This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
'
ಕರ್ಣಾಟಕ ಸಾರಂಗ-
ಈ ರಾಗವು ೧೫ನೆಯ ಮೇಳಕರ್ತ ಮಾಯಾ
 

ಮಾಳವಗೌಳದ ಒಂದು ಜನ್ಯರಾಗ,
 

ಸ ರಿ ಗ ಮ ಪ ದ ನಿ ಸ
ಸ ದ ಮ ಪ ಮ ಗ ರಿ ಸ
 
೧೩೧
 

ಸ ದ ಮ ಪ ಮ ಗ ರಿ ಸ
ಶಾರಂಗಪಾಣಿಯು ರಚಿಸಿರುವ ( ಚೆಪ್ಪಿನಂತ ಮಾಟ " ಎಂಬ ತ್ರಿಪುಟತಾಳದ ಪದವು

ಈ ರಾಗದಲ್ಲಿದೆ.
 

 
ಕರ್ಣಾಟಕ ಸುರಟ
ಈ ರಾಗವು ೪ನೆಯ ಮೇಳಕರ್ತ ವನಸ್ಪತಿಯ

ಒಂದು ಜನ್ಯರಾಗ.
 

ಆ .
 
ಸ ರಿ ಗ ಮ ಪ ದ ಸ
ಅ.
 
ಸ ರಿ ಗ ಮ ಪ ದ ಸ
 
ಸ ನಿ ದ ಪ ಮ ರಿ ಸ
 

 
ಕರ್ಣಾಟಕ ಸಂಗೀತ ಪಿತಾಮಹ-
ಹರಿದಾಸ ಶ್ರೇಷ್ಠರಾದ ಪುರಂದರ

ದಾಸರಿಗೆ (೧೪೮೪-೧೫೬೫) ಸಂದಿರುವ ಬಿರುದು. ಅವರು ಕರ್ಣಾಟಕ ಸಂಗೀತಕ್ಕೆ

ವೈಜ್ಞಾನಿಕ ತಳಹದಿ ಹಾಕಿ ಅದು ವಿಪುಲವಾಗಿ ಬೆಳೆಯಲು ಕಾರಣರಾದರು.
 

 
ಕರ್ಣಾಟಕ ಲಘು-
ಇದು ೧೬ ಅಕ್ಷರಕಾಲವಿರುವ ಒಂದು ಲಘು. ಒಂದು

ಘಾತ ಮತ್ತು ೧೫ ಬೆರಳೆಣಿಕೆಯಿಂದ ಇದನ್ನು ಲೆಕ್ಕ ಮಾಡಲಾಗುತ್ತದೆ. ಇದಕ್ಕೆ

ದೇಶ್ಯ ಶುದ್ಧ ಸಂಕೀರ್ಣಲಘುವೆಂದು ಹೆಸರು.
 

 
ಕತ್ತರಿಮಿಟು-
ತಂತೀವಾದ್ಯವನ್ನು ನುಡಿಸುವ ವಿಧಾನಕ್ಕೆ ಮಾಟು ಎಂದು

ಹೆಸರು. ತಂತಿಗಳನ್ನು ಮಾಟುವ ವಿಧಾನವು ೨೩ ಬಗೆಯಾಗಿದೆ. ಇದು ವೀಣೆಗೆ

ಸಂಬಂಧಿಸಿದ ಮಾತು ತರ್ಜನಿ ಬೆರಳು ಮತ್ತು ಮಧ್ಯದ ಬೆರಳಿನಿಂದ ಒಂದರನಂತರ

ಇನ್ನೊಂದರಿಂದ ಮಾಟ ಕಂಪನ ಉಂಟುಮಾಡುವ ವಿಧಾನಕ್ಕೆ ಕತ್ತರಿಮಿಾಟು ಎಂದು
 

 
ಹೆಸರು.
 

 
ಕತ್ತಿರಿ -
ಇದೊಂದು ಬಗೆಯ ಮದ್ದಳೆ.
 

 
ಕರ್ತರೀ-
ಭರತನಾಟ್ಯದ ಉತ್ಪ್ಲವನ ಭೇದಗಳಲ್ಲಿ ಒಂದುವಿಧ. ಮುಂಗಾಲಿನ

ಬೆರಳುಗಳ ಮೇಲೆ ಕುಪ್ಪಳಿಸುತ್ತಾ ಎಡಗಾಲಿನ ಹಿಂದುಗಡೆ ಕರ್ತರೀ ಮುಖ ಹಸ್ತ

ವನ್ನೂ, ಸೊಂಟದ ಮೇಲೆ ಕೆಳಮುಖವಾಗಿ ಶಿಖರಹಸ್ತವನ್ನೂ ಪ್ರದರ್ಶಿಸುವುದು

ಕರ್ತರೀ ಉತ್ಪವನವೆನಿಸುವುದು.
 

 
ಕರ್ತರೀಮುಖಹಸ್ತ-
ಭರತನಾಟ್ಯದ ಅಸಂಯುತ ಹಸ್ತಭೇದಗಳಲ್ಲಿ ಒಂದು

ವಿಧ. ಅರ್ಧಪತಾಕಹಸ್ತದಲ್ಲಿನ ಕಿರುಬೆರಳನ್ನು ಚಾಚಿ ತರ್ಜನೀ ಮಧ್ಯಮಗಳನ್ನು

ಕತ್ತರಿಯ ಬಾಯನೆ ಅಗಲಿಸುವುದಕ್ಕೆ ಕರ್ತರೀ ಮುಖವೆಂದು ಹೆಸರು.

ಪುರುಷರ ಅಗಲಿಕೆ, ವಿಪರ್ಯಾಸ, ಲೂಟಿ, ಕಡೆಗಣ್ಣನೋಟ, ಸಾವು, ಭೇದಭಾವ,

ಮಿಂಚು, ಏಕಶಯ್ಯ, ವಿರಹ, ಪತನ, ಬಳ್ಳಿ ಇವುಗಳನ್ನು ಸೂಚಿಸುವುದೇ ಈ ಹಸ್ತ

ಲಕ್ಷಣ.