This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಥಕ-ಹರಿಕಥಾ ಕಾಲಕ್ಷೇಪ ಮಾಡುವ ಭಾಗವತರು ಅಥವಾ ಕೀರ್ತನ
 
ಕಥಕಳಿ-ಕಥಕಳಿ ನೃತ್ಯ ಪದ್ಧತಿಯ ತೌರೂರು ಕೇರಳ. ಇದು ಭಾರತದಲ್ಲಿ
ಬಹಳ ಹಿಂದಿನಿಂದಲೂ ಪ್ರಚಲಿತವಿರುವ ೪ ವಿವಿಧ ನಾಟ್ಯ ಪದ್ಧತಿಗಳಲ್ಲಿ ಒಂದಾಗಿದೆ
ಮತ್ತು ಕೇರಳಕ್ಕೆ ಭೂಷಣಪ್ರಾಯವಾದ ಕಲೆಯಾಗಿದೆ. ಇದನ್ನು ನೈಸರ್ಗಿಕ
ವಾತಾವರಣದಲ್ಲಿ ನೋಡಬೇಕು. ಕಂಬದ ದೀಪಗಳ ಮಸುಕಾದ ಬೆಳಕಿನಲ್ಲಿ
ನರ್ತಿಸುವವರು ಅಮಾನುಷ ವೇಷಭೂಷಣಗಳಿಂದ ಮತ್ತು ಬಣ್ಣಗಳ ವೈವಿಧ್ಯದಿಂದ
ತಮ್ಮ ವ್ಯಕ್ತಿತ್ವವನ್ನು ಅಡಗಿಸಿಕೊಂಡು ಕುಣಿಯುವ ವೈಚಿತ್ರ್ಯ, ಭಾಗವತರು
ಹಾಡುಗಳ ಮೂಲಕ ಪುರಾಣಕಥೆಗಳನ್ನು ತಿಳಿಸುವ ವಿಧಾನ, ಚಂಡೆಮದ್ದಲೆಗಳ
ಕರ್ಣಕಠೋರ ಮತ್ತು ಮೃದುಮಧುರವಾದ ಧ್ವನಿಗಳು-ಇವೆಲ್ಲವೂ ಕಥಕಳಿಯ
ಪ್ರೇಕ್ಷಕನು ಎಂದೂ ಮರೆಯಲಾಗದ ಅಮೂಲ್ಯವಾದ ರಸಾನುಭವ
ಅನುಭವಗಳು ನಗರದ ಕೃತಕ ರಂಗಮಂಟಪಗಳಲ್ಲಾಗುವ ಕಥಕಳಿ ಪ್ರದರ್ಶನಗಳಿಂದ
ದೊರಕುವುದಿಲ್ಲ.
 
ಇಂತಹ
 
ಕಾರರು.
 
೧೩೫
 
ಕಥಕಳಿಯು ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆದಿದೆ. ಭರತ
ನಾಟ್ಯವು ಲಾಸ್ಯಕ್ಕೆ ಹೆಚ್ಚು ಗಮನವಿತ್ತರೆ ಕಥಕಳಿಯು ತಾಂಡವಕ್ಕೆ ಪ್ರಾಶಸ್ಯ
ನೀಡುತ್ತದೆ. ಇದರ ಮೂಲವನ್ನು ಕುರಿತು ಎರಡು ಕಥೆಗಳಿವೆ. ೧೭ನೆ. ಶ ದಲ್ಲಿ
ಕಲ್ಲಿಕೋಟೆಯ ರುಾಮೊರಿನ್ನನು ಕೃಷ್ಣಾಟ್ಟ ಆಡುವವರ ಸಂಘವನ್ನು ಏರ್ವಡಿಸಿದನು.
ಈ ಆಟವನ್ನು ಆಡಿಸಬೇಕೆಂದು ನೆರೆರಾಜ್ಯದ ದೊರೆಯೊಬ್ಬನು ಆಸೆಪಟ್ಟನು
ರಾಮೊರಿನ್ನನು ಈ ಆಹ್ವಾನವನ್ನು ನಿರಾಕರಿಸಿದನು. ಇದರಿಂದ ಕೋಪಗೊಂಡ
ಆ ದೊರೆಯು ಸೇಡಿನ ದೃಷ್ಟಿಯಿಂದ ರಾಮನಾಟ್ಟಂ ಎಂಬ ಪ್ರದರ್ಶನವನ್ನು ನೀಡಬಲ್ಲ
ಆಟಗಾರರನ್ನೆಲ್ಲಾ ಸೇರಿಸಿ ನೃತ್ಯನಾಟಕವನ್ನು ಏರ್ಪಡಿಸಿದನು ಇದು ಕ್ರಮೇಣ
ಆಟ್ಟ ಕಥಾ ಎಂದು ಕರೆಯಲ್ಪಟ್ಟು ಈಗಿನ ಕಥಕಳಿಯಾಗಿದೆ.
 
ಆದರೆ
 
ಮತ್ತೊಂದು ಕಥೆ ಹೀಗಿದೆ. ಕಕೋಟೆಯ ಝಾಮೋರಿನ್ ಮತ್ತು
ಕೊಟ್ಟರಕ್ಕರದ ರಾಜನೂ ಸ್ನೇಹಿತರಾಗಿದ್ದರು. ಕೊಟ್ಟ ರಕ್ಕರದ ರಾಜನು ನಾಟಕ
ಕಾರನೂ, ಕಲಾವಿದನೂ ಆಗಿದ್ದನು. ಒಂದು ಸಲ ಇವನು ರುಾಮೊರಿನ್ನನ್ನು
ಭೇಟಿ ಮಾಡಲು ಹೋಗಿದ್ದ ಸಮಯದಲ್ಲಿ ಕಥಕಳಿ ನೃತ್ಯನಾಟಕ ಒಂದರಲ್ಲಿ
ಪಾತ್ರ ವಹಿಸಿ ಸಭಿಕರನ್ನು ಮುಗ್ಧಗೊಳಿಸಿದನು. ಈ ಚತುರ ಕಲಾವಿದನಾರೆಂಬುದು
ತಿಳಿಯದೆ ಅವನಿಗೆ ಮುತ್ತಿನ ಹಾರಗಳನ್ನು ನೀಡಲು ರುರಾಮೊರಿನ್ನನು ಇಚ್ಛಿಸಿದನು.
ಕೊನೆಗೆ ಆತನು ತನ್ನ ಮಿತ್ರನಾದ ದೊರೆಯೆಂದು ಪರಮ ಸಂತೋಷಪಟ್ಟನು.
ಕಥಕಳಿಯನ್ನು ಕೇರಳದ ಅತ್ಯುತ್ತಮ ನೃತ್ಯ ಮತ್ತು ನಾಟಕಗಳ ಆಧಾರದ
ಮೇಲೆ ಬೆಳೆಸಿದಾರೆ. ಉತ್ತಮ ಕಧಕಳಿ ನೃತ್ಯನಾಟಕಗಳನ್ನು ಕೊಟ್ಟ ರಕ್ಕರದ
ದೊರೆ, ಕೊಟ್ಟಾಯಂನದೊರೆ, ಉನ್ನಾಯಿವಾರಿಯರ್ (೧೭೩೫-೧೭೮೫) ಅಶ್ವತಿ