This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕರ್ತರೀಸ್ಟಸ್ತಿಕ-
ಭರತನಾಟ್ಯದ ಸಂಯುತ ಹಸ್ತಗಳಲ್ಲಿ ಇದೊಂದು ಭೇದ,

ಕರ್ತರೀಮುಖ ಹಸ್ತಗಳನ್ನು ಸ್ವಸ್ತಿಕಾಕಾರವಾಗಿ ಹಿಡಿಯುವುದೇ ಕರ್ತರೀ ಸ್ವಸ್ತಿಕ

ಹಸ್ತ. ಮರದ ಕೊಂಬೆಗಳು, ಬೆಟ್ಟದ ಶಿಖರಗಳು, ವೃಕ್ಷಗಳು ಇವುಗಳನ್ನು

ಪ್ರದರ್ಶಿಸಲು ಈ ಹಸ್ತ ವಿನಿಯೋಗವಾಗುವುದು.
 
ಕತ್ತಳ-

 
ಕತ್ತಳ
ಈ ರಾಗವು ೬೩ನೆಯ ಮೇಳಕರ್ತ ಲತಾಂಗಿಯ ಒಂದು ಜನ್ಯರಾಗ

ಸ ಮ ಪ ದ ನಿ ಸ
 

ಸ ನಿ ದ ಪ ಮ ಸ
 
ಇದರಲ್ಲಿ ಹಿಂದೂ
ಶ್ರೀಮಂತರನ್ನೂ

 
 
ಆದರೂ ಈ ಪದ್ಧತಿ
 

 
ಕಥಕ್-ಭಾರತದಲ್ಲಿ ನಾಲ್ಕು ಬಗೆಯ ನಾಟ್ಯ ಸಂಪ್ರದಾಯಗಳಿವೆ ಇವು
ಗಳಲ್ಲಿ ಕಥಕ್ ಎಂಬುದು ಉತ್ತರಭಾರತದಲ್ಲಿರುವ ಸಂಪ್ರದಾಯ
ಇದರಲ್ಲಿ ಹಿಂದೂ
ಮತ್ತು ಮುಸ್ಲಿಂ ಸಂಸ್ಕೃತಿಗಳ ಮಿಶ್ರಣವನ್ನು ಕಾಣಬಹುದು.
ಶ್ರೀಮಂತರನ್ನೂ
ಅರಸರನ್ನೂ ಆನಂದಪಡಿಸಲು ಈ ನೃತ್ಯವನ್ನು ಅಳವಡಿಸಿದರು.

ಯಲ್ಲಿ ಲಾಲಿತ್ಯ ಮತ್ತು ತಾಳ ವೈಚಿತ್ರವು ಬೆಳೆದುಬಂದಿವೆ. ಈ ನೃತ್ಯದಲ್ಲಿ ಭರತ

ನಾಟ್ಯ ಮತ್ತು ಕಥಕಳಿ ಪದ್ಧತಿಗಳಿಗಿರುವಂತೆ ಅಧ್ಯಾತ್ಮಿಕ ಹಿನ್ನೆಲೆ ಇಲ್ಲ. ಹೀಗಿದ್ದರೂ

ಕಥಕ್ ಒಂದು ಶಾಸ್ತ್ರೀಯ ಪದ್ಧತಿಯಾಗಿತ್ತು. ಕಾಲಕ್ರಮೇಣ ಸಂಪ್ರದಾಯವು

ತಪ್ಪಿ ಈಗಿನ ರೂಪನ್ನು ಹೊಂದಿದೆ.
 

ಲಕ್ಕೂ ಮತ್ತು ಜಯಪುರವು ಈ ಸಂಪ್ರದಾಯದ ಕೇಂದ್ರಗಳಾಗಿವೆ.

ಲಕೋವಿನಲ್ಲಿದ್ದ ಕಲ್ಯಾ ಮತ್ತು ಬಿಂದಾ ಎಂಬುವರು, ಅವರ ವಂಶಜರಾದ ಅಚ್ಚನ್,

ಲಚ್ಚನ್ ಮತ್ತು ಶಂಭು ಮಹಾರಾಜ್, ಕಲ್ಕತ್ತದ ಸುಖದೇವ್ ಮಹಾರಾಜ್,

ಜಯಪುರದ ಜಯಲಾಲ್ ಮತ್ತು ರತಿಲಾಲ್ ಎಂಬುವರು ಕಥಕ್ ನೃತ್ಯದ ಪ್ರತಿಭಾ

ವಂತ ಆಚಾರ್ಯರು. ಈ ನೃತ್ಯಕಲೆಯು ಉತ್ತರಭಾರತದ ದೇವಾಲಯಗಳಲ್ಲಿ ಮೊದ

ಇದು ನೃತ್ತ, ನೃತ್ಯ ಮತ್ತು ಅಭಿನಯಗಳೆಂಬ ಮೂರು ಭಾಗಗಳನ್ನು

ಒಳಗೊಂಡಿದೆ. ಅತ್ಯಂತ ಪುರಾತನ ಕಾಲದಿಂದ ಸಂಗೀತ, ನೃತ್ಯ ಮತ್ತು ಕಥೆ

ಹೇಳುವ ಕಲೆಯಲ್ಲಿ ಪ್ರವೀಣರಾಗಿದ್ದ ಕಥಕರೆಂಬ ಕಲಾವಿದರಿದ್ದರು. ಕಧನಕಲೆಯು

ಕಾಲಾನುಕ್ರಮದಲ್ಲಿ ವಂಶಪಾರಂಪರ್ಯವಾಗಿ ಬಂದ ಕಲೆಯಾಯಿತು. ಈ
 
ಲಾಯಿತು.
 

ಕಲಾವಿದರ ಸಂಪರ್ಕದಿಂದ ಇದಕ್ಕೆ ಕಥಕ್ ಎಂಬ ಹೆಸರು ಬಂದಿತು. ರಾಸ

ಮಂಡಲಿಯ ಕಲಾವಿದರು ಕೀರ್ತಮಂಡಲಿಯ ಕಲಾವಿದರು ಕೀರ್ತನೆಗಳನ್ನು ಹಾಡಿ

ದರೆ, ಅವುಗಳಗೆ ಅಭಿನಯದ ಮೂಲಕ ನೃತ್ಯವಾಡುತ್ತಿದ್ದರು
 

 
ಕಥಕ್ ಪದ್ಧತಿಯಲ್ಲಿ ತಾಳವೈಚಿತ್ರದ ಚಲನೆಗಳಿಗೂ, ಚಲನ ವೇಗಕ್ಕೂ,

ತೀವ್ರ ತಿರುಗುವಿಕೆಗೂ ಹೆಚ್ಚಾದ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಹಿಂದೂಸ್ಥಾನಿ

ಸಂಗೀತದ ಯಾವುದಾದರೂ ಒಂದು ತಾಳಕ್ಕೆ ತಬಲ ಅಥವಾ ಪಕ್ವವಾಜ್ ನುಡಿಸುವ

ವಿವಿಧ ತಾಳವೈಚಿತ್ರಗಳಿಗೆ ಅನುಸಾರವಾಗಿ ನೃತ್ಯಗಾರನು ಪಾದ ಮತ್ತು ಹಸ್ತ

ಚಲನೆಗಳನ್ನು ಮಾಡಬೇಕಾಗುತ್ತದೆ. ಈ ನೃತ್ಯದ ಶಾಸ್ತ್ರೀಯ ನಾಟ್ಯಾಚಾರ್ಯರು
 
೧೩೨