2023-06-25 23:29:29 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಗ್ರಾಮದಲ್ಲಿ ನೆಲೆಸಿದರು. ಕನ್ನಡನಾಡಿನ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಕೊನೆಗೆ
ಕಾಗಿನೆಲೆಯಲ್ಲಿ ಪರಂಧಾಮವನ್ನು ಸೇರಿದರು.
೧೪೩
ಕನಕದಾಸರು ಹರಿದಾನರಾದ ನಂತರ ವಿಷ್ಣುವೇ ಪರದೈವವೆಂದು ನಂಬಿ ಉಳಿದ
ದೇವರುಗಳ ಪೂಜೆ ವ್ಯರ್ಧವೆಂದು ಸಾರಿ ಹೇಳಿದರು. ಅದುವರೆಗೆ ಆ ಜನರು ಆರಾಧಿ
ಸುತ್ತಿದ್ದ ದೈವಗಳನ್ನೆಲ್ಲ ವೊಳ್ಳುದೈವ, ಜಡದೈವ, ಠಕ್ಕುದೈವ ಎಂದು ಟೀಕಿಸಿದರು.
ಹೀನಕುಲದವನೆಂದು ಇತರರು ದಾಸರನ್ನು ಅಲ್ಲಗಳೆದರೆ ಹೊಸದೇವರ ಮಹಿಮೆಗೆ
ಮನಸೋತು ತಮ್ಮ ಕುಲದೈವವನ್ನು ಹೀನೈಸಿದನೆಂದು ಕುರುಬರು ಸಿಟ್ಟಾಗಿ ಅವರನ್ನು
ಹಿಂಸೆಗೆ ಗುರಿಪಡಿಸಿದರು.
(6
ಕೃಷ್ಣಾ" ಎಂದು ದಾಸರು ಮೊರೆಯಿಟ್ಟರು.
ಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆ
ಅಟ್ಟಿ ಬಡಿವುತಲಿಹರೋ
ಜಲಜಾಕ್ಷ ಕಾಗಿನೆಲೆಯಾದಿಕೇಶನ ಮನ
ವೊಲಿಸಿ ಭಜಿಸದವನು ಹುಚ್ಚು ಕುರುಬ
ಎಂಬ ಸಿದ್ಧಾಂತಕ್ಕೆ ಬಂದು, ಯಾವ ಹಿಂಸೆಗೂ ನೋಲದೆ, ಸ್ವಲ್ಪವೂ ಅಳುಕದೆ ಏಕ
ಚಿತ್ತದಿಂದ ಹರಿಧ್ಯಾನಪರಾಯಣರಾಗಿ, ಲೋಕಕ್ಕೆ ಹರಿಭಕ್ತಿಯ ಮಹಿಮಾತಿಶಯ
ವನ್ನು ಉಪದೇಶಿಸಿದರು.
ಇವರ ಹರಿಭಕ್ತಿಯ ಆಳ, ಧ್ಯಾನ, ತ್ಯಾಗಗಳು ಇತರರಿಗೆ ಅರ್ಥವಾಗಲಿಲ್ಲ.
ಅಜ್ಞಾನಿಗಳ ಅಹಂಕಾರಿಗಳ ಮರ್ವತ್ರನೆಯಿಂದ ದಾಸರು ಬಹಳ ನೊಂದರು.
ವಿಜಯನಗರಕ್ಕೆ ಹೋಗಿ ಶ್ರೀ ವ್ಯಾಸತೀರ್ಥರ ದಿವ್ಯ ಸಂದರ್ಶನ ಪಡೆದು ಪರಮಾನು
ಗ್ರಹಕ್ಕೆ ಪಾತ್ರರಾದರು. ಸ್ವಾಮಿಗಳಿಗೆ ದಾಸರ ಮಹಿಮೆಯು ಮೊದಲ ನೋಟದಲ್ಲೇ
ಅರ್ಧವಾಯಿತು. ಮಠದ ಜನಕ್ಕೆ ಇದು ಅರ್ಥವಾಗಲಿಲ್ಲ.
ಕನಕದಾಸರಮೇಲೆ ದಯಮಾಡಲು ವ್ಯಾಸ
ಮುನಿ ಮಠದವರೆಲ್ಲ ದೂರಿಕೊಂಬುವರೋ
ಎಂದು ಪುರಂದರದಾಸರು ಬೇಸರಪಟ್ಟುಕೊಂಡರು
ಪಾತ್ರರಾದ ಕನಕದಾಸರು ಈ ಕುಹಕಿಗಳ ಕೀಟಲೆಗೆ ಕಂಗೆಡಲಿಲ್ಲ.
ಕುಲಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದನೆಲೆಯನೇನಾದರು ಬಲ್ಲಿರಾ ?
ಎಂದು ಕುಲಮದ ದೂಷಿತರಿಗೆ ವಿವೇಕ ಹೇಳಿದರು. ಮುಂದೆ ದಾಸರು ಉಡುಪಿಗೆ
ಹೋದಾಗ ದೇವಾಲಯಕ್ಕೆ ಪ್ರವೇಶ ದೊರೆಯಲಿಲ್ಲ. ಆದರೆ ದಾಸರು ದೇವಾಲಯದ
ಹಿಂದೆ ಹೋಗಿ ದೇವರನ್ನು ಪ್ರಾರ್ಥಿಸಲು ಶ್ರೀಕೃಷ್ಣನು ಅವರಿಗೆ ಆಲಯದ ಗೋಡೆಯ
ಒಂದು ಕಿಂಡಿಯಿಂದಲೇ ದರ್ಶನವಿತ್ತನು. ಇದೇ ಪ್ರಸಿದ್ಧವಾಗಿರುವ ಕನಕನಕಿಂಡಿ.
ಕನಕದಾಸರ ಕುಲ ಹರಿಭಕ್ತರ ಕುಲ. ಇದನ್ನು ಅರ್ಥಮಾಡಿಕೊಳ್ಳಲು ಇವರ ಸಮ
ಕಾಲೀನರಿಗೆ ಕೊಂಚಕಾಲ ಹಿಡಿಯಿತು.
ಗುರುವಿನ ಪರಮಾನುಗ್ರಹಕ್ಕೆ