This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೧೩೯
 
ಸಿಕವೋ ಎಂದು ಗೊತ್ತಾಗುತ್ತದೆ. ಸಾತ್ವಿಕಕ್ಕೆ ಹಸಿರು, ರಾಜಸಿಕಕ್ಕೆ ಕೆಂಪು,

ತಾಮಸಿಕಕ್ಕೆ ಕಪ್ಪು ಬಣ್ಣಗಳಿರುತ್ತವೆ. ಸಾತ್ವಿಕ ಮತ್ತು ರಾಜಸಿಕ ಗುಣಗಳೆರಡೂ

ಇದ್ದವರಿಗೆ ಹಳದಿ ಬಣ್ಣವಿರುತ್ತದೆ. ಬಣ್ಣಲೇಪನದಲ್ಲಿ ಭೇದವಿರುವುದಲ್ಲದೆ, ವೇಷ

ಧಾರಿಗಳು ಕಟ್ಟುವ ಕಿರೀಟಗಳಲ್ಲಿಯೂ ಭೇದವಿದೂ ಅವು ಪಾತ್ರಗಳನ್ನು ಸೂಚಿಸು

ಇವೆ. ದೊಡ್ಡ ಕಿರೀಟಗಳನ್ನು, ವಿವಿಧ ಬಣ್ಣಗಳ ವೇಷಭೂಷಣಗಳನ್ನು ಧರಿಸಿದ ಈ

ಪಾತ್ರಧಾರಿಗಳು ಪುರಾಣಗಳ ಕಾಲದಿಂದ ರಂಗಸ್ಥಳಕ್ಕೆ ಇಳಿದುಬಂದ ಮಹಾವ್ಯಕ್ತಿ
 
ಗಳಂತೆ ಕಾಣುವರು.
 

ಪಾತ್ರಧಾರಿಗಳು ಉಪಯೋಗಿಸುವ ಬಣ್ಣಗಳು ಐದು-ಕೆಂಪು, ಹಸಿರು, ಹಳದಿ,

ಕಪ್ಪು ಮತ್ತು ಬಿಳಿ, ಈ ಬಣ್ಣಗಳು ಶೋಭೆಯನ್ನೂ, ಕಾಂತಿಯನ್ನೂ, ದೀಪ್ತಿ

ಯನ್ನೂ, ಮಾಧುರ್ಯವನ್ನೂ ಉಂಟುಮಾಡುತ್ತವೆ.

ಬಣ್ಣ ಲೇಪನಗಳಿಗೆ

ಸರಿಯಾದ ದೊಡ್ಡ ಅಗಲವಾದ ಲಂಗಗಳು, ಅವುಗಳ ಜೊತೆಗೆ ಹಲವಾರು ಬಟ್ಟೆಗಳು

ಮತ್ತು ಮಣಿಹಾರಗಳನ್ನು ಸುತ್ತಿ ಅಮಾನುಷ ರೂಪಗಳನ್ನು ಪಡೆಯುತ್ತಾರೆ.

ಇದಕ್ಕಿಂತಲೂ ವಿಶಿಷ್ಟವಾದ ವೇಷಭೂಷಣ, ಬಣ್ಣಗಳ ವೈಚಿತ್ರವನ್ನು

ಮಲೆನಾಡಿನ ಯಕ್ಷಗಾನದ ಬಯಲಾಟದ ಪಾತ್ರಗಳಲ್ಲಿ ಕಾಣಬಹುದು.
 

ಕಥಕಳಿಯಲ್ಲಿ ಆರ್ಯ ಮತ್ತು ದ್ರಾವಿಡ ಸಂಸ್ಕೃತಿಗಳ ಮಿಲನವಿದೆ.

ಚೌಕಿಯಾರ್ ಕೂತ್ತು ಮತ್ತು ಕುಡಿಯಾಟ್ಟಂ ಎಂಬ ವಿಶಿಷ್ಟ ನೃತ್ಯಗಳೂ,

ನಾಟಕಗಳೂ ಮತ್ತು ಭಗವತಿಯ ಉಪಾಸನೆಗೆ ಸಂಬಂಧಿಸಿದ ಧಾರ್ಮಿಕ ನೃತ್ಯಗಳಾದ

ಮುಟಿಯಟ್ಟು, ತೀರ್ಯಾಟ್ಟಂ, ತೀಯಾಟ್ಟಂ ಮತ್ತು ಸಾಮಾಜಿಕವಾದ ಶಸ್ತ್ರಕಳಿ,

ಎರುಮಟ್ಟು ಕಳಿ ಮುಂತಾದ ವೀರ ನೃತ್ಯಗಳಲ್ಲದೆ, ಒರಟು ಜಾನಪದ ನಾಟಕ

ಗಳಾದ ಕಂಸನಾಟಕಂ, ಮಾನಾಕ್ಷಿ ನಾಟಕಂ, ಇತ್ತೀಚಿನ ಕೃಷ್ಣಾಟ್ಟಂ, ರಾಮನಾಟ್ಟಂ

ಎಂಬ ನೃತ್ಯ ನಾಟಕಗಳು ಕಥಕಳಿಯ ಮೇಲೆ ತಮ್ಮ ಪ್ರಭಾವವನ್ನು ಬೀರಿವೆ.
 

ಚೌಕಿಯಾರ್ ಕೂತ್ತು ಎಂಬುದು ಚೌಕಿಯಾರ್ ಕುಲದವರು ಮಾತ್ರ

ಪ್ರದರ್ಶಿಸಬೇಕಾದ ನೃತ್ಯ. ಇದು ಬಹಳ ಧಾರ್ಮಿಕವೂ ಶಾಸ್ತ್ರ ಸಮ್ಮತವೂ

ಆದ ಮನರಂಜನೆ. ದೇವಾಲಯಗಳಲ್ಲಿ ನೃತ್ಯಕ್ಕಾಗಿಯೇ ಮಾಸಲಾಗಿದ್ದ ಕೂತಂಬಳಂ

ಎಂಬ ಚಿಕ್ಕ ರಂಗಸ್ಥಳದಲ್ಲಿ ಮಾತ್ರ ಈ ಪ್ರದರ್ಶನವು ನಡೆಯುತ್ತಿತ್ತು. ಪ್ರದರ್ಶನ

ಕಾರನಾದ ಚೌಕಿಯಾರ್ ಒಬ್ಬ ದೊಡ್ಡ ಕತೆಗಾರ, ಚತುರ, ವಿವೇಕಿ, ರಸಿಕ ಮತ್ತು

ಹಾಸ್ಯರಸದಿಂದ ಪ್ರೇಕ್ಷಕರನ್ನು ರಂಜಿಸಬಲ್ಲವನು. ಆಖ್ಯಾನವು ಮುಂದುವರಿದಂತೆ

ಕಥೆಯಲ್ಲಿ ಬರುವ ಬೇರೆ ಬೇರೆ ಪಾತ್ರಗಳನ್ನು ಅನನ್ಯಭಾವದಿಂದ ವಿಕಟವಾಗಿ

ವಿನೋದವಾಗಿ ನಟಿಸುತ್ತಾನೆ. ನಂಬಿಯಾರ್ ಕುಲಕ್ಕೆ ಸೇರಿದವನೊಬ್ಬ ಪ್ರದರ್ಶನದ

ಮಧ್ಯೆ ಮಧ್ಯೆ, ಬೇಕಾದ ಸಮಯದಲ್ಲಿ ಮಿರುವು ಎಂಬ ಒಂದು ದೊಡ್ಡ ತಾಮ್ರದ

ನಗಾರಿಯನ್ನೂ ತಾಳಗಳನ್ನೂ ನುಡಿಸುತ್ತಾನೆ.
 
ಕೂಡಿಯಾಟ್ಟ ಎಂಬುದು ಅದರ ಹೆಸರೇ ತಿಳಿಸುವಂತೆ ಅನೇಕರು ಸೇರಿ