ವಿಖ್ಯಾತ ಪಶ್ಚಿಮರಂಗನಾಥ' ಎಂದು ಪ್ರಶ್ನಿಸಿದ್ದಾರೆ. ಅಲ್ಲಿಂದ
ಮೇಲುಕೋಟೆ, ಬೇಲೂರು, ಬಂಕಾಪುರ, ಬಿಳಿಗಿರಿ, ತಿರುಕೋನಲ್ಲೂರು ಮುಂತಾದ
ಹಲವು ಕ್ಷೇತ್ರಗಳನ್ನು ಸಂದರ್ಶಿಸಿದರು.
 
ಕನಕದಾಸರು ಮಧ್ವಾಚಾರ್ಯರ ತತ್ವಗಳನ್ನು ಪ್ರಧಾನವಾಗಿ ಹೇಳಿದ್ದರೂ
ರಾಮಾನುಜಾಚಾರ್ಯರ ಸಿದ್ಧಾಂತವನ್ನು ಕೊಂಡಾಡಿದ್ದಾರೆ "ರಾಮಾನುಜ
ಮತೋದ್ಧಾರಕ ! ತಾಮನಗುಣ ಪಾಶವಜ್ರದಂಡ" ಎಂಬ ಕೀರ್ತನೆ ಪ್ರಸಿದ್ಧವಾಗಿದೆ.
ತಮ್ಮ ಕೀರ್ತನೆಗಳಲ್ಲಿ ಶ್ರೀಹರಿಯ ನಾನಾ ಅವತಾರಗಳನ್ನು ಕುರಿತು ಹಾಡಿದ್ದಾರೆ.
ಭಾಗವತದ ಹಲವು ಪ್ರಕರಣಗಳನ್ನು ಪ್ರಸ್ತಾಪಿಸಿರುವುದಲ್ಲದೆ ಶ್ರೀಕೃಷ್ಣನ ಲೀಲೆ
ಗಳನ್ನು ವರ್ಣಿಸಿದ್ದಾರೆ. ಇವರ ಕೀರ್ತನೆಗಳು ಭಕ್ತಿ, ವ್ಯಂಗ್ಯ, ಹಾಸ್ಯ, ಶೃಂಗಾರ,
ಪುರಾಣ ಕಥೆ ಮೊದಲಾದ ವಿವಿಧ ಅಂಶಗಳನ್ನು ಒಳಗೊಂಡಿವೆ. ಭಕ್ತಿಪ್ರಚಾರ,
ನೀತಿ ನಿರೂಪಣೆಗಳೆರಡೂ ಇವರ ಉಪದೇಶ ಸಾರ,
 
ದಾಸರು ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಮತ್ತು
ಹರಿಭಕ್ತಿಸಾರ ಎಂಬ ನಾಲ್ಕು ಕಾವ್ಯಗಳನ್ನು ರಚಿಸಿದ್ದಾರೆ. ಮೋಹನತರಂಗಿಣಿಯ
ಕೃಷ್ಣ ರುಕ್ಕಿಣಿಯರ ವಿಹಾರ ವರ್ಣನೆಯಿಂದ ತೊಡಗಿ ಉಷಾ ಅನಿರುದ್ಧರ
ವಿವಾಹ ಕಥೆಯವರೆಗೆ ವಿಸ್ತಾರವಾಗಿದೆ ನಳಚರಿತ್ರೆಯು ದಾಸರ ಕೃತಿಗಳಲ್ಲಿ ಬಹಳ
ಲೋಕಪ್ರಿಯವಾದುದು ರಾಮಧಾನ್ಯ ಚರಿತ್ರೆಯು ರಾಗಿ ಮತ್ತು ಅಕ್ಕಿಗೆ ನಡೆದ
ಕಲಹದ ಕಥೆಯಾದ ಸ್ವಾರಸ್ಯಕರವಾದ ಕಾವ್ಯ. ಹರಿಭಕ್ತಿಸಾರವು ಒಂದು ಉತ್ತಮ
ಶತಕ ಗ್ರಂಥ. ಇದರ ಪ್ರತಿಯೊಂದು ಪದ್ಯವೂ ' ರಕ್ಷಿಸು ನಮ್ಮನನವರತ ' ಎಂಬ
ಬೇಡಿಕೆಯೊಂದಿಗೆ ಮುಗಿಯುತ್ತದೆ. ಕನಕದಾಸರು ಶ್ರೇಷ್ಠ ಹರಿಭಕ್ತರು. ಉತ್ತಮ
ಕೀರ್ತನಕಾರರು ಒಳ್ಳೆಯ ಕೃತಿಗಳನ್ನು ರಚಿಸಿದ ಕವಿ, ಮಾನವತಾವಾದಿ, ಇಂತಹ
ಭಾಗವತೋತ್ತಮರಿಗೆ ಈಡಾಗಬಲ್ಲವರು ಲೋಕದಲ್ಲಿ ವಿರಳವೆಂದು ಪುರಂದರದಾಸರು
ಹೇಳಿರುವುದು ಆಶ್ಚರ್ಯವಲ್ಲ. ದಾಸರು ಪುರಂದರದಾಸರ ತಂಬೂರಿಯನ್ನು