This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಇದು ಬೆಳಗಿನ ಜಾವ ೪ ಗಂಟೆಗೆ
 
ಕಣ್ಣಿನ ಸಾಧನೆ ಬಹಳ ಮುಖ್ಯವಾದುದು.
ಆರಂಭವಾಗುತ್ತದೆ ೪ ರಿಂದ ೬ ಅಥವಾ ೬-೩೦ ರವರೆಗೆ ಗುರುವು ಶಿಷ್ಯನ ಎದುರು
ಪದ್ಮಾಸನದಲ್ಲಿ ಕುಳಿತು ಕೋಲಿನ ಆಧಾರದಿಂದ ಕಣ್ಣುಗಳ ಚಲನಗಳನ್ನು ಹೇಳಿ
ಕೊಡುತ್ತಾನೆ. ತೆರೆದ ಕಣ್ಣುಗಳಿಂದ ಶಿಷ್ಯನು ಕೋಲಿನ ತುದಿಯನ್ನೇ ದಿಟ್ಟಿಸಿ
ನೋಡಬೇಕು. ಗುರುಶಿಷ್ಯರ ಮಧ್ಯೆ ಒಂದು ಎಣ್ಣೆ ದೀಪ ಮಾತ್ರವಿರುತ್ತದೆ. ಮಿಕ್ಕ
ಕಡೆ ಕಗ್ಗತ್ತಲೆ. ಇದರಿಂದಾಗಿ ಶಿಷ್ಯನು ದಿಗಂತದವರೆಗೂ ದೃಷ್ಟಿಯನ್ನು ಬೀರಬಲ್ಲನು.
ಕಣ್ಣುಗಳಿಗೆ ಉರಿಬಾರದಂತೆ ಹಸುವಿನ ತುಪ್ಪವನ್ನು ಹಚ್ಚಿಕೊಂಡು ಕೈಬೆರಳುಗಳಿಂದ
ಎರಡು ರೆಪ್ಪೆಗಳನ್ನು ಬಿಡಿಸಿ, ನೆಟ್ಟದೃಷ್ಟಿಯಿಂದ ನೋಡಬೇಕಾಗುತ್ತದೆ. ಇದು ಅತಿ
ಪ್ರಯಾಸಕರವಾದ 'ಸಾಧನೆ.
 
೧೩೮
 
ಇದಾದ ನಂತರ ಮುದ್ರೆಗಳ ಅಭ್ಯಾಸ. ಇದರಲ್ಲಿ ೨೪ ಹಸ್ತಮುದ್ರೆಗಳಿವೆ.
ಒಂದು ಮತ್ತು ಎರಡು ಹಸ್ತಗಳಿಂದ ಹಿಡಿಯುವ ಮುದ್ರೆಗಳಿವೆ. ಇವುಗಳಿಂದ ಒಂದು
ಸಾಹಿತ್ಯ ಭಂಡಾರವನ್ನೇ ಅಭಿನಯಿಸಬಲ್ಲರು. ಮುದ್ರಾಭಿನಯವು ಬಹುವಿಸ್ತಾರ
ಮತ್ತು ಸೂಕ್ಷ್ಮವಾಗಿರುತ್ತದೆ. ಸಾಹಿತ್ಯಕ್ಕೆ ವ್ಯಾಕರಣವಿದ್ದಂತೆ ಕಥಕಳಿಯ
ಅಭಿನಯದಲ್ಲಿ ವ್ಯಾಕರಣ ರೂಪದ ಮುದ್ರೆಗಳೂ ಇವೆ. ಮುದ್ರೆಗಳಲ್ಲಿ ಮೂರು ಬಗೆ
 
ಗಳಿವೆ.
 
೧. ಪ್ರಾಕೃತಿಕ ಅಧವಾ ಸಹಜ ಮುದ್ರೆಗಳನ್ನು ಕಲಾವಿದನು ಸನ್ನಿವೇಶ
ಮತ್ತು ಸ್ಫೂರ್ತಿಗೆ ತಕ್ಕಂತೆ ಮನೋಭಾವಕ್ಕೆ ಸರಿಯಾಗಿ ತೋರಿಸಬಹುದು.
ಪ್ರತಿರೂಪಿಯು ಒಂದು ವಸ್ತುವಿನ ರೂಪವು ಕಣ್ಣಿನ ಎದುರಿನಲ್ಲಿ ಬರು
ವಂತೆ ಮಾಡುವ ಮುದ್ರಾಭಿನಯ.
 
೩. ಆರಾಧನೆ, ಅರ್ಪಣೆ, ವರದಾಭಯ, ಪೂಜಾವಿಧಾನ ಮುಂತಾದುವನ್ನು
ತೋರಿಸಲು ಮಾಡುವ ಹಲವಾರು ಮುದ್ರೆಗಳನ್ನು ಪ್ರದರ್ಶಿಸುವುದು ಪ್ರಸಾರಿತ.
 
ಈ ಮುದ್ರೆಗಳನ್ನು ಅಭ್ಯಾಸ ಮಾಡಿದ ನಂತರ ನವರಸಗಳನ್ನು ಚೆನ್ನಾಗಿ
ಅಭ್ಯಾಸ ಮಾಡುತ್ತಾನೆ. ಇದಾದ ನಂತರ ಅವನು ಒಂದು ಯೋಗ್ಯ ಕಥಕಳಿ ನೃತ್ಯ
ಕಲಾವಿದನಾಗುತ್ತಾನೆ.
 
ಕಲಾವಿದರು ವಿಶೇಷವಾದ ವೇಷಭೂಷಣ ಮತ್ತು ಬಣ್ಣಗಳನ್ನು ಬಳಸುತ್ತಾರೆ.
ಇದರಿಂದ ಅವರ ವ್ಯಕ್ತಿತ್ವವು ಮಾಯವಾಗಿ ಕಥೆಯ ಪಾತ್ರವೇ ನಮ್ಮ ಮುಂದೆ
ನಿಂತಿರುವಂತೆ ಭಾಸವಾಗುತ್ತದೆ. ಕಥಕಳಿಯಲ್ಲಿ ಮೂರು ಬಗೆಯ ಪಾತ್ರಗಳಿರುತ್ತವೆ.
 
೨.
 
ಸಾತ್ವಿಕ-ದೇವಾಧಿದೇವತೆಗಳು, ಅಪ್ಸರೆಯರು ಇತ್ಯಾದಿ
ರಾಜಸಿಕ-ಭೂತಪ್ರೇತಗಳು, ದುಷ್ಟರು, ರಾಕ್ಷಸರು ಇತ್ಯಾದಿ.
೩. ತಾಮಸಿಕ-ರುದ್ರ ಇತ್ಯಾದಿ ಭೀಕರ, ಕ್ರೂರ, ಪ್ರಚಂಡಪಾತ್ರಗಳು.
ಈ ಮೂರು ಬಗೆಯ ಪಾತ್ರಗಳಿಗೆ ಬೇರೆ ಬೇರೆ ವಿವಿಧ ಬಣ್ಣ ಲೇಪನವಿರುತ್ತದೆ.
 
ರಂಗಸ್ಥಳದಲ್ಲಿ ಪಾತ್ರವನ್ನು ನೋಡಿದೊಡನೆ ಅದು ಸಾತ್ವಿಕವೋ, ರಾಜಸಿಕವೋ, ತಾಮ