2023-06-25 23:29:27 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ರೂಢಿ
ಇದಕ್ಕೆ ಗಂಭೀರವಾದ, ಮನಮೋಹಕವಾದ, ಲಾಲಿತ್ಯಮಯವಾದ ರೂಪನ್ನು ಕೊಟ್ಟ
ದ್ದಾರೆ. ಭರತನಾಟ್ಯವು ಶಿಲ್ಪಶಾಸ್ತ್ರದಿಂದ ಹೇಗೆ ಭಂಗಿಗಳನ್ನು ಅನುಸರಿಸಿದೆಯೋ
ಹಾಗೆಯೇ ಕಧಕ್ ಪದ್ಧತಿಯು ರಾಜಪುತ್ರರ ಚಿತ್ರಕಲೆಯಿಂದ ಮತ್ತು ಮೊಗಲರ
ಕಲಾ ಸಂಪತ್ತಿನಿಂದ ಸ್ಫೂರ್ತಿ ಪಡೆದಿದೆ. ಇದರಲ್ಲಿ ಅನೇಕ ಮುದ್ರೆಗಳು
ಯಲ್ಲಿವೆ. ನೃತ್ಯಗಾರನು ತನ್ನ ಮನೋಭಾವಕ್ಕೆ ಸರಿಯಾಗಿ ವಿಷಯವನ್ನು ವ್ಯಕ್ತ
ಗೊಳಿಸಲು ಮನಬಂದಂತೆ ಮುದ್ರೆಗಳನ್ನು ಉಪಯೋಗಿಸುವ ಸ್ವಾತಂತ್ರ್ಯವುಳ್ಳವ
ನಾಗಿದ್ದಾನೆ. ಇದು ಕಲಾವಿದನ ನಿಜವಾದ ಕೌಶಲ್ಯವನ್ನು ತಿಳಿಯಲು ಸಹಾಯಕ
ವಾಗಿದೆ. ಸಂಪ್ರದಾಯಬದ್ಧವಾದ ಕಥಕ್ ಪ್ರದರ್ಶನವು ಈ ರೀತಿ ಇರುತ್ತದೆ.
ಉದ್ದಕ್ಕೆ ನೆರಿಗೆಗಳಿರುವ ಒಂದು ಕುರ್ತಾ, ಸುರವಾಲ್, ಜರಿಯಟೋಪಿ
ಮುಂತಾದ ವೇಷಭೂಷಣಗಳಿಂದ ಅಲಂಕೃತನಾದ ಕಲಾವಿದನು ರಂಗಸ್ಥಳದಲ್ಲಿ ನಿಲ್ಲು
ತಾನೆ. ಸಾರಂಗಿ, ತಬಲ ಅಥವಾ ಪಕ್ವವಾಜ್‌ವಾದಕರು ಪಕ್ಕವಾದ್ಯ ನುಡಿಸಲು ಕುಳಿ
ತಿರುತ್ತಾರೆ. ತಬಲವಾದಕನು ಒಂದು ತಾಳವನ್ನು ಪ್ರಧಾನವಾಗಿಟ್ಟುಕೊಂಡು ಅದರ
ವೈವಿಧ್ಯತೆಯನ್ನು ತೋರಿಸುತ್ತಾನೆ. ಆ ಪ್ರತಿಯೊಂದು ವಿಧಾನವನ್ನೂ ಕಲಾವಿದನು
ಬಾಯಿಂದ ಉಚ್ಚರಿಸಿ ಅನಂತರ ಕೈಚಲನ ಮತ್ತು ಪಾದಚಲನೆಗಳಿಂದ ಆ ತಾಳವನ್ನು
ಪ್ರದರ್ಶಿಸುತ್ತಾನೆ. ಕಾಲುಗಳಿಗೆ ಗೆಜ್ಜೆ ಕಟ್ಟಿ ಕೊಂಡು ನಾಟ್ಯವಾಡುವುದು ಭರತ
ನಾಟ್ಯದ ನೃತ್ಯಕ್ಕೆ ಸಮಾನವಾದುದು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು
ಪ್ರದರ್ಶಿಸುವ ಈ ನೃತ್ಯವನ್ನು ಇಂದು ವೃಂದಗಳು ಮಾಡುತ್ತವೆ. ಮೊದಲು
ವಂದನದಂತಿರುವ ಸಲಾಮಿ ಅಥವಾ ಶುರುಕ ಅಹಮದ್
ಎಂಬುದನ್ನು ಮಾಡಿ
ಕೈಗಳನ್ನು ಎದೆಯ ಹತ್ತಿರ ಅಚಲವಾಗಿ ಹಿಡಿದಿರುತ್ತಾನೆ. ಸಾರಂಗಿವಾದಕನು
ಒಂದು ಲೆಹರಾ ಅಥವಾ ಧೂನ್ (ಭರತನಾಟ್ಯದ ಜತಿಸ್ವರದಂತೆ) ನುಡಿಸುವ ವೇಳೆಗೆ
ನಾಟ್ಯಕಲಾವಿದನು ಚಲಿಸಲು ತೊಡಗುತ್ತಾನೆ. ಅಲ್ಲಿಯವರೆಗೆ ಇವನು ಪ್ರೇಕ್ಷಕ
ವೃಂದವನ್ನು ಆಕರ್ಷಿಸುವಂತೆ ದಿಟ್ಟಿಸಿ ನೋಡಿ ನೃತ್ಯಕ್ಕೆ ತಕ್ಕ ವಾತಾವರಣವನ್ನು
ಕಲ್ಪಿಸಿಕೊಳ್ಳುತ್ತಾನೆ. ಇದಕ್ಕೆ ಥಾಟ್ ಎಂದು ಹೆಸರು. ಇದು ಭರತನಾಟ್ಯದ
ಸಭಾವಂದನಕ್ಕೆ ಸಮಾನವಾದುದು. ನಂತರ ತತ್ಕಾರ್ ಎಂಬ ತಾಳ. ಹೆಜ್ಜೆಗಳನ್ನು
ಹಾಕುತ್ತಾನೆ. ಇದಾದ ನಂತರ ಒಂದರ ಹಿಂದೊಂದು ತಿರುಗುವಿಕೆಗಳನ್ನು ಪ್ರದರ್ಶಿ
ಸುತ್ತಾನೆ. ಇದಕ್ಕೆ ಚಕ್ಕರ್ ಎಂದು ಹೆಸರು. ತಾಳವೈವಿಧ್ಯದಿಂದ ಕೂಡಿದ ಬೋಲ್
ಗಳನ್ನು ಮಾಡಿ ತೊಡಕಾಗಿರುವ ಪಾದವಿನ್ಯಾಸಗಳನ್ನು ಮಾಡಿ ಸಭಿಕರನ್ನು ಬೆರಗು
ಗೊಳಿಸುತ್ತಾನೆ ಬೋಲ್‌ಗಳಲ್ಲಿ ಮೂರು ವಿಧಗಳಿವೆ.
(೧) ತುಕ್ರಾ-ಇದು ಚಿಕ್ಕ ತಾಳ ವೈಚಿತ್ರ ಪ್ರದರ್ಶನ
ಶಿ
(೨) ಪರನ್-ಒಂದು ದೊಡ್ಡ ತುಕ್ರಾವನ್ನು ಪೂರ್ಣವಾಗಿ ಪ್ರದರ್ಶಿಸುವ
ಒಂದು ಜಟಿಲವಾದ ವಿಧಾನ.
(೩) ನಟವರಿ-ಸ್ತೋತ್ರ, ಗೀತ, ಪದ್ಯಗಳಿಗೆ ಮಾಡುವ ತಾಳಲಯಬದ್ಧವಾದ
೧೩