This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕನಕದಾಸರಿಗೆ ದೇವರ ದರ್ಶನ ಒದಗಲು ಸ್ವಲ್ಪ ಕಾಲ ಹಿಡಿಯಿತು. ಎಲ್ಲವನ್ನೂ
ತ್ಯಜಿಸಿ ಹರಿದಾಸರಾದರೂ ಭಕ್ತಿ ಸ್ಥಿರವಾಗದೆ ಕೊಂಚಕಾಲ
ಸ್ಥಿರಭಕ್ತಿ ಲಭಿಸುವಂತೆ ಅನುಗ್ರಹಿಸಬೇಕೆಂದು ದಾಸರು ಭಗವಂತನನ್ನು ಬೇಡಿದ್ದಾರೆ.
 
ತೊಳಲಾಡಿದರು.
 
೧೪೪
 
ಕಾಡುವದುರಿತಗಳ ಬಿಡಿಸೆಂದು
 
ಬೇಡಿಕೊಂಬೆ ನಾನಿನ್ನ
 
ಕಾಯೋ ಕರುಣಾಕರನೆ ಕಡುಪಾಪಿ ನಾನು
ನ್ಯಾಯವೆಂಬುದು ಎನ್ನೊಳೆಳ್ಳಿ ನಷ್ಟಿಲ್ಲ
 
ಎಂದು ನಾನಾ ವಿಧವಾಗಿ ದೇವರಲ್ಲಿ ಬೇಡಿದರು. ತನ್ನ ಜನ್ಮಾಂತರ ಕರ್ಮಫಲವನ್ನು
ತೆಗಳಿಕೊಂಡಿದ್ದಾರೆ.
 
ಪ್ರಾಚೀನ ಕರ್ಮವು ಬಿಡಲರಿಯ
 
ಯೋಚನೆಯನುಡಿ ಬಳಲುವುದೇಕೆ ಮನುಜ ?
 
6
 
ಎಂದು ಭಾವಿಸಿಕೊಂಡರು. ಏಕಚಿತ್ತದಿಂದ ಹರಿಧ್ಯಾನಮಗ್ನರಾದರು. ಆಗ ಇವರಿಗೆ
ಶ್ರೀಹರಿಯ ದರ್ಶನಾನುಗ್ರಹವಾಯಿತು.
 
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು'
 
ಎಂದು ಸಂತೋಷದಿಂದ ಹಿಗ್ಗಿ ದರು. ಅಂದಿನಿಂದ ನಾಡಿನಲ್ಲಿ ಭಕ್ತಿ ಪ್ರಚಾರ
 
ಮಾಡಲಾರಂಭಿಸಿದರು.
 
-ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ
 
ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು?
 
ಎಂದು ನಿಸ್ಸಂಶಯವಾಗಿ ತಿಳಿಯಹೇಳಿ ಹರಿನಾಮ ಕೀರ್ತನದ ಅಗತ್ಯವನ್ನು ಒತ್ತಿ
ಹೇಳಿದರು.
 
ಎಂದು ಉಪದೇಶಿಸಿದರು.
 
* ಕೇಶವ ಎನ್ನಿರೋ ಕೇಶನಾಶನನ ಕೇಶವ ಎನ್ನಿರೋ'
* ಭಜಿಸಿಬದುಕೆ ಮನುಜ ಮನಮುಟ್ಟಿ ಹರಿಯ ?
ಒಂದೇ ಮನಸ್ಸಿನಿಂದ ಶ್ರೀಹರಿಯ
ಯಿಟ್ಟು ಅವಿಚಲ ಭಕ್ತಿಯನ್ನು ದೀರ್ಘಕಾಲ ಸಾಧನೆ ಮಾಡಬೇಕು.
ಸಜ್ಜನರ ಸಹವಾಸ ಮಾಡಬೇಕು. ದಾಸನಾಗೋಭವಪಾಶನೀಗೋ
ಸಂಸಾರ ಬಂಧನವನ್ನು ಕಳೆದುಕೊಳ್ಳಬೇಕೆಂದು ಹೇಳಿದ್ದಾರೆ.
 
6
 
ಕಪಟವೇಷ, ಬೂಟಕದ ಭಕ್ತಿ, ಅನಾಚಾರಗಳು ಇವರಿಗೆ ಸಹನೆಯಾಗಲಿಲ್ಲ.
ಬಾಹ್ಯವೇಷದಿಂದ ಯಾರೂ ಶ್ರೇಷ್ಠರಾಗರು. ಅಂತರಂಗ ಶುದ್ಧಿಯಿಲ್ಲದೆ ಬರಿಯ
ನಟನೆಯ ಭಕ್ತಿ ತರವಲ್ಲವೆಂದು ಸಾರಿ, ವೇಷಧಾರಿ ಜನರ ದುರ್ನಡತೆಯನ್ನು ಖಂಡಿ
ಸಿದ್ದಾರೆ. ದಾಸರಿಗೆ ಅನಾಚಾರ ಎಲ್ಲಿ ಕಂಡರೂ ಸಹಿಸದು. ಭಕ್ತನಿಗೆ ಮನೋನೈರ್ಮಲ್ಯ
ಮತ್ತು ಸುಶೀಲವಂತಿಕೆ ಅಗತ್ಯ, ಶೀಲಭ್ರಷ್ಟನಿಗೆ ಭಗವಂತನು ಒಲಿಯನು ಎಂದರು
 
ಕರುಣೆಯಲ್ಲಿ ನಂಬಿಕೆ
 
ಸಾಧಕನು
" ಎಂದು