This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ತಿರುನಾಳ್ (೧೭೫೬-೧೭೮೮) ಮತ್ತು ಇಯಮ್ಮನ್‌ತಂಪಿ (೧೭೮೩-೧೮೫೮) ರಚಿ
ಸಿದ್ದಾರೆ. ಈ ನೃತ್ಯವು ಮೊದಲು ಭರತನಾಟ್ಯ ಶಾಸ್ತ್ರಕ್ಕೆ ಹೊಂದಿಕೊಂಡಿದ್ದು ಕ್ರಮೇಣ
ಜಯದೇವನ ಗೀತಗೋವಿಂದ ಮುಂತಾದುವನ್ನು ಪ್ರದರ್ಶಿಸಲು ಅನುಕೂಲವಾಯಿತು.
ಇದರ ಮುದ್ರೆಗಳು ಅಸಂಖ್ಯಾತವಾಗಿದ್ದು ಅದರ ಶಬ್ದಕೋಶವು ವಿಶಾಲವಾಗಿದೆ. ಒಬ್ಬ
ಪಾತ್ರಧಾರಿಯು ಒಂದು ವಿಷಯವನ್ನು ಅನೇಕ ವಿಧಗಳಲ್ಲಿ ಈ ಮುದ್ರೆಗಳ ಸಹಾಯ
ದಿಂದ ತೋರಿಸಬಲ್ಲನು. ಈ ಕಲೆಯು ತಿರುವಾಂಕೂರು ಅರಸರ ಮತ್ತು ಇತರ
ಜಮಾನ್ದಾರರ ಪ್ರೋತ್ಸಾಹವನ್ನು ಪಡೆದು ಇಂದು ಜಗತ್ತಿನಲ್ಲಿ ಪ್ರಖ್ಯಾತವಾಗಿದೆ. ಈ
ಖ್ಯಾತಿಗೆ ಕವಿ ವಲತೋಳ್ ನಾರಾಯಣ ಮೆನನ್, ಗುರು ಕುಂಜು ಕುರುಪ್ ಮತ್ತು
ಇತರರು ಬಹುಮಟ್ಟಿಗೆ ಕಾರಣರು. ಈ ಕಲೆಯ ಮುಖ್ಯ ಶಾಸ್ತ್ರೀಯ ಗ್ರಂಧವು
ಹಸ್ತ ಲಕ್ಷಣ ದೀಪಿಕಾ, ಈ ಶಾಸ್ತ್ರದಲ್ಲಿ ನೃತ್ಯ, ನೃತ್ಯ ಮತ್ತು ನಾಟ್ಯವನ್ನು ಸೇರಿಸಲು
ಅಭಿನಯದ ವೈಖರಿಗಳಾದ ಆಂಗಿಕ, ವಾಚಿಕ ಮತ್ತು
ಆಹಾರಾಭಿನಯಗಳು ಕಥಕಳಿಯಲ್ಲಿ ರೂಢಿಯಲ್ಲಿವೆ. ಇದರ ವೇಷಭೂಷಣಗಳೇ
ಪಾತ್ರಗಳ ಪರಿಚಯವನ್ನು ಮಾಡಿಕೊಡುತ್ತವೆ. ಶ್ರೀಲಂಕೆಯ ಕಾಂಡ್ಯದ ನೃತ್ಯಗಳು
ಮತ್ತು ಇಂಡೋನೇಷ್ಯಾದ ನೃತ್ಯಗಳು ಕಥಕಳಿ ನೃತ್ಯವನ್ನು ಹೋಲುತ್ತವೆ.
 
ಅನುಕೂಲವಿದೆ.
 
ಕಧಕಳಿಯನ್ನು ಕಲಿಯುವ ವಿದ್ಯಾರ್ಥಿಗಳು ವ್ಯವಸ್ಥಿತವಾದ ಕಟ್ಟುನಿಟ್ಟಾದ
ಶಿಕ್ಷಣವನ್ನು ೧೨ ವರ್ಷಗಳ ಪರ್ಯಂತ ಪಡೆಯುತ್ತಾರೆ. ಶಿಕ್ಷಣವು ೧೧-೧೪ ವರ್ಷ
ವಯಸ್ಸಿನಿಂದಲೇ ಪ್ರಾರಂಭವಾಗುತ್ತದೆ. ಶರೀರ, ಪಾದ, ಅಭಿನಯ ಮತ್ತು
ಮುಖಾಭಿನಯ ಎಂಬ ನಾಲ್ಕು ಬಗೆಯ ಶಿಕ್ಷಣ ನೀಡುತ್ತಾರೆ. ಇದರಲ್ಲಿ ೨೪ ಮುದ್ರೆ
ಗಳಿವೆ ಮತ್ತು ನವರಸಗಳಿಗೆ ಬಹು ಪ್ರಾಶಸ್ಯವುಂಟು. ಕಥಕಳಿಯ ಮುಖ್ಯ ಲಕ್ಷಣ
ಗಳಾವುವೆಂದರೆ :-
೧. ಇದು ಸಂಪ್ರದಾಯಬದ್ಧವಾಗಿದ್ದು ಎಲ್ಲ ವಿಶಿಷ್ಟ ವಿಷಯಗಳನ್ನು ಹಲವು
ಮುದ್ರೆಗಳಿಂದ ತಿಳಿಸಲು ಸಾಧ್ಯವಿದೆ.
 
೨. ನೃತ್ಯಕಲಾವಿದರಿಗೆ ಮುದ್ರೆಗಳ ಜ್ಞಾನವು ಅಪಾರವಾಗಿರುತ್ತದೆ. ಅವರು
ಯಾವ ಕಥಾವಸ್ತುವನ್ನಾದರೂ ಚೆನ್ನಾಗಿ ತಿಳಿಸಬಲ್ಲರು
 
೧೩೬
 
೩. ಕಲಾವಿದನು ಬಳುಕುವ ಮೈಯುಳ್ಳವನಾಗಿದ್ದು ಲಲಿತವಾದ ಚಲನೆ
ಗಳನ್ನು ಮಾಡುವುದರಲ್ಲಿ ಪರಿಣತನಾಗಿರುತ್ತಾನೆ. ಹಸ್ತ ಮುದ್ರೆಗಳನ್ನು ಸುಲಭರೀತಿ
ಯಿಂದ ಮಾಡುತ್ತಿರುವಾಗ ಮುಖಭಾವವು ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತದೆ.
ಸೊಂಟದ ಶಕ್ತಿ ಮತ್ತು ಬಳುಕುವಿಕೆಗೆ ಹೆಚ್ಚಾದ ಪ್ರಾಶಸ್ತ್ರವಿದೆ.
 
೫. ಈ ಕಲೆಯು ರಸವತ್ತಾದ ಕವಿತೆಗಳಿಂದ ಕೂಡಿ, ಯೋಗ್ಯವಾದ
ಸಂಗೀತದ ಹಿನ್ನೆಲೆ, ವೈವಿಧ್ಯಮಯವಾದ ವೇಷಭೂಷಣಗಳಿಂದ ಕೂಡಿದ್ದು ಮನಸ್ಸನ್ನು
ಸೂರೆಗೊಳ್ಳುತ್ತದೆ.
 
ಪಾದ ಮತ್ತು ಅಂಗಚಲನೆಗಳು ತಾಳಕ್ಕೆ ಸರಿಯಾಗಿ ಜೋಡಿಸಲ್ಪಟ್ಟಿವೆ.