This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಇದೊಂದು ಬಗೆಯ ಮೂಕ ನಾಟಕ, ಮುದ್ರೆಗಳ ಸಹಾಯವಿರುವುದ

ರಿಂದ ಭಾಷಾಲೋಪದ ಕೊರತೆಯು ಅಳಿದು ಹೋಗಿ, ಯಾವ ವಿಷಯವೇ ಆಗಲಿ,

ಸ್ಥಳವಾಗಲಿ, ವಸ್ತುವಾಗಲೀ ಅದನ್ನು ಕುರಿತು ಸೂಕ್ಷ್ಮವಾಗಿ ವರ್ಣಿಸಲು ಸಾಧ್ಯವಿದೆ.

ಈ ಕಲೆಯ ಮುದ್ರೆಗಳ ಶಬ್ದ ಕೋಶವು ಬೃಹತ್ತಾದುದು. ಆದ್ದರಿಂದ

ಒಂದು ಚಿಕ್ಕ ವಿಷಯವನ್ನೇ ಆದರೂ ಮುದ್ರೆಗಳ ಆಧಾರದಿಂದ ವಿಸ್ತರಿಸಿ ಒಂದು ಸಾಹಿತ್ಯ

ಒಂದು ಕವಿತೆಯನ್ನೂ ಹೆಣೆಯಬಹುದು.
 

 
ಖಂಡವನ್ನೂ
 

 
೭.
 
೧೩೭
 

ಈ ಕಲೆಯಲ್ಲಿ ಕಣ್ಣಿನ ಚಲನೆಯು ಅತಿಮುಖ್ಯವಾದುದು. ವಿಶೇಷವಾದ

ಅಭ್ಯಾಸದಿಂದ ಕಣ್ಣಿನ ವಿವಿಧ ಚಲನೆಗಳನ್ನು ಕಲಾವಿದನು ಅಭ್ಯಾಸ ಮಾಡಿರುತ್ತಾನೆ.

ಅವನ ಕಣ್ಣುಗಳಲ್ಲಿ ಒಂದು ವಿಶೇಷವಾದ ಗಾಂಭೀರ್ಯ, ಸೌಮ್ಯತೆ, ಲಾಲಿತ್ಯ ಮತ್ತು

ಶಕ್ತಿ ತುಂಬಿರುತ್ತದೆ. ಬರಿಯ ಕಣ್ಣುಗಳನ್ನು ನೋಡಿಯೇ ಕಥಕಳಿ ಕಲಾವಿದನನ್ನು

ಗುರುತಿಸಲು ಸಾಧ್ಯವಿದೆ.
 
೧೦.
 

ಕಥಕಳಿಯು ಸಾಮೂಹಿಕ ನೃತ್ಯ. ಹಲವರ ಸಹಾಯ, ಸಹಕಾರಗಳು

ಅಗತ್ಯ. ನೃತ್ಯ ನಾಟಕಗಳಿಗೆ ಕಧಕಳಿಯನ್ನು ಬಿಟ್ಟರೆ ಬೇರೊಂದಿಲ್ಲ.
 

ಕಥಕಳಿಯನ್ನು ಕಲಿಯುವುದು ಒಂದು ಬಗೆಯ ಯೋಗಸಾಧನ, ವಿದ್ಯಾರ್ಥಿ

ಯಾದವನು ತನ್ನ ೮ ಅಥವಾ ೧-೧೪ನೆ ವಯಸ್ಸಿನ ಒಳಗೆ ಕಥಕಳಿಯ

ಅಭ್ಯಾಸವನ್ನು ಆರಂಭಿಸುತ್ತಾನೆ. ಕಲರಿ ಎಂಬ ಗುರುಕುಲಕ್ಕೆ ಸೇರಿ ಗುರುವಿನ

ಅನುಗ್ರಹ ಪಡೆಯುತ್ತಾನೆ. ಗುರು ಶಿಷ್ಯ ಸಂಬಂಧವು ಪ್ರಾಚೀನಕಾಲದ ಗುರುಕುಲ

ವಾಸದ ಚಿತ್ರವನ್ನು ನಮ್ಮ ಮುಂದಿಡುತ್ತದೆ.
 

ಮೈಯನ್ನು ಮೆದುವಾಗಿಡುವುದಕ್ಕೋಸ್ಕರ ಅಂಗಸಾಧನೆ ಮತ್ತು ಮೊದಲಿನ

ಐದು ನಮಸ್ಕಾರಗಳನ್ನು ಹೇಳಿಕೊಡುತ್ತಾರೆ. ತರುವಾಯ ವಿಶೇಷವಾದ ಅಂಗ

ಮರ್ದನದಿಂದ ಅವನ ಸೊಂಟಕ್ಕೆ ಬಲವನ್ನು ತುಂಬುತ್ತಾರೆ. ಇದು ಬಹಳ

ನೋವನ್ನುಂಟು ಮಾಡುವುದಾದರೂ ಇದಿಲ್ಲದೆ ಕಧಕಳಿಗೆ ಬೇಕಾಗಿರುವ ಬಳುಕು

ಬಾಗುಗಳು ಬರುವುದು ಸಾಧ್ಯವಿಲ್ಲ. ಇದಾದ ಮೇಲೆ ಹಲವು ವಿಧವಾದ ಪಾದ

ಚಲನೆಗಳನ್ನು ಕಲಿಸುತ್ತಾರೆ. ತರುವಾಯ ಕಲಾಶಂ ಎಂಬ ಕಷ್ಟಕರವಾದ

ಪಾದಚಲನೆಗಳನ್ನು ಕಲಿಯಬೇಕು. ಇವು ಭರತನಾಟ್ಯದ ಜತಿಗಳನ್ನು

ಹೋಲುತ್ತವೆ. ತರುವಾಯ ಭರತನಾಟ್ಯದ ಅಲರಿಪುವಿನಂತೆ ರಂಗಪೂಜೆಗೆ

ಸಮಾನವಾದ ತೋದಯಂ, ಪುರುಪ್ಪಾದ್ ಎಂಬ ನೃತ್ಯಗಳನ್ನು ಕಲಿಯುತ್ತಾನೆ.

ಈ ಮಟ್ಟಕ್ಕೆ ಬರಲು ೩ ವರ್ಷಗಳ ಕಾಲ ಹಗಲು ರಾತ್ರಿ ದುಡಿಯಬೇಕು.

ಕಣ್ಣು, ಕೆನ್ನೆ, ತುಟಿ, ಕಣ್ಣುರೆಪ್ಪೆ ಮುಂತಾದುವುಗಳ ಚಲನೆಗಳನ್ನು ಅಭ್ಯಾಸ ಮಾಡು

ತ್ತಾನೆ. ಇವು ನಾಟ್ಯಶಾಸ್ತ್ರದಂತಿವೆ. ಈ ಸಾಧನೆಗಳಿಂದ ಕಥಕಳಿ ಕಲಾವಿದನ

ಮುಖವು ಭರತನಾಟ್ಯ ಕಲಾವಿದನ ಮುಖಕ್ಕಿಂತ ಚಂಚಲವಾಗಿಯೂ, ಭಾವ

ಪ್ರದರ್ಶಕವಾಗಿಯೂ ಇರುತ್ತದೆ.
 
ಆಮೇಲೆ