This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪಾದವಿನ್ಯಾಸ, ಇದರಲ್ಲಿ ಹೆಚ್ಚಾಗಿ ರಾಧಾಕೃಷ್ಣರ ವರ್ಣನೆಗಳಿವೆ. ತಾಂಡವತೋಡ
ಎಂಬುದು ತಾಳಲಯಬದ್ಧವಾದ ಪಾದವಿನ್ಯಾಸಗಳ ವಿವಿಧ ಗುಚ್ಛಗಳು. ಇವು
ತುಕ್ರಾಜಾತಿಗೆ ಸೇರಿವೆ.
ಇವು ಶಿವನ ಲೀಲೆಗಳನ್ನು ವರ್ಣಿಸುತ್ತವೆ.
 
ಬೋಲ್‌ಗಳಾದ ಮೇಲೆ ಭರತನಾಟ್ಯವನ್ನು ಹೋಲುವಂತಹ ಪಾದವಿನ್ಯಾಸ
ಮತ್ತು ಅಭಿನಯಮಿಶ್ರಿತವಾದ ಗತ್‌ಗಳು ಬರುತ್ತವೆ. ಕಥೆಯ ಮೂಲವಸ್ತು ರಾಧಾ
ಕೃಷ್ಣರು. ಒಬ್ಬನೇ ಎಲ್ಲರ ಪಾತ್ರಗಳನ್ನು ಅಭಿನಯಿಸುತ್ತಾನೆ. ಗಂಡು ಮತ್ತು
ಹೆಣ್ಣು ನಮ್ಮ ಕಣ್ಣೆದುರಿಗೆ ಬೇರೆಯಾಗಿದ್ದಂತೆ ಪ್ರದರ್ಶಿಸುವ ನಾಟ್ಯ ಕಲಾವಿದನ
ಅಭಿನಯವು ಅಸಮಾನವಾದುದು.
ಈ ನೃತ್ಯ ಪದ್ಧತಿಯಲ್ಲಿ ಹೆಣ್ಣು ಮತ್ತು ಗಂಡು
ಒಂದೇ ತರಹದ ಉಡಿಗೆ ತೊಡಿಗೆಗಳನ್ನು ಹಾಕಿಕೊಳ್ಳುವುದು ಒಂದು ವೈಶಿಷ್ಟ್ಯ
 
ಇವು
 
ಕೊನೆಯಲ್ಲಿ ನಾಟ್ಯ ಕಲಾವಿದನು ಕುಳಿತುಕೊಂಡು ಪಕ್ಕವಾದ್ಯಗಳ ಸಹಿತ
ಠುಮ್ರ, ಥಪ್ಪ, ದಾದ್ರ, ಗಜಲ್ ಮುಂತಾದ ಪ್ರೇಮಗೀತೆಗಳನ್ನು ಹಾಡಿ, ಅವಕ್ಕೆ
ಅನುಗುಣವಾಗಿ ಪ್ರದರ್ಶನ ನೀಡುತ್ತಾನೆ. ಇದಕ್ಕೆ ಅದಾ ಎಂದು ಹೆಸರು.
ಭರತನಾಟ್ಯದ ಜಾವಳಿಗಳನ್ನೂ, ಪದಗಳನ್ನೂ ಹೋಲುತ್ತವೆ. ಕೆಲವು ಸಲ
ರಾಮಾಯಣ ಮತ್ತು ಮಹಾಭಾರತಗಳ ಕಥೆಗಳನ್ನು ನಿರೂಪಿಸುವುದುಂಟು. ಆದರೆ
ಸಾಮಾನ್ಯವಾಗಿ ಶೃಂಗಾರರಸವೇ ಕಥಕ್ ನೃತ್ಯದಲ್ಲಿ ಪ್ರಧಾನವಾದುದು. ಇದರ
ಅಭಿನಯವು ಕಲ್ಪನಾಭಿನಯಕ್ಕೆ ಬೇಕಾದಷ್ಟು ಅವಕಾಶವೀಯುತ್ತದೆ.
 
ಕಥಕ್ ನೃತ್ಯದಲ್ಲಿ ಎಲ್ಲ ವಿಷಯಗಳನ್ನೂ ಪಾದ ಮತ್ತು ಹಸ್ತಚಲನೆಗಳಿಂದ
ಪ್ರದರ್ಶಿಸುವುದರಿಂದ ಇವು ಸೂಚನಾತ್ಮಕವಾಗಿವೆ. ತಾಲ ಎಂಬ ಪದದಲ್ಲಿ ತಾ ಎಂದರೆ
ತಾಂಡವಕ್ಕೂ ಲ ಎಂದರೆ ಲಾಸ್ಯಕ್ಕೂ ಸಂಬಂಧಿಸಿದೆ. ತಬಲದಲ್ಲಿ ಹೊರಪಡಿಸುವ
ತಾಳದ ಉಚ್ಚಾರಗಳಿಗೂ ಸಂಕೇತಾರ್ಥಗಳಿವೆ. ಧ ಎಂದರೆ ಹಿಡಿತ ಅಥವಾ
ಆತ್ಮಶಕ್ತಿಯನ್ನು ಹಿಡಿತದಲ್ಲಿಡುವುದು, ಧಾಧಿನ್, ಧನ್ ಧಾ ಎಂದರೆ ನಾಡಿಯ
ಚಲನೆಗೂ, ಸಂಯೋಗಕ್ಕೂ ಅನುಸಾರವಾಗಿದೆ.
 
ಕಥಕ್ ನೃತ್ಯದಲ್ಲಿ ಕಣ್ಣಿನ ಅಭಿನಯವು ಮೂರುಬಗೆಯಲ್ಲಿದೆ.
 
(೧) ಉಲಿತ-ಪೂರ್ತಿ ತೆರೆದಿರುವ ಕಣ್ಣು, ನೇರವಾಗಿ ನೋಡುವ ದೃಷ್ಟಿ,
ಇದನ್ನು ರಾಜಸಿಕವನ್ನು ಸೂಚಿಸಲು ಉಪಯೋಗಿಸುತ್ತಾರೆ.
 
(೨) ನಿಮಿಲಿತ ಅರ್ಧ ತೆರೆದಿರುವ ಕಣ್ಣು, ತಾಮಸಿಕವನ್ನು ಸೂಚಿಸಲು,
ಶಿವನು ನಿಗ್ರಹಿಸುವ ಕಾರ್ಯವನ್ನು ಸೂಚಿಸಲು ಇದನ್ನು ವಿನಿಯೋಗಿಸುತ್ತಾರೆ.
 
(೩) ಮುದ್ರಿತ ಪೂರ್ಣ ಮುಚ್ಚಿರುವ ಕಣ್ಣನ್ನು ಸಾತ್ವಿಕ ಭಾವ ಮತ್ತು
ಧ್ಯಾನವನ್ನು ಸೂಚಿಸಲು ವಿನಿಯೋಗಿಸುತ್ತಾರೆ.
 
೧೩೪
 
ಭರತನಾಟ್ಯದಲ್ಲಿರುವಂತೆ ಈ ಪದ್ಧತಿಯಲ್ಲಿ ಸಮಭಂಗ, ಅಭಂಗ, ತ್ರಿಭಂಗ
ಮತ್ತು ಅತಿಭಂಗ ಎಂಬ ನಾಲ್ಕು ಬಗೆಯ ಭಂಗಿಗಳಿವೆ. ಈ ನೃತ್ಯ ಪದ್ಧತಿಯಲ್ಲಿ
ವೈಷ್ಣವೀಯವಾದ ರಾಧಾ-ಕೃಷ್ಣ ಲೀಲೆಗಳು ಹೆಚ್ಚಾಗಿವೆ.