This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪ್ರದರ್ಶಿಸುವ ನಾಟಕ. ಇದರಲ್ಲಿ ಸ್ತ್ರೀಯರೂ ಭಾಗವಹಿಸುತ್ತಾರೆ. ಅಭಿನಯವು
ಇದರಲ್ಲಿ ಉನ್ನತ ಮಟ್ಟದಲ್ಲಿರುತ್ತದೆ.
 
ಮುಟೆಯಟ್ಟು, ತೀರ್ಯಾಟ್ಟಂ, ತೀಯಾಟ್ಟ ಎಂಬ ಕೆಲವು ನೃತ್ಯಗಳು
ಭಗವತಿಯ ಉಪಾಸನೆಗಾಗಿ ಮಾಡುವ ಮುಖ್ಯ ಧಾರ್ಮಿಕ ನೃತ್ಯಗಳು. ಇವುಗಳಲ್ಲಿ
ಭಗವತಿಯ ದಿವ್ಯ ಗುಣಗಳ ವರ್ಣನೆಯಿದೆ. ಈ ಪ್ರದರ್ಶನಗಳಲ್ಲಿ ದೇವತೆಗಳ ಮತ್ತು
ರಾಕ್ಷಸ ರಾಕ್ಷಸಿಯರ ಪಾತ್ರಧಾರಿಗಳು ಪಾತ್ರಕ್ಕೆ ತಕ್ಕ ದೇದೀಪ್ಯಮಾನವಾದ ಸಕಲಾ
ಭರಣ ಭೂಷಿತವಾದ ವೇಷಭೂಷಣಗಳನ್ನೋ ಅಥವಾ ಭಯಂಕರವಾದ ಹಾಗೂ
ಅಸಹ್ಯವಾದ ವೇಷಭೂಷಣಗಳನ್ನೂ ಧರಿಸುತ್ತಾರೆ. ಸಾಮಾಜಿಕ ಮತ್ತು
ಧಾರ್ಮಿಕ ನೃತ್ಯಗಳಾದ ಯಾತ್ರಕಳಿ, ಶಸ್ತ್ರಕಳಿ, ಸಂಘಕಳಿ ಮತ್ತು ಎತ್ತು ಮತ್ತು
ಕಳಿ ಇವೆಲ್ಲವೂ ಪರಸ್ಪರ ಸಂಬಂಧವಿರುವ ನೃತ್ಯಗಳು, ಕುಳ್ಳಲ್ ಎಂಬುದು
ಏಕವ್ಯಕ್ತಿಯ ನೃತ್ಯವಾಗಿದ್ದು ದೇವಾಲಯಗಳಲ್ಲಿ, ಮದುವೆ ಅಧವಾ ಇತರ ಖಾಸಗೀ
ಸಂದರ್ಭಗಳಲ್ಲಿ ಪ್ರದರ್ಶಿತವಾಗುತ್ತದೆ. ನೃತ್ಯಗಾರನು ಅಪೂರ್ವ ಕಲ್ಪನಾ ಶಕ್ತಿ
ಯುಳ್ಳವನೂ, ಮನಸ್ಸನ್ನು ಸೂರೆಗೊಳ್ಳುವವನೂ
ಆಗಿರುತ್ತಾನೆ. ವೇಷ
ಭೂಷಣಗಳು, ಮುಖ ಬಣ್ಣಗಳು ಕಧಕಳಿಯಿಂದ ಬೇರೆಯಾಗಿರುತ್ತವೆ. ಪ್ರದರ್ಶನದ
ಮಧ್ಯೆ ನೃತ್ಯಗಾರನು ಕೆಲವು ತೀವ್ರಗತಿಯ ಪಾದಚಲನೆಯನ್ನೂ ನೃತ್ಯವಿಧಾನ
ಗಳನ್ನೂ ಮಾಡಿ ವಿರಮಿಸುತ್ತಾನೆ. ಪಕ್ಕವಾದ್ಯವಾದಕರು ಸತತವಾಗಿ ಸಂಗೀತ
ಒದಗಿಸುತ್ತಾರೆ.
 
OBO
 
ಕಥಾಪಾತ್ರ-ನೃತ್ಯನಾಟಕ ಅಥವಾ ಗೇಯನಾಟಕಗಳಲ್ಲಿ ಬರುವ ಪಾತ್ರ.
ಕದಂಬ-ತಿಶ್ರಜಾತಿ ಝಂಪತಾಳದ ಹೆಸರು. ಇದರ ಒಂದಾವರ್ತಕ್ಕೆ
೬ ಅಕ್ಷರ ಕಾಲವಾಗುತ್ತದೆ.
 
ಕದಳೀರಸ-ಬಾಳೆಹಣ್ಣಿನ ರುಚಿ ಎಂದರ್ಥ. ಸಂಗೀತ ರಚನೆಗಳನ್ನು
ಅವುಗಳ ರಸಭಾವಕ್ಕನುಗುಣವಾಗಿ ದ್ರಾಕ್ಷಾರಸ, ನಾಳಿಕೇರರಸ ಮತ್ತು ಕದಳಿ
ರಸವೆಂದು ವರ್ಗೀಕರಣ ಮಾಡಿರುತ್ತಾರೆ. ಸರಳ, ಸುಂದರ ಮತ್ತು ಲಲಿತವಾಗಿದ್ದು
ತಿಳಿದು ಅನುಭವಿಸಲು ಸ್ವಲ್ಪವೂ ಕಷ್ಟವಾಗದಿರುವ ರಚನೆಗಳನ್ನು ದ್ರಾಕ್ಷಾರಸಕ್ಕೆ
ಹೋಲಿಸಿದ್ದಾರೆ. ಏಕೆಂದರೆ ದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಂಡ ಕೂಡಲೇ
ಅದರ ಸವಿ ಹತ್ತುತ್ತದೆ. ತ್ಯಾಗರಾಜರ ಕೃತಿಗಳು ದ್ರಾಕ್ಷಾರಸದ ಕೃತಿಗಳಿಗೆ ನಿದರ್ಶನ.
ಹಲವು ಸಲ ಕೇಳಿ ಅರ್ಥ ಮಾಡಿಕೊಂಡ ನಂತರ ಅನುಭವಿಸಲು ಸಾಧ್ಯವಿರುವ
ಕೃತಿಗಳು ನಾಳೀಕೇರರಸದಂತೆ, ಎಳನೀರನ್ನು ಕುಡಿಯುವ ಮೊದಲು ಅದರ
ಮಟ್ಟೆಯನ್ನು ತೆಗೆದು ಕರಟವನ್ನು ಒಂದು ಕುಡುಗೋಲಿನಿಂದ ಒಡೆಯಬೇಕು.
ಹೀಗೆ ಸ್ವಲ್ಪ ಶ್ರಮ ಪಟ್ಟನಂತರ ರುಚಿಯನ್ನು ಅನುಭವಿಸಲು ಸಾಧ್ಯ ಮುತ್ತು
ಸ್ವಾಮಿ ದೀಕ್ಷಿತರ ಕೃತಿಗಳು ಈ ವರ್ಗಕ್ಕೆ ಸೇರಿವೆ. ಬಾಳೆಯ ಹಣ್ಣನ್ನು ತಿನ್ನುವ
ಮೊದಲು ಸಿಪ್ಪೆಯನ್ನು ಸುಲಿಯಬೇಕು. ಶ್ಯಾಮಾಶಾಸ್ತ್ರಿಗಳ ಕೃತಿಗಳು ಬಾಳೆಯ